ಎಲ್‌ಐಸಿ ಐಪಿಒ ಮೇ 4ರಂದು ಆರಂಭವಾಗಿದೆ. ಈ ದಿನವೇ ಆರ್‌ಬಿಐ ರೆಪೋ ದರವನ್ನು ಏರಿಕೆ ಕೂಡಾ ಮಾಡಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎಲ್‌ಐಸಿ ಐಪಿಒ ನಡುವೆ ರೆಪೋ ದರ ಏರಿಕೆಯ ಬಗ್ಗೆ ಮೀಮ್ಸ್‌ಗಳು ಹರಿದಾಡುತ್ತಿದೆ. ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿಗೆ ಕಟ್ಟಪ್ಪ ಮಾಡಿದ ಮಿತ್ರದ್ರೋಹಕ್ಕೆ ಈ ಬೆಳವಣಿಗೆಯನ್ನು ಹೋಲಿಕೆ ಮಾಡಲಾಗಿದೆ.
ಕೇಂದ್ರ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದ ಬೆನ್ನಲ್ಲೇ ಗ್ರೇ ಮಾರ್ಕೆಟ್ ಪಾತಾಳಕ್ಕೆ ಕುಸಿದಿದೆ. ಆರ್‌ಬಿಐ ರೆಪೋ ದರದಲ್ಲಿ 40 ಮೂಲಾಂಕವನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ರೆಪೋ ದರವು ಶೇಕಡ 4ರಿಂದ ಶೇಕಡ 4.40ಗೆ ಏರಿಕೆ ಕಂಡಿದೆ. ಸೆಂಟ್ರಲ್ ಬ್ಯಾಂಕ್ ನಗದು ಮೀಸಲು ಅನುಪಾತವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ.
ಈ ಎಲ್ಲಾ ಬೆಳವಣಿಗೆಯು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನವನ್ನು ಸೆಳೆದಿದೆ. ನೆಟ್ಟಿಗರು ಮೀಮ್ಸ್‌ಗಳ ಮೂಲಕ ಎಲ್‌ಐಸಿ ಐಪಿಒ ನಡುವೆ ಆರ್‌ಬಿಐ ರೆಪೋ ದರ ಏರಿಕೆ ಮಾಡಿದ್ದನ್ನು ಟೀಕೆ ಮಾಡುತ್ತಿದ್ದಾರೆ. ಮೀಮ್ಸ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅನ್ನು ಕಟ್ಟಪ್ಪ ಎಂದು ಹಾಗೂ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒ ಅನ್ನು ಬಾಹುಬಲಿ ಎಂದು ತೋರಿಸಲಾಗಿದೆ. ಕಟ್ಟಪ್ಪ ಬಾಹುಬಲಿಗೆ ಮಿತ್ರದ್ರೋಹ ಮಾಡಿದ್ದಾನೆ ಎಂದು ಮೀಮ್ಸ್ ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿ ಕಂಡ ಮೀಮ್ಸ್, ಟ್ವೀಟ್‌ಗಳನ್ನು ನೋಡಿ!
"ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡಿದ್ದು, ಈಗ ದೊಡ್ಡ ವಿಚಾರವಲ್ಲ, ಆದರೆ ಎಲ್‌ಐಸಿ ಐಪಿಒ ದಿನವೇ ಆರ್‌ಬಿಐ ತರಾತುರಿಯಲ್ಲಿ ರೆಪೋ ದರವನ್ನು ಏರಿಕೆ ಮಾಡಿದ್ದು ಪ್ರಮುಖ ವಿಚಾರವಾಗಿದೆ," ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಇನ್ನು ಕೆಲವರು ಆರ್‌ಬಿಐ ಅನ್ನು ರಜನಿಕಾಂತ್ ಎಂಬಂತೆ ಪೋಸ್ಟ್‌ಗಳನ್ನು ಮಾಡಿದ್ದಾರೆ. ನಿಮ್ಮ ಬುಡವನ್ನೇ ಅಲುಗಾಡಿಸಲಿಲ್ಲವೇ ಎಂದು ಕೇಳುವಂತೆ ಉಲ್ಲೇಖಿಸಿ ಮೀಮ್ಸ್‌ಗಳನ್ನು ಮಾಡಿದ್ದಾರೆ. "ಇನ್ನೋರ್ವ ಟ್ವಿಟ್ಟಿಗರು, "ಇಂದು ಬೆಳಿಗ್ಗೆ ನಾನು ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಿದೆ. ಆದರೆ ಮಧ್ಯಾಹ್ನದ ಒಳಗೆ ಅರ್ಜಿಯನ್ನು ಹಿಂದಕ್ಕೆ ಪಡೆದೆ. ಅದಕ್ಕೆ ಕಾರಣ ಆರ್‌ಬಿಐ ರೆಪೋ ದರ ಏರಿಕೆ ಮಾಡಿರುವುದು," ಎಂದು ಹೇಳಿದ್ದಾರೆ.
ಆರ್‌ಬಿಐ ರೆಪೋ ದರ ಏರಿಕೆ ಮಾಡುತ್ತಿದ್ದಂತೆ ಎಲ್‌ಐಸಿಯು ಆರ್‌ಬಿಐ ಬಳಿ, "ಅಣ್ಣ ನೀನು ಏನು ಮಾಡುತ್ತಿದ್ದೀಯಾ," ಎಂದು ಪ್ರಶ್ನೆ ಕೇಳುತ್ತಿರುವ ಟ್ವೀಟ್ ಕೂಡಾ ಮಾಡಲಾಗಿದೆ. ಆರ್‌ಬಿಐ ಗವರ್ನರ್ ರೆಪೋ ದರ ಏರಿಕೆ ಘೋಷಣೆ ಮಾಡಿದ ಬಳಿಕ ನಡೆದ ಬೆಳವಣಿಗೆಗಳನ್ನು ನೋಡಿ, "ನಾನು ಏನು ಮಾಡಿದೆ," ಎಂದು ಚಿಂತೆ ಮಾಡುವಂತಹ ಮೀಮ್ಸ್‌ಗಳನ್ನು ಕೂಡಾ ಮಾಡಲಾಗಿದೆ.


Click it and Unblock the Notifications