For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್ ಕಾರ್ಡ್ ಮೂಲಕವೇ ಮನೆ ಬಾಡಿಗೆ ಪಾವತಿಗೆ ಪೇಟಿಎಂ ಬಳಕೆದಾರರಿಗೆ ಅವಕಾಶ

By ಅನಿಲ್ ಆಚಾರ್
|

ಡಿಜಿಟಲ್ ಹಣಕಾಸು ಸೇವೆ ಪ್ಲಾಟ್ ಫಾರ್ಮ್ ಪೇಟಿಎಂ ಮಂಗಳವಾರದಂದು ಬಾಡಿಗೆ ಪಾವತಿ ಫೀಚರ್ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದೆ. ಈಗ ಬಾಡಿಗೆದಾರರು ತಿಂಗಳ ಬಾಡಿಗೆಯನ್ನು ಕ್ರೆಡಿಟ್ ಕಾರ್ಡ್ ಗಳ ಮೂಲಕ ಮನೆ ಮಾಲೀಕರ ಬ್ಯಾಂಕ್ ಖಾತೆಗೆ ತಕ್ಷಣವೇ ಪಾವತಿ ಮಾಡಬಹುದು.

ಇಂಥ ವಹಿವಾಟಿಗೆ ಕಂಪೆನಿಯಿಂದ ರು. 1000 ತನಕ ಕ್ಯಾಶ್ ಬ್ಯಾಕ್ ಕೂಡ ಘೋಷಣೆ ಮಾಡಲಾಗಿದೆ. ಪ್ರತಿ ವಹಿವಾಟಿಗೆ ಕ್ಯಾಶ್ ಬ್ಯಾಕ್ ಗಳಿಸುವುದರ ಜತೆಗೆ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಪಾಯಿಂಟ್ ಗಳು ಸಹ ದೊರೆಯುತ್ತವೆ. ಮನೆ ಮಾಲೀಕರಿಗೆ ಬಾಡಿಗೆ ಪಾವತಿಸಲು ಪೇಟಿಎಂ ಹೋಮ್ ಸ್ಕ್ರೀನ್ ನಲ್ಲಿ "ರೀ ಚಾರ್ಜ್ ಹಾಗೂ ಪೇ ಬಿಲ್ಸ್" ಸೆಕ್ಷನ್ ನಲ್ಲಿ "ರೆಂಟ್ ಪೇಮೆಂಟ್" ಆಯ್ಕೆ ಮಾಡಿಕೊಳ್ಳಬೇಕು.

ಪೇಟಿಎಂ ಮನಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಆರಂಭಪೇಟಿಎಂ ಮನಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಆರಂಭ

ಬಳಕೆದಾರರು ಬಾಡಿಗೆಯನ್ನು ಕ್ರೆಡಿಟ್ ಕಾರ್ಡ್ ನಿಂದ ಮನೆ ಮಾಲೀಕರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬಹುದು. ಯುಪಿಐ, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ನಂಥ ವ್ಯವಸ್ಥೆ ಮೂಲಕವೂ ಬಾಡಿಗೆಯನ್ನು ಪಾವತಿಸಲು ಪೇಟಿಎಂ ಅವಕಾಶ ನೀಡಿದೆ. ಮನೆ ಮಾಲೀಕರ ಬ್ಯಾಂಕ್ ಖಾತೆಯ ಮಾಹಿತಿಯನ್ನು ನಮೂದಿಸಬೇಕು.

ಕ್ರೆಡಿಟ್ ಕಾರ್ಡ್ ಮೂಲಕ ಮನೆ ಬಾಡಿಗೆ ಪಾವತಿಗೆ ಪೇಟಿಎಂ ಅವಕಾಶ

ಬಾಡಿಗೆ ಪಾವತಿಯ ಟ್ರ್ಯಾಕ್, ಪಾವತಿಯ ನೆನಪು ಮಾಡಿಕೊಡುವುದು ಮತ್ತು ಮನೆ ಮಾಲೀಕರಿಗೆ ಪಾವತಿಯಾದ ತಕ್ಷಣ ಖಾತ್ರಿ ಬರುತ್ತದೆ. "ಭಾರತದಲ್ಲಿ ಮನೆ ಬಾಡಿಗೆ ಎಂಬುದು ಅತಿ ದೊಡ್ಡ ಖರ್ಚು. ಆರಂಭವಾದ ಕೆಲವೇ ತಿಂಗಳಲ್ಲಿ ನಮ್ಮ ಬಾಡಿಗೆ ಪಾವತಿ ಫೀಚರ್ ನಿಂದಾಗಿ ಬಳಕೆದಾರರ ಬಳಿ ನಗದು ಉಳಿಯುವಂತಾಗುತ್ತದೆ. ಕ್ರೆಡಿಟ್ ಕಾರ್ಡ್ ಸೈಕಲ್ ನಲ್ಲಿ ಬಾಡಿಗೆ ಪಾವತಿಸಬಹುದು. ಬಾಡಿಗೆ ಪಾವತಿಯಲ್ಲಿ ಪೇಟಿಎಂ ಮಾರುಕಟ್ಟೆ ಮುಂಚೂಣಿಯಲ್ಲಿದೆ. 2021ರ ಮಾರ್ಚ್ ಹೊತ್ತಿಗೆ ರು. 300 ಕೋಟಿಯಷ್ಟು ಬಾಡಿಗೆ ಪ್ರೊಸೆಸ್ ಮಾಡಬಹುದು," ಎಂದು ಪೇಟಿಎಂ ಉಪಾಧ್ಯಕ್ಷ ನರೇಂದ್ರ ಯಾದವ್ ಹೇಳಿದ್ದಾರೆ.

ಕ್ರೆಡಿಟ್ ಕಾರ್ಡ್ ಬಿಲ್ ಸೇರಿದಂತೆ ಇತರ ತಿಂಗಳ ವೆಚ್ಚವನ್ನು ದೇಶದಾದ್ಯಂತ ಇರುವ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಪಾವತಿಸಲು ಪೇಟಿಎಂ ಅನುಕೂಲ ಮಾಡಿಕೊಟ್ಟಿದೆ. ಕ್ರೆಡಿಟ್ ಕಾರ್ಡ್ ಮೂಲಕವೇ ಟ್ಯೂಷನ್ ಫೀ ಸೇರಿದಂತೆ ಇತರ ವೆಚ್ಚಗಳನ್ನು ಪಾವತಿಸಲು ಪೇಟಿಎಂ ಶೀಘ್ರವೇ ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಲಾಗಿದೆ.

English summary

New feature in Paytm, now you can rent house with credit card

Paytm introduced new option to users. By this rent can be paid by credit card. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X