For Quick Alerts
ALLOW NOTIFICATIONS  
For Daily Alerts

ಹೊಸ 'ವಿಟಾರ ಬ್ರಿಜಾ' ಕಾರು ಬಿಡುಗಡೆ ಮಾಡಿದ ಮಾರುತಿ ಸುಜುಕಿ

|

ದೇಶದ ಅಗ್ರಮಾನ್ಯ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಹೊಸ ವಿಟಾರ ಬ್ರಿಜಾ ಕಾರು ಬಿಡುಗಡೆ ಮಾಡಿದೆ. ಆಟೋ ಎಕ್ಸ್ಪೋ 2020 ನಲ್ಲಿ 2 ನೇ ದಿನದಂದು ಈ ಹೊಸ ಪೆಟ್ರೋಲ್ ಎಂಜಿನ್‌ನ ಹೊಸ ವಿಟಾರ ಬ್ರಿಜಾ ಕಾರು ಬಿಡುಗಡೆ ಮಾಡಿದೆ.

 

2016 ರಲ್ಲಿ ಪ್ರಾರಂಭವಾದ ನಂತರ ಮೊದಲ ಬಾರಿಗೆ ಮಾರುತಿ ಸುಜುಕಿ 1.5 ಲೀಟರ್ ಸ್ಮಾರ್ಟ್‌ನೊಂದಿಗೆ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಬ್ರೀಜಾ ಕಾರನ್ನು ಬಿಡುಗಡೆ ಮಾಡಿದೆ. ಕಾರಿನ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

 
ಹೊಸ 'ವಿಟಾರ ಬ್ರಿಜಾ' ಕಾರು ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ವಿಟಾರಾ ಬ್ರಿಜಾ ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ಫಾರ್ಮ್ ಫ್ಯಾಕ್ಟರ್ ಅನ್ನು ಮೊದಲು ಅಳವಡಿಸಿಕೊಂಡ ಕಾರಾಗಿದೆ. 2016 ರಲ್ಲಿ ಬ್ರಿಜಾ ಬಿಡುಗಡೆಯಾದಾಗಿನಿಂದ, ಈ ಕಾರನ್ನು ಡೀಸೆಲ್ ರೂಪಾಂತರದೊಂದಿಗೆ ಮಾತ್ರ ಮಾರಾಟ ಮಾಡಲಾಯಿತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಬಿಎಸ್-VI ನಿಯಮಾವಳಿಗೆ ಅನುಗುಣವಾಗಿ ಎಂಜಿನ್ ಮೇಲ್ದರ್ಜೆಗೇರಿಸಲು ಮಾನದಂಡಗಳ ಹಿನ್ನೆಲೆಯಲ್ಲಿ ಕಾರನ್ನು ಪೆಟ್ರೋಲ್ ಎಂಜಿನ್ ಹೊಂದಿರುವಂತೆ ರೂಪಾಂತರಗೊಳಿಸಿದೆ.

English summary

Maruti Suzuki Launched New Vitara

Maruti Suzuki launched the all-new Brezza with a 1.5-liter smart hybrid petrol engine
Story first published: Thursday, February 6, 2020, 14:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X