For Quick Alerts
ALLOW NOTIFICATIONS  
For Daily Alerts

50 ಲಕ್ಷ ಆದಾಯ ತರುವ ಗಾಲಿ ಮೇಲಿನ ರೆಸ್ಟೋರೆಂಟ್; ಸುಮ್ಮನೆ ರೈಲಲ್ಲ

|

ಭಾರತೀಯ ರೈಲ್ವೆ ಅಡಿಯಲ್ಲಿ ಬರುವ ಪೂರ್ವ ರೈಲ್ವೆ ವಲಯದ ಹೊಸ ಆಲೋಚನೆ ಮೆಚ್ಚುಗೆಗೆ ಪಾತ್ರವಾಗಿದೆ. ಅಂಥದ್ದೇನು ಮಾಡಿದ್ದಾರೆ ಅಂದರೆ, ತುಂಬ ಹಳೆಯದಾಗಿದ್ದ ಎರಡು ರೈಲ್ವೆ ಕೋಚ್ ಗಳನ್ನು ರೆಸ್ಟೋರೆಂಟ್ ಗಳಾಗಿ ಬದಲಾಯಿಸಿದ್ದಾರೆ. ಅಸನ್ಸೋಲ್ ರೈಲು ನಿಲ್ದಾಣದಲ್ಲಿ ಇವುಗಳನ್ನು ಕಣ್ಣಾರೆ ನೋಡಬಹುದು.

ಇವುಗಳೀಗ 'ಗಾಲಿಯ ಮೇಲೆ ರೆಸ್ಟೋರೆಂಟ್'. ರೈಲು ಪ್ರಯಾಣಿಕರು, ಸಾರ್ವಜನಿಕರು ಈ ರೆಸ್ಟೋರೆಂಟ್ ಗೆ ಭೇಟಿ ನೀಡಬಹುದು. ಮೆಮು ಬೋಗಿಗಳು ಬಹಳ ಹಳೆಯದಾಗಿದ್ದವು ಇವುಗಳನ್ನು ಏನು ಮಾಡಬಹುದು ಎಂದು ಆಲೋಚಿಸಿ, ಕೊನೆಗೆ ಗಾಲಿಯ ಮೇಲೆ ರೆಸ್ಟೋರೆಂಟ್ ಆಗಿ ರೂಪುಗೊಳಿಸಿದ್ದಾರೆ.

50 ಲಕ್ಷ ಆದಾಯ ತರುವ ಗಾಲಿ ಮೇಲಿನ ರೆಸ್ಟೋರೆಂಟ್; ಸುಮ್ಮನೆ ರೈಲಲ್ಲ

ಮುಂದಿನ ಐದು ವರ್ಷಗಳಲ್ಲಿ ದರದ ಹೊರತಾದ ಅದಾಯವಾಗಿ 50 ಲಕ್ಷ ರುಪಾಯಿಯನ್ನು ಇದು ಗಳಿಸಿಕೊಡಲಿದೆ ಎಂದು ಪೂರ್ವ ರೈಲ್ವೆ ವಲಯದ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು ಎರಡು ಕೋಚ್ ಅನ್ನು ರೆಸ್ಟೋರೆಂಟ್ ಆಗಿ ಮಾಡಲಾಗಿದೆ. ಒಂದರಲ್ಲಿ ಚಹಾ, ತಿಂಡಿ ದೊರೆತರೆ, ಮತ್ತೊಂದರಲ್ಲಿ ಪೂರ್ಣ ಪ್ರಮಾಣದ 42 ಸೀಟಿನ ರೆಸ್ಟೋರೆಂಟ್ ಆಗಿದೆ.

ಅಲ್ಲಿ ತಿಂಡಿ, ಮಧ್ಯಾಹ್ನ- ರಾತ್ರಿಯ ಊಟವನ್ನು ರೈಲು ಬಳಕೆದಾರರು ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತದೆ. ಇವುಗಳನ್ನು ಕೇಂದ್ರ ಸಚಿವರಾದ ಬಾಬುಲ್ ಸುಪ್ರಿಯೋ ಉದ್ಘಾಟನೆ ಮಾಡಿದ್ದಾರೆ.

English summary

Old Train Coaches Turn In to Restaurants

Indian Railway's eastern railway converted old rail coaches in to restaurants. Here is the complete details.
Story first published: Thursday, February 27, 2020, 9:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X