For Quick Alerts
ALLOW NOTIFICATIONS  
For Daily Alerts

ಆಪಲ್ ಹಿಂದಿಕ್ಕಿ ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದ ಮೈಕ್ರೋಸಾಫ್ಟ್‌

|

ಮೈಕ್ರೋಸಾಫ್ಟ್‌ ಕಂಪನಿಯು ವಿಶ್ವದ ಅತ್ಯಂತ ಅತಿ ಮೌಲ್ಯಯುತ ಉದ್ಯಮ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಆಪಲ್ ಕಂಪನಿಯ ಮಾರುಕಟ್ಟೆ ಮೌಲ್ಯ ಕುಸಿದಿರುವುದು ಹಾಗೂ ಮೈಕ್ರೋಸಾಫ್ಟ್‌ ಮಾರುಕಟ್ಟೆ ಮೌಲ್ಯ ಹೆಚ್ಚಾಗಿರುವುದರಿಂದ ಈ ಸ್ಥಾನಪಲ್ಲಟವಾಗಿದೆ.

ಮೈಕ್ರೋಸಾಫ್ಟ್‌ನ ಮಾರುಕಟ್ಟೆ ಮೌಲ್ಯವು 2.49 ಟ್ರಿಲಿಯನ್ ಡಾಲರ್‌ನಷ್ಟು ಆಗಿದೆ. ಅಂದರೆ ರೂಪಾಯಿ ಲೆಕ್ಕಾಚಾರದಲ್ಲಿ 186.49 ಲಕ್ಷ ರೂಪಾಯಿ ಕೋಟಿ ಆಗುತ್ತದೆ.

ಆಪಲ್ ಹಿಂದಿಕ್ಕಿ ಜಗತ್ತಿನ ಅತ್ಯಂತ ಮೌಲ್ಯಯುತ ಕಂಪನಿಯಾದ ಮೈಕ್ರೋಸಾಫ್ಟ್

ಒಟ್ಟಾರೆ ಈ ವರ್ಷದಲ್ಲಿ ಈ ವರ್ಷದಲ್ಲಿ ಮೈಕ್ಟೋಸಾಫ್ಟ್‌ನ ಶೇರು ಮೌಲ್ಯವು ಶೇ.49ರಷ್ಟಾಗಿದೆ. ಇನ್ನೊಂದೆಡೆ ಐಫೋನ್ ಮಾರುಕಟ್ಟೆ ಮೌಲ್ಯದಲ್ಲಿ ಶೇ.2ರಷ್ಟು ಕುಸಿತವಾಗಿದೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು 2.49 ಟ್ರಲಿಯನ್ ಡಾಲರ್‌ಗೆ ಇಳಿಕೆಯಾಗಿದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ 185.75 ಲಕ್ಷ ಕೋಟಿ ರೂ. ಆಗುತ್ತದೆ

ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ನ ಷೇರುಗಳು ಬುಧವಾರ ಭಾರಿ ಏರಿಕೆ ಕಂಡ ಹಿನ್ನೆಲೆಯಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ತೀವ್ರ ಏರಿಕೆಯಾಗಿದ್ದು, ಆಪಲ್‌ನ್ನು ಹಿಂದಿಕ್ಕಲು ಸಜ್ಜಾಗಿದೆ. ಈ ಮೂಲಕ ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿ ಎಂಬ ಹೆಗ್ಗಳಿಕೆ ಮೈಕ್ರೋಸಾಫ್ಟ್‌ ಪಾಲಾಗುವ ದಿನ ಸಮೀಪಿಸಿದೆ.

ಗುರುವಾರ ಆಪಲ್‌ ತನ್ನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಲಿದ್ದು, ಅದಕ್ಕೂ ಮೊದಲು ಈ ಮಹತ್ವದ ಬೆಳವಣಿಗೆ ನಡೆದಿದೆ.

ಮೈಕ್ರೋಸಾಫ್ಟ್‌ ಷೇರುಗಳು ಬುಧವಾರ ಶೇ. 4.2 ರಷ್ಟು ಏರಿಕೆ ಕಂಡಿದ್ದು, 323.17 ಡಾಲರ್‌ಗೆ ಏರಿಕೆಯಾಗಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಮೌಲ್ಯ 2.426 ಟ್ರಿಲಿಯನ್‌ ಡಾಲರ್‌ಗೆ ಹೆಚ್ಚಳವಾಗಿದೆ. ಸದ್ಯ ಆಪಲ್‌ನ ಮಾರುಕಟ್ಟೆ ಮೌಲ್ಯ 2.461 ಟ್ರಿಲಿಯನ್‌ ಡಾಲರ್‌ ಇದ್ದು, ಮೈಕ್ರೋಸಾಫ್ಟ್‌ ಮೌಲ್ಯ ಇದಕ್ಕಿಂತ ಅಲ್ಪ ಕಡಿಮೆ ಇದೆ.

ಮೈಕ್ರೋಸಾಫ್ಟ್‌ನ ಅಝುರ್‌ ಕ್ಲೌಡ್‌ ಕಂಪ್ಯೂಟಿಂಗ್‌ ಉದ್ಯಮ ತೀವ್ರ ಬೆಳವಣಿಗೆ ಕಂಡಿರುವ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳು ಭಾರಿ ಏರಿಕೆ ಕಂಡಿವೆ. ಇನ್ನೊಂದೆಡೆ ಚಿಪ್‌ ಕೊರತೆಯಿಂದ ಬೇಡಿಕೆಯಷ್ಟು ಮೊಬೈಲ್‌ ಉತ್ಪಾದನೆ ಆಪಲ್‌ಗೆ ಸಾಧ್ಯವಾಗದಿರಬಹುದು ಎಂಬ ಊಹೆ ಮೇಲೆ ಕಂಪನಿಯ ಷೇರುಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಬುಧವಾರ ಶೇ. 0.3ರಷ್ಟು ಇಳಿಕೆ ಕಂಡಿದೆ.

ಈ ವರ್ಷ ಮೈಕ್ರೋಸಾಫ್ಟ್‌ ಕಂಪನಿಯ ಷೇರುಗಳು ಬರೋಬ್ಬರಿ ಶೇ. 45ರಷ್ಟು ಏರಿಕೆ ಕಂಡಿವೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಂಪನಿಯ ಕ್ಲೌಡ್‌ ಆಧಾರಿತ ಸೇವೆಗಳಿಗೆ ಬೇಡಿಕೆ ಹೆಚ್ಚಾಗಿದ್ದೇ ಇದಕ್ಕೆ ಪ್ರಮುಖ ಕಾರಣಾಗಿದೆ. ಆದರೆ ಇದೇ ಅವಧಿಯಲ್ಲಿ ಆಪಲ್‌ನ ಷೇರುಗಳು ಶೇ. 12ರಷ್ಟು ಮಾತ್ರ ಏರಿಕೆ ದಾಖಲಿಸಿವೆ.

ಈ ಹಿಂದೆ 2010ರಲ್ಲಿ ಮೊದಲ ಬಾರಿಗೆ ಮೈಕ್ರೋಸಾಫ್ಟ್‌ ಮಾರುಕಟ್ಟೆ ಮೌಲ್ಯವನ್ನು ಆಪಲ್‌ ಹಿಂದಿಕ್ಕಿತ್ತು. ಈ ಮೂಲಕ ಜಗತ್ತಿನ ಪ್ರಮುಖ ಕನ್ಸೂಮರ್‌ ಟೆಕ್ನಾಲಜಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಎರಡು ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ವಾಲ್ ಸ್ಟ್ರೀಟ್‌ನ ಅತ್ಯಮೂಲ್ಯ ಕಂಪನಿಗಳಾಗಿ ಗುರುತಿಸಿಕೊಂಡಿದ್ದವು. 2020ರ ಮಧ್ಯ ಭಾಗದದಿಂದ ಆಪಲ್‌ ಮೊದಲ ಸ್ಥಾನದಲ್ಲೇ ಇತ್ತು. ಇದೀಗ ಮತ್ತೆ ಮೈಕ್ರೋಸಾಫ್ಟ್‌ ಆಪಲ್‌ನ ಕೈಯಿಂದ ಮೊದಲ ಸ್ಥಾನ ಕಿತ್ತುಕೊಳ್ಳಲು ಮುಂದಾಗಿದೆ.

ವಿಶ್ವದ ನಂ.1 ಶ್ರೀಮಂತ ಎಂಬ ಹಿರಿಮೆ ಹೊಂದಿರುವ, ಟೆಸ್ಲಾ ಸೇರಿದಂತೆ ಹಲವು ಉದ್ಯಮ ಸಮೂಹಗಳ ಮಾಲೀಕ ಅಮೆರಿಕದ ಎಲಾನ್‌ ಮಸ್ಕ್‌, ಸದ್ಯದಲ್ಲೇ 300 ಬಿಲಿಯನ್‌ ಡಾಲರ್‌ (22.50 ಲಕ್ಷ) ಆಸ್ತಿ ಕ್ಲಬ್‌ ಸೇರಿದ ವಿಶ್ವದ ಮೊದಲಿಗ ಎಂಬ ಹಿರಿಮೆಗೆ ಇದೀಗ ಪಾತ್ರವಾಗಿದೆ.

ಮಸ್ಕ್‌ ಒಡೆತನದ ಕಂಪನಿಗಳ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡ ಕಾರಣ ಅವರ ಆಸ್ತಿ ಒಂದೇ ದಿನದಲ್ಲಿ 2.70 ಲಕ್ಷ ಕೋಟಿ ರು.ನಷ್ಟುಹೆಚ್ಚಳವಾಗುವ ಮೂಲಕ 287 ಶತಕೋಟಿ ಡಾಲರ್‌ (21.50 ಲಕ್ಷ ಕೋಟಿ ರು.) ತಲುಪಿದೆ.

ಸದ್ಯ ಅಮೆರಿಕ ಷೇರುಪೇಟೆ ಭಾರೀ ಏರುಗತಿದೆ. ಏರಿಕೆ ಗತಿ ಹೀಗೆಯೇ ಮುಂದುವರೆದ ಒಂದು ಅಥವಾ ಎರಡು ದಿನಗಳಲ್ಲಿ ಎಲಾನ್‌ ಮಸ್ಕ್‌ 300 ಶತಕೋಟಿ ಡಾಲರ್‌ ಕ್ಲಬ್‌ ಸೇರುವ ಸಾಧ್ಯತೆ ನಿಚ್ಚಳವಾಗಿದೆ. ವಿಶೇಷವೆಂದರೆ ಕಳೆದ ಒಂದು ವರ್ಷದ ಅವಧಿಯಲ್ಲಿ ಮಸ್ಕ್‌ ಆಸ್ತಿಯಲ್ಲಿ 10 ಲಕ್ಷ ಕೋಟಿ ರು.ನಷ್ಟುಭಾರೀ ಏರಿಕೆ ದಾಖಲಾಗಿದೆ.

ಹಟರ್ಜ್ ಗ್ಲೋಬಲ್‌ ಹೋಲ್ಡಿಂಗ್ಸ್‌ ಐಎನ್‌ಸಿ ಟೆಸ್ಲಾದಿಂದ ಒಂದು ಲಕ್ಷ ಎಲೆಕ್ಟ್ರಾನಿಕ್‌ ವಾಹನಗಳನ್ನು ಆರ್ಡರ್‌ ಮಾಡುತ್ತಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಮಂಗಳವಾರ ಟೆಸ್ಲಾ ಕಂಪನಿಗಳ ಷೇರು ಮೌಲ್ಯ ಭಾರೀ ಏರಿಕೆ ಕಂಡಿತ್ತು.

English summary

Microsoft Overtakes Apple To Become The World’s Most Valuable Company

Microsoft surpassed Apple’s market cap on Friday to become the world’s most valuable public company. The change follows Apple’s Thursday earnings, where the company posted strong results but revealed that it lost $6 billion to supply chain constraints. On Tuesday, Microsoft also shared positive earnings boosted by Office, Windows, and its cloud products.
Story first published: Saturday, October 30, 2021, 14:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X