For Quick Alerts
ALLOW NOTIFICATIONS  
For Daily Alerts

LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ

ಭಾರತೀಯ ಜೀವ ವಿಮಾ ನಿಗಮವು 'LIC ಜೀವನ್ ಲಕ್ಷ್ಯ' ಯೋಜನೆಯ ಪ್ರಯೋಜನವನ್ನು ನೀಡುತ್ತಿದೆ. ಈ ಯೋಜನೆ ವ್ಯಾಪ್ತಿಗೆ ಬರುವವರು ಹಣಕಾಸಿನ ಗುರಿಗಳನ್ನು ಸರಳವಾಗಿ ಸಾಧಿಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.

|

ಬೆಂಗಳೂರು, ಫೆಬ್ರುವರಿ 01: ಪಾಲಿಸಿದಾರರಿಗೆ ಹಣಕಾಸಿನ ರಕ್ಷಣೆ, ಆರ್ಥಿಕ ಗುರಿ ತಲುಪಲು ನೆರವಾಗುವಂತೆ ಭಾರತೀಯ ಜೀವಾ ವಿಮಾ ನಿಗಮವು 'LIC ಜೀವನ್ ಲಕ್ಷ್ಯ' ಯೋಜನೆಯ ಪ್ರಯೋಜವನ್ನು ನೀಡುತ್ತಿದೆ. ಈ ಯೋಜನೆ ವ್ಯಾಪ್ತಿಗೆ ಬರುವವರು ಹಣಕಾಸಿನ ಗುರಿಗಳನ್ನು ಸರಳವಾಗಿ ಸಾಧಿಸಬಹುದು. ಅಲ್ಲದೇ ಉಳಿತಾಯ ಮತ್ತು ಹೂಡಿಕೆ ಅವಕಾಶಗಳಿಗೂ ಇದು ನೆರವಾಗಲಿದೆ. ಎಲ್ಲಕಿಂತ ಮುಖ್ಯವಾಗಿ ಭವಿಷ್ಯದ ಆರ್ಥಿಕ ರಕ್ಷಣೆಗೆ ಈ ಯೋಜನೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ನಿಗಮ ತಿಳಿಸಿದೆ.

ಭಾರತೀಯ ಜೀವಾ ವಿಮಾ ನಿಗಮವು 'LIC ಜೀವನ್ ಲಕ್ಷ್ಯ' ಯೋಜನೆಯ ಸಂಪೂರ್ಣ ಪ್ರಯೋಜನಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಅದಾನಿ ಆಘಾತ: 2 ದಿನಗಳಲ್ಲಿ ₹18,000 ಕೋಟಿ ಕಳೆದುಕೊಂಡ LIC- ಗ್ರಾಹಕರೇ, ಎಚ್ಚರಿಕೆಯಿಂದ ಈ ವರದಿ ನೋಡಿ ಅದಾನಿ ಆಘಾತ: 2 ದಿನಗಳಲ್ಲಿ ₹18,000 ಕೋಟಿ ಕಳೆದುಕೊಂಡ LIC- ಗ್ರಾಹಕರೇ, ಎಚ್ಚರಿಕೆಯಿಂದ ಈ ವರದಿ ನೋಡಿ

LIC ಜೀವನ್ ಲಕ್ಷ್ಯ ಪ್ರಯೋಜನಗಳು ಇವು

- ಲೈಫ್ ಕವರ್: ಈ ಯೋಜನೆ ಪಾಲಿಸಿದಾರನಾದರೆ ಅವರು ಮರಣ ಹೊಂದಿದಲ್ಲಿ ನಾಮಿನಿ ವ್ಯಕ್ತಿಯು ಬೋನಸ್‌ ಸಹಿತ LIC ಜೀವನ್ ಲಕ್ಷ್ಯ ವಿಮೆಯ ಮೊತ್ತ ಪಡೆಯುತ್ತಾನೆ. ಹೀಗಾಗಿ ಇದು ಲೈಫ್ ಕವರ್ ಆಗಿದೆ.

LIC Jeevan Lakshya: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ?

- ಮೆಚ್ಯೂರಿಟಿ ಬೆನಿಫಿಟ್: ಯೋಜನೆಯ ಪಾಲಿಸಿದಾರರು ಪಾಲಿಸಿ ಧೀರ್ಘಾವಧಿಯ ಅಂತ್ಯದವರೆಗೂ ಇದ್ದಲ್ಲಿ ಅವರು ಮೆಚ್ಯೂರಿಟಿ ಮೊತ್ತ ಪಡೆಯಲು ಅರ್ಹರಾಗುತ್ತಾರೆ. ಸಾಕಷ್ಟು ಬೋನಸ್‌ ಜೊತೆಗೆ ಅವಧಿ ಬಳಿಕ ವಿಮೆಯ ಹಣ ಹಿಂತಿರುಗುತ್ತದೆ.

- ಬೋನಸ್ ಲಭ್ಯ: ಎಲ್‌ಐಸಿ ಪಾಲಿಸಿದಾರನು ಕಾಲಕಾಲಕ್ಕೆ ವಿಮಾ ನಿಗಮ ಘೋಷಿಸುವ ರಿವರ್ಷನರಿ ಬೋನಸ್‌ಗಳಿಗೆ ಮತ್ತು ಪಾಲಿಸಿ ಅಂತ್ಯದ ಬಳಿಕ ಇಲ್ಲವೇ ವ್ಯಕ್ತಿ ಮರಣಾ ನಂತರ ಟರ್ಮಿನಲ್ ಬೋನಸ್‌ ಸ್ವೀಕರಿಸಲು ಅರ್ಹನಾಗಿರುತ್ತಾನೆ.

- ತೆರಿಗೆ ಪ್ರಯೋಜನ ಇದೆ: ಎಲ್ಐಸಿ ಜೀವನ್ ಲಕ್ಷ್ಯ ಯೋಜನೆಯು ಆರ್ಥಿಕ ರಕ್ಷಣೆ, ಲೈಫ್ ಕವರ್ ಜೊತೆಗೆ ಮುಖ್ಯವಾಗಿ ಇಂದಿನ ದಿನಮಾನಗಳಲ್ಲಿ ತೆರಿಗೆ ಪ್ರಯೋಜನ ಒದಗಿಸುತ್ತದೆ. ಆದಾಯ ತೆರಿಗೆ ಕಾಯಿದೆ 1961ರ ವಿಭಾಗದ 80ಸಿ ಹಾಗೂ 10 (10ಡಿ) ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ.

LIC Jeevan Lakshya: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ?

LIC ಜೀವನ್ ಲಕ್ಷ್ಯಕ್ಕೆ ಅರ್ಜಿ ಸಲ್ಲಿಕೆ ಹೇಗೆ?

LIC ಜೀವನ್ ಲಕ್ಷ್ಯ ಯೋಜನೆ ಪಾಲಿಸಿದಾರರಾಗಲು ನೀವು ಮೊದಲು ಹತ್ತಿರದ ಎಲ್‌ಐಸಿ ವಿಮಾ ನಿಗಮ ಶಾಖೆಗೆ ಭೇಟಿ ಕೊಡಿ. ಅಲ್ಲಿ ವಿಮಾ ಸಲಹೆಗಾರರಿಂದ ಅಗತ್ಯ ಮಾಹಿತಿ ಪಡೆದು ಅವರ ಸಲಹೆಮೇರೆಗೆ ಅರ್ಜಿ ನಮೂನೆ ಭರ್ತಿ ಮಾಡಬೇಕು. ಇಲ್ಲವೇ ಎಲ್‌ಐಸಿ ವೆಬ್‌ಸೈಟ್‌ಗೆ ಭೇಟಿ ನೀಡಿ LIC ಜೀವನ್ ಲಕ್ಷ್ಯಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ತೋರಿಸುವ ವಿಮಾ ಮೊತ್ತವನ್ನು ಆಯ್ಕೆ ಮಾಡಿ ಪ್ರೀಮಿಯಂ ಅನ್ನು ಅಲ್ಲಿಯೇ ಪಾವತಿಸಬೇಕು. ಹೀಗೆ ಮಾಡುವುದರಿಂದ ನೀವು ಈ ಯೋಜನೆ ಪಾಲಿಸಿದಾರರಾಗುತ್ತೀರಿ.

ಯೋಜನೆಗೆ ಅರ್ಹರು ಯಾರು?

ಭಾರತೀಯ ಜೀವ ವಿಮಾ ನಿಗಮದ ಈ LIC ಜೀವನ್ ಲಕ್ಷ್ಯ ಯೋಜನೆ ಪಾಲಿಸಿಯನ್ನು ಕನಿಷ್ಠ 8 ವರ್ಷ ಹಾಗೂ ಗರಿಷ್ಠ 55 ವರ್ಷ ವಯಸ್ಸಿನವರು ಮಾಡಿಸಬಹುದು. ಮುಖ್ಯವಾಗಿ ಯೋಜನೆಯ ಪಾಲಿಸಿದಾರರು ವಯಸ್ಸು ಮತ್ತು ಆಯ್ಕೆ ಮಾಡಿದ ವಿಮಾ ಮೊತ್ತವನ್ನು ಅವಲಂಬಿಸಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ನಿಗಮ ತಿಳಿಸಿದೆ.

English summary

LIC Jeevan Lakshya: Get Future Financial Protection And Maturity Benefits As Scheme Policy Holder, Know more

LIC Jeevan Lakshya: Get future financial protection and maturity benefits as scheme policyholder.
Story first published: Wednesday, February 1, 2023, 15:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X