For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಸಿಬ್ಬಂದಿಯ ಕುಟುಂಬ ಪಿಂಚಣಿ ಸ್ಲ್ಯಾಬ್ ದರ 30%ಗೆ ಚಿಂತನೆ

By ಅನಿಲ್ ಆಚಾರ್
|

ಬ್ಯಾಂಕ್ ಸಿಬ್ಬಂದಿಯ ಕುಟುಂಬ ಪಿಂಚಣಿ ಸ್ಲ್ಯಾಬ್ ದರವನ್ನು 30 ಪರ್ಸೆಂಟ್ ಗೆ ಹೆಚ್ಚಳ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಭಾರತೀಯ ಬ್ಯಾಂಕ್ ಒಕ್ಕೂಟ ಈಚೆಗೆ (25.1.2021) ಕುಟುಂಬ ಪಿಂಚಣಿಗೆ ಶಿಫಾರಸು ಮಾಡಿತ್ತು. ಸದ್ಯಕ್ಕೆ ವಿವಿಧ ಕೆಟಗರಿ ಪಿಂಚಣಿದಾರರಿಗೆ 15, 20 ಮತ್ತು 30% ಸ್ಲ್ಯಾಬ್ ದರದಲ್ಲಿ ಪಾವತಿಸಲಾಗುತ್ತಿದೆ ಮತ್ತು ಅದಕ್ಕೆ ಗರಿಷ್ಠ ಪಿಂಚಣಿ ರು. 9284 ಮಿತಿ ಹಾಕಲಾಗಿದೆ. ಯಾವುದೇ ಮಿತಿ ಹಾಕದೆ ಎಲ್ಲ ಸಿಬ್ಬಂದಿಗೂ 30% ಕುಟುಂಬ ಪಿಂಚಣಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಅದನ್ನು ಸರ್ಕಾರ ಗಣನೆಗೆ ತೆಗೆದುಕೊಂಡಿದೆ ಎಂದು ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲಿಖಿತ ಉತ್ತರ ನೀಡಿದ್ದಾರೆ.

RBI ರೆಪೋ ದರ 4%ನಲ್ಲೇ ಮುಂದುವರಿಕೆRBI ರೆಪೋ ದರ 4%ನಲ್ಲೇ ಮುಂದುವರಿಕೆ

ನಿವೃತ್ತ ಬ್ಯಾಂಕ್ ಉದ್ಯೋಗಿಗಳ ಪಿಂಚಣಿಯನ್ನು ಮೂರು ದಶಕದಿಂದ ಪರಿಷ್ಕರಣೆ ಮಾಡಿಲ್ಲ. ಭಾರತೀಯ ಬ್ಯಾಂಕ್ ಅಸೋಸಿಯೇಷನ್ 72ನೇ ವಾರ್ಷಿಕ ಮಹಾ ಸಭೆಯಲ್ಲಿ ಪಿಂಚಣಿ ಪರಿಷ್ಕರಣೆಗೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

ಬ್ಯಾಂಕ್ ಸಿಬ್ಬಂದಿಯ ಕುಟುಂಬ ಪಿಂಚಣಿ ಸ್ಲ್ಯಾಬ್ ದರ 30%ಗೆ ಚಿಂತನೆ

ಪ್ರಶ್ನೆಗೆ ಉತ್ತರ ನೀಡಿದ ನಿರ್ಮಲಾ ಸೀತಾರಾಮನ್, ಆಯಾ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳಿಗೆ ಬ್ಯಾಂಕ್ ಗಳ ವಾಣಿಜ್ಯ ಆದಾಯದಿಂದಲೇ ಪಿಂಚಣಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

English summary

Nationalised Bank Employees Family Pension Slab Likely To Be Hiked To 30 Percent

Central government likely to consider hike in family pension slab rate of nationalised bank employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X