ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಬಳಿಕ ಕರ್ನಾಟಕದಿಂದ ಅಯೋಧ್ಯೆಗೆ ರೈಲು ಆರಂಭ ಮಾಡಲು ನೈರುತ್ಯ ರೈಲ್ವೆ ವಲಯ ತೀರ್ಮಾನಿಸಿದೆ. ಇದರ ವೇಳಾ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ. ಈ ಬಗ್ಗೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ.ಯಮುನೇಶ್, ಕಾರ್ಯದರ್ಶಿ ಕೆ.ಕೆ.ಮಹೇಶ್ ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲು ಕರ್ನಾಟಕದಿಂದ ಜನವರಿ 31 ರಿಂದ ಆರಂಭವಾಗಲಿದೆ. ಒಟ್ಟು 11 ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಲಯ ತೀರ್ಮಾನ ಮಾಡಿದೆ. ಯಾವ ದಿನ ಎಲ್ಲಿಂದ ರೈಲು ಪ್ರಾರಂಭವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.....

ವಿಶೇಷ ರೈಲುಗಳ ವಿವರ
* ಜ.31, ಫೆ.14, ಮತ್ತು 28ರಂದು ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ನಿಲ್ದಾಣದಿಂದ ಹೊರಡಲಿರುವ ವಿಶೇಷ ರೈಲು ಅರಸೀಕೆರೆ, ರಾಯದುರ್ಗ, ಹೊಸಪೇಟೆ (ಮಧ್ಯಾಹ್ನ 3ಕ್ಕೆ), ಗದಗ, ವಿಜಯಪುರ ಮಾರ್ಗವಾಗಿ ಅಯೋಧ್ಯೆ ಧಾಮ ತಲುಪಲಿದೆ.
* ಫೆ.04, 17, 18 ರಂದು ಮೈಸೂರಿನಿಂದ ಹೊರಡಲಿರುವ ರೈಲು ಬೆಂಗಳೂರು, ಅರಸಿಕೆರೆ, ಹೊಸಪೇಟೆ ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಫೆ.07 ಮತ್ತು 21 ರಂದು ತುಮಕೂರಿನಿಂದ ಹಾಗೂ ಫೆ.11 ಮತ್ತು 21 ರಂದು ಚಿತ್ರದುರ್ಗದಿಂದ ಹೊಸಪೇಟೆ ಮಾರ್ಗವಾಗಿ ವಿಶೇಷ ರೈಲುಗಳು ಸಂಚರಿಸಲಿವೆ.
* ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಯಿಂದ ಫೆ.17ರಂದು ಸಂಜೆ 4.40ಕ್ಕೆ ಹೊಸಪೇಟೆಗೆ ಆಗಮಿಸುವ ರೈಲು ಬಳ್ಳಾರಿ, ರಾಯಚೂರು ಮಾರ್ಗವಾಗಿ ಅಯೋಧ್ಯೆ ತಲುಪಲಿದೆ. ಈ 11 ರೈಲುಗಳು, ಕರ್ನಾಟಕದಿಂದ ಅಯೋಧ್ಯಗೆ ಮತ್ತು ಅಯೋಧ್ಯೆಯಿಂದ ಮರಳಿ ಅದೇ ನಿಲ್ದಾಣಗಳಿಗೆ ಹಿಂದಿರುಗಲಿವೆ ಎಂದು ವೈ.ಯಮುನೇಶ್, ಕಾರ್ಯದರ್ಶಿ ಕೆ.ಕೆ.ಮಹೇಶ್ ತಿಳಿಸಿದ್ದಾರೆ.
ಅಯೋಧ್ಯೆಗೆ ವಿಶೇಷ ರೈಲು
ಇನ್ನು ಕರ್ನಾಟಕವು ಫೆಬ್ರವರಿಯಿಂದ ಅಯೋಧ್ಯೆಗೆ 11 ವಿಶೇಷ ರೈಲುಗಳನ್ನು ಪಡೆಯುವ ಸಾಧ್ಯತೆಯಿದೆ. ಈ ಪೈಕಿ ಮೂರು ರೈಲುಗಳು ಬೆಂಗಳೂರಿನಿಂದ, ತಲಾ ಎರಡು ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಿಂದ ಹೊರಡಲಿವೆ. ಶಿವಮೊಗ್ಗ ಮತ್ತು ಬೆಳಗಾವಿಯಿಂದ ತಲಾ ಒಂದು ರೈಲು ಹೊರಡಲಿದೆ ಎಂದು ನೈಋತ್ಯ ರೈಲ್ವೆಯ ಮೂಲ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ರೈಲುಗಳನ್ನು ಐಆರ್‌ಸಿಟಿಸಿ ನಿರ್ವಹಣೆ ಮಾಡುತ್ತದೆ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬೇಕು. ಇವು ಸಾಮಾನ್ಯ ರೈಲುಗಳಾಗಿರುವುದಿಲ್ಲ. ಕೌಂಟರ್‌ನಲ್ಲಿ ಯಾವುದೇ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ. ಹಾಗೆಯೇ ಯಾವುದೇ ಕೊನೆಯ ನಿಮಿಷದ ಬುಕಿಂಗ್ ಕೂಡಾ ಅವಕಾಶವಿಲ್ಲ ಎಂದು ವರದಿ ಉಲ್ಲೇಖಿಸಿದೆ.


Click it and Unblock the Notifications