ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) 2025ರ ವೇಳೆಗೆ ರಾಜ್ಯದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ. ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೆಚ್ಚು ಬಂಡವಾಳವನ್ನು ಆಕರ್ಷಿಸಲಿದೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಮಂಗಳವಾರ ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ಕರ್ನಾಟಕವು 150 ಬಿಲಿಯನ್ ಅಮೆರಿಕನ್ ಡಾಲರ್ ಗುರಿ ತಲುಪುವುದಕ್ಕೆ, ಜತೆಗೆ 2025ರ ಹೊತ್ತಿಗೆ 300 ಬಿಲಿಯನ್ ಯುಎಸ್ ಡಿ ಆಗುವಲ್ಲಿ KDEM ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಅಂದಹಾಗೆ ಐ.ಟಿ.- ಬಿ.ಟಿ. ಇಲಾಖೆಯ ಹೊಣೆ ಕೂಡ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರದೇ ಆಗಿದೆ.
KDEM ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಜಿಎಸ್ ಡಿಪಿಗೆ (ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್) ಡಿಜಿಟಲ್ ಎಕಾನಮಿಯ ಕೊಡುಗೆ 30% ತಲುಪಿಸಬೇಕು ಮತ್ತು "ಬಿಯಾಂಡ್ ಬೆಂಗಳೂರು" ಆರಂಭಿಸುವುದರಿಂದ ಈ ಗುರಿಯನ್ನು ತಲುಪಿಸುವಲ್ಲಿ ಸಹಾಯ ಮಾಡುತ್ತದೆ ಎಂದಿದ್ದಾರೆ.

ಕುಗ್ರಾಮಗಳಾಲ್ಲೂ ಸಂಪರ್ಕ ಉತ್ತಮಗೊಳಿದುವತ್ತ ಸರ್ಕಾರ ಗಮನ ಹರಿಸಿದೆ. ಇಪ್ಪತ್ನಾಲ್ಕು ಗಂಟೆ ವಿದ್ಯುತ್ ಒದಗಿಸುವುದು, ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಗ್ರಾಮ- ನಗರ ಎಂಬ ಭೇದವನ್ನು ಕಡಿಮೆ ಮಾಡಿ, ಡಿಜಿಟಲ್ ಆರ್ಥಿಕತೆ ಬಲಪಡಿಸಲಾಗುವುದು ಎಂದು ಹೇಳಿದ್ದಾರೆ.
KDEM ಹೆಚ್ಚು ಉದ್ಯಮಸ್ನೇಹಿ ಆಗಬೇಕು ಎಂದು ಸರ್ಕಾರ ಬಯಸಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಕೈಗಾರಿಕೆ ಒಕ್ಕೂಟಗಳಿಗೆ 51% ಪಾಲಿಗೆ ಅವಕಾಶ ನೀಡಲಾಗಿದೆ. 49% ತನ್ನ ಬಳಿ ಇರಿಸಿಕೊಂಡಿದೆ. ಸರ್ಕಾರವು ತನ್ನ ಬಳಿ ಅಧಿಕಾರ ಇಟ್ಟುಕೊಳ್ಳುವ ಬದಲಿಗೆ ಅನುಕೂಲ ಮಾಡಿಕೊಡುವ ಸ್ಥಾನ ನಿರ್ವಹಿಸುವುದಕ್ಕೆ ಮುಂದಾಗಿದೆ ಎಂದಿದ್ದಾರೆ.


Click it and Unblock the Notifications