For Quick Alerts
ALLOW NOTIFICATIONS  
For Daily Alerts

ಟಾಪ್ 100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ಕೂ ಸಹ-ಸಂಸ್ಥಾಪಕ

|

ಅಂತರರಾಷ್ಟ್ರೀಯ ಲಾಭರಹಿತ ಪತ್ರಿಕೋದ್ಯಮ ಸಂಸ್ಥೆಯಾದ ರೆಸ್ಟ್ ಆಫ್ ದಿ ವರ್ಲ್ಡ್ (RoW) ನಿಂದ ಕೂ ಅಪ್ಲಿಕೇಶನ್ ಸಹ-ಸಂಸ್ಥಾಪಕ ಮತ್ತು ಸಿಇಓ ಅಪ್ರಮಯ ರಾಧಾಕೃಷ್ಣ ಅವರು ಟಾಪ್ 100 ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ನಾಯಕರಲ್ಲಿ ಗುರುತಿಸಿಕೊಂಡಿದ್ದಾರೆ.

 

ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಯನ್ನು ಸಕ್ರಿಯಗೊಳಿಸುವ ಕೂ ವೇದಿಕೆಯ ಮೌಲ್ಯಯುತವಾದ ಪ್ರತಿಪಾದನೆ ಲಕ್ಷಾಂತರ ಜನಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತ, ನೈಜ ಜಾಗತಿಕ ಸಮಸ್ಯೆಯನ್ನು ಪರಿಹರಿಸುವ ನವೀನ ಆವಿಷ್ಕಾರವೆಂದು ಗುರುತಿಸಲ್ಪಟ್ಟಿದೆ. ಕೂ ವೇದಿಕೆಯ ಸಹ ಸಂಸ್ಥಾಪಕ ಮತ್ತು ಸಿಇಓ ಅಪ್ರಮೇಯ ರಾಧಾಕೃಷ್ಣ ಅವರು ಅನನ್ಯ ಸವಾಲುಗಳನ್ನು ಜಯಿಸುತ್ತಾ ಸಮುದಾಯಕ್ಕಾಗಿ ಉತ್ತಮ ಉತ್ಪನ್ನಗಳನ್ನು ನಿರ್ಮಿಸುತ್ತಿರುವ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ RoW ನಿಂದ ಗುರುತಿಸಲ್ಪಟ್ಟಿದ್ದಾರೆ.

ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ಸಮಯ ಕಳೆಯುವಂತೆ ಪ್ರೋತ್ಸಾಹಿಸುತ್ತಿದೆ 'ಕೂ'

ಕೇವಲ 10 ಪ್ರತಿಶತದಷ್ಟು ಜನರು ಇಂಗ್ಲೀಷ್ ಮಾತಾಡುವ ಈ ದೇಶದಲ್ಲಿ ತಮ್ಮ ಸ್ಥಳೀಯ ಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು, ಅನ್ವೇಷಿಸಲು ಮತ್ತು ತಮ್ಮ ಸ್ಥಳೀಯ ಭಾಷೆಗಳ ಸಮುದಾಯಗಳ ಜೊತೆ ಸಂಹವನ ನಡೆಸಲಿಕ್ಕಾಗಿ ಭಾರತದಲ್ಲಿ ಇಂಟರ್ನೆಟ್ ಬಳಕೆದಾರರನ್ನು ಸಶಕ್ತಗೊಳಿಸಲು ಕೂ ವೇದಿಕೆಯನ್ನು ನಿರ್ಮಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳ ಹೊರಗಿನ ಡೈನಮಿಕ್ ಉದ್ಯಮಿಗಳು, ನವೋದ್ಯಮಿಗಳು ಮತ್ತು ಹೂಡಿಕೆದಾರರು ಹಾಗೂ ಅವರ ಜಾಗತಿಕ ಸಮುದಾಯಗಳನ್ನು ಬದಲಾಯಿಸುವ ಅತ್ಯುತ್ತಮ ಕೊಡುಗೆಗಳನ್ನು ತಿಳಿಸುವ ರಾಯಭಾರಿಯಾದ RoW100: ಗ್ಲೋಬಲ್ ಟೆಕ್ಸ್ ಚೇಂಜ್ ಮೇಕರ್ಸ್'ನ "ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮ" ವಿಭಾಗದಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಉದ್ಯಮಿ ಕೂ ವೇದಿಕೆಯ ಅಪ್ರಮೇಯ ರಾಧಾಕೃಷ್ಣ.

ಟಾಪ್ 100 ಜಾಗತಿಕ ತಂತ್ರಜ್ಞಾನ ನಾಯಕರ ಪಟ್ಟಿಯಲ್ಲಿ ಕೂ ಸಹ-ಸಂಸ್ಥಾಪಕ

100 ಗ್ಲೋಬಲ್ ಟೆಕ್‌ನ ಚೇಂಜ್‌ಮೇಕರ್

ಅಪ್ರಮೇಯ ರಾಧಾಕೃಷ್ಣ, ಕೂ ಸಹ-ಸಂಸ್ಥಾಪಕ ಮತ್ತು ಸಿಇಒ, ಮಾತನಾಡಿ, "ನಾವು ರೋಡಬ್ಲ್ಯೂ 100: ಗ್ಲೋಬಲ್ ಟೆಕ್‌ನ ಚೇಂಜ್‌ಮೇಕರ್‌ಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲು ಉತ್ಸುಕರಾಗಿದ್ದೇವೆ ಮತ್ತು ಈ ಗೌರವಕ್ಕೆ ಸಂತಸವಾಗುತ್ತಿದೆ. ಇದು ಜಾಗತಿಕ ಮಟ್ಟದ ಅತ್ಯಂತ ಸಮೃದ್ಧ ಉದ್ಯಮಿಗಳು ಮತ್ತು ದಾರ್ಶನಿಕರನ್ನು ಒಳಗೊಂಡಿದ್ದು, ಅವರು ಅನನ್ಯ, ಅದ್ಭುತ ಆವಿಷ್ಕಾರಗಳ ಮೂಲಕ ಲಕ್ಷಾಂತರ ಜನರ ಜೀವನವನ್ನು ರೂಪಿಸುತ್ತಿದ್ದಾರೆ. ರೆಸ್ಟ್ ಆಫ್ ವರ್ಲ್ಡ್ ನಂತಹ ಪ್ರತಿಷ್ಠಿತ ಸಂಸ್ಥೆಯಿಂದ ಗುರುತಿಸಲ್ಪಟ್ಟಿರುವುದು ನಮಗೆ ನಿಜಕ್ಕೂ ಹೆಮ್ಮೆ ತಂದಿದೆ," ಎಂದು ಹೇಳಿದ್ದಾರೆ.

 

ಕ್ರಿಪ್ಟೋಕರೆನ್ಸಿ ಖರೀದಿ ಆಯ್ಕೆ ನಿಷ್ಕ್ರಿಯಗೊಳಿಸಿದ ಕಾಯಿನ್ ಸ್ವಿಚ್

"ನಾವು ಈವರೆಗೂ ಅಂತರವನ್ನು ಕಾಯ್ದುಕೊಂಡಿದ್ದ ಭಾಷಾ-ಆಧಾರಿತ ಮೈಕ್ರೋ-ಬ್ಲಾಗಿಂಗ್‌ನಲ್ಲಿ ಉತ್ತಮವಾದ ಮತ್ತು ಪ್ರೀತಿಯಿಂದ ತೊಡಗಿಸಿಕೊಳ್ಳಬಹುದಾದ ಬಹು-ಭಾಷಾ ಅನುಭವವನ್ನು ನೀಡುವ ವೇದಿಕೆಯೊಂದನ್ನು ನಿರ್ಮಿಸಿದ್ದೇವೆ. ಸ್ಥಳೀಯ ಭಾಷೆಗಳಲ್ಲಿ ಸ್ವಯಂ ಅಭಿವ್ಯಕ್ತಿಯ ಅಗತ್ಯವು ಭಾರತಕ್ಕೆ ವಿಶಿಷ್ಟವಷ್ಟೇ ಅಲ್ಲ ಜಾಗತಿಕ ಸವಾಲಾಗಿದೆ, ಏಕೆಂದರೆ ಪ್ರಪಂಚದಾದ್ಯಂತ ಜನರು 80% ಇಂಗ್ಲಿಷ್ ಹೊರತುಪಡಿಸಿ ಬೇರೆ ಭಾಷೆಯನ್ನೇ ಮಾತನಾಡುತ್ತಾರೆ.

ನಮ್ಮ ಈ ಆವಿಷ್ಕಾರವು ಜಾಗತಿಕವಾಗಿ ಉನ್ನತ ಸ್ಥಾನ ಕಾಯ್ದುಕೊಂಡಿದ್ದು ಜಾಗತಿಕ ಮಾರುಕಟ್ಟೆಗಳಿಗೆ ಸಂಬಂಧಿಸಿದ ಉತ್ಕೃಷ್ಟ ಮೌಲ್ಯವನ್ನು ಹೊಂದಿದೆ. ಮುಕ್ತ ಅಂತರ್ಜಾಲದಲ್ಲಿ ಭಾಷೆಯ ವಿಭಜನೆಯನ್ನು ಕಡಿಮೆ ಮಾಡಲು, ಭಾಷಾ ಸಂಸ್ಕೃತಿಗಳಾದ್ಯಂತ ಜನರನ್ನು ಸಂಪರ್ಕಿಸಲು ಮತ್ತು ಭಾರತದಲ್ಲಿ ನಿರ್ಮಿಸಲಾದ ನಮ್ಮ ಉತ್ಪನ್ನವನ್ನು ಪ್ರಪಂಚದ ಇತರ ಭಾಗಗಳಿಗೂ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಗಮನಹರಿಸಿದ್ದೇವೆ," ಎಂದು ತಿಳಿಸಿದ್ದಾರೆ.

ಕೂ ಬಗ್ಗೆ ಮಾಹಿತಿ

ಕೂ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಭಾಷಾ ಆಧಾರಿತ ಮೈಕ್ರೋ-ಬ್ಲಾಗಿಂಗ್‌ನ ಆವಿಷ್ಕಾರಕವಾಗಿದ್ದು ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ - ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ. ಕೂ ನಲ್ಲಿನ ನವೀನ ವೈಶಿಷ್ಟ್ಯಗಳಲ್ಲಿ, ವೇದಿಕೆಯ ಅನುವಾದ ವೈಶಿಷ್ಟ್ಯವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭಕ್ಕೆ ಧಕ್ಕೆ ಬಾರದಂತೆ ಮೂಲ ಅರ್ಥವನ್ನು ಉಳಿಸಿಕೊಂಡು ಭಾರತೀಯ ಭಾಷೆಗಳಾದ್ಯಂತ ಪೋಸ್ಟ್‌ನ ನೈಜ-ಸಮಯದ ಅನುವಾದಕ್ಕೆ ಅನುಕೂಲಕರವಾಗಿದೆ. ಇದು ಭಾಷೆಗಳಾದ್ಯಂತ ಜನರ ತಲುಪುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಆಕರ್ಷಣೆಯನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ 30 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದಿದೆ, ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ 7000 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಾಷೆಯಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯಾಗಿದೆ.

English summary

Koo’s co-founder Aprameya Radhakrishna among top 100 global tech changemakers

Koo’s co-founder Aprameya Radhakrishna among top 100 global tech changemakers.
Story first published: Friday, May 13, 2022, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X