For Quick Alerts
ALLOW NOTIFICATIONS  
For Daily Alerts

G20 ರಾಷ್ಟ್ರಗಳೊಂದಿಗೆ 33,500 ಕೋಟಿ ರುಪಾಯಿ ಸಾಲ ಕೇಳಿದ ಪಾಕ್

|

ಕೊರೊನಾದ ಅಬ್ಬರಕ್ಕೆ ನಲುಗಿ ಹೋಗಿರುವ ಪಾಕಿಸ್ತಾನ, ಅದರಿಂದ ಆಚೆ ಬರುವ ಕಾರಣಕ್ಕೆ G20 ರಾಷ್ಟ್ರಗಳೊಂದಿಗೆ ಸಾಲ ಪರಿಹಾರ ಒಪ್ಪಂದಕ್ಕೆ ಡಿಸೆಂಬರ್ 31, 2020ರೊಳಗೆ ಪ್ರತ್ಯೇಕವಾಗಿ ಸಹಿ ಹಾಕಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಇದಕ್ಕಾಗಿ 33,500 ಕೋಟಿ ಪಾಕಿಸ್ತಾನಿ ರುಪಾಯಿ (200 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು) ಪಡೆದುಕೊಳ್ಳಲಿದೆ ಎನ್ನಲಾಗಿದೆ.

'ಹೆಲ್ಪ್' ಮಾಡಲು ಸಿದ್ಧ ಎಂದಿದ್ದ ಇಮ್ರಾನ್ ಖಾನ್ ಗೆ ಭಾರತದ ತಿರುಗೇಟು

ಜಿ20 ರಾಷ್ಟ್ರಗಳಿಂದ ಘೋಷಣೆಯಾದ ಸಾಲ ಪರಿಹಾರವನ್ನು ಪಡೆಯುವ ನಿಟ್ಟಿನಲ್ಲಿ ನಡೆಯಬೇಕಾದ ಕೆಲಸಗಳ ಪ್ರಕ್ರಿಯೆ ಸಾಗುತ್ತಿದೆ ಎಂದು ಹಣಕಾಸು ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. "ಈವರೆಗೆ ಇಪ್ಪತ್ತು ರಾಷ್ಟ್ರಗಳ ಪೈಕಿ ಹನ್ನೆರಡು ದೇಶಗಳ ಜತೆ ಸಾಲದ ಬಗ್ಗೆ ಮಾತುಕತೆ ನಡೆಸಿದ್ದೇವೆ. ಅಂತಿಮವಾಗಿ ಎಷ್ಟು ಸಾಲ ಸಿಗುತ್ತದೆ ಎಂಬ ಬಗ್ಗೆ ತಿಳಿಯುತ್ತದೆ. ಆ ನಂತರ ಪ್ರತ್ಯೇಕವಾಗಿ ಪ್ರತಿ ದೇಶದ ಜತೆಗೂ ಸಾಲ ಒಪ್ಪಂದ ಮಾಡಿಕೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.

ಸಾಲ ದೊರೆಯದಿದ್ದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟ
 

ಸಾಲ ದೊರೆಯದಿದ್ದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟ

ಈ ಸಾಲ ಪರಿಹಾರ ಒಪ್ಪಂದಕ್ಕೆ ಡಿಸೆಂಬರ್ 31, 2020 ಗಡುವಿನ ದಿನವಾಗಿದೆ. ಆದರೆ ಅದರ ಎಲ್ಲ ಪ್ರಕ್ರಿಯೆಯನ್ನು ಸೆಪ್ಟೆಂಬರ್ 30ರೊಳಗೆ ಪೂರ್ಣಗೊಳಿಸಲು ಪ್ರಯತ್ನ ನಡೆದಿದೆ. ಅಧಿಕಾರಿಗಳ ಪ್ರಕಾರ, ಪಾಕಿಸ್ತಾನಕ್ಕೆ ಈ ಎರಡು ಬಿಲಿಯನ್ ಅಮೆರಿಕನ್ ಡಾಲರ್ ಸಾಲ ದೊರೆಯದಿದ್ದಲ್ಲಿ ಪರಿಸ್ಥಿತಿ ನಿಭಾಯಿಸುವುದು ಕಷ್ಟವಾಗಲಿದೆ. ಈಚೆಗೆ ವಿದೇಶಿ ವಿನಿಮಯ ದರದ ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದ ಬಾಹ್ಯ ಪಾವತಿ ಮೇಲೆ ಪರಿಣಾಮ ಆಗಲಿದೆ.

ಚೀನಾ ಅತಿ ಹೆಚ್ಚಿನ ಸಾಲ ನೀಡಿದೆ

ಚೀನಾ ಅತಿ ಹೆಚ್ಚಿನ ಸಾಲ ನೀಡಿದೆ

ಜಿ20 ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಸಾಲ ನೀಡಿರುವುದು ಚೀನಾ. ಈಗಾಗಲೇ ಪಾಕಿಸ್ತಾನಕ್ಕೆ 900 ಕೋಟಿ ಅಮೆರಿಕನ್ ಡಾಲರ್ ನೀಡಿದೆ. ಆ ನಂತರ ಜಪಾನ್ ಐನೂರು ಕೋಟಿ ಅಮೆರಿಕನ್ ಡಾಲರ್ ನೀಡಿದೆ. ಆ ನಂತರ ದಕ್ಷಿಣ ಕೊರಿಯಾ, ಫ್ರಾನ್ಸ್, ಜರ್ಮನಿ, ಕೆನಡಾ, ಯುಎಸ್ ಎ, ಸೌದಿ ಅರೇಬಿಯಾ ಹಾಗೂ ಇತರ ರಾಷ್ಟ್ರಗಳೂ ಸಾಲ ನೀಡಿವೆ.

ವಿಶ್ವ ಬ್ಯಾಂಕ್ ನಿಂದಲೂ ಕೇಳಿತ್ತು

ವಿಶ್ವ ಬ್ಯಾಂಕ್ ನಿಂದಲೂ ಕೇಳಿತ್ತು

ಪಾಕಿಸ್ತಾನವು ವಿಶ್ವ ಬ್ಯಾಂಕ್ ಬಳಿ ಕೂಡ ಸಾಲ ಕೇಳಿತ್ತು. ಆದರೆ ಅದಕ್ಕೆ ನಿಗದಿ ಮಾಡಿದ ಮಾನದಂಡಗಳನ್ನು ಪೂರೈಸಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ಇದೀಗ ಆರ್ಥಿಕ ವ್ಯವಹಾರಗಳ ವಿಭಾಗವು ತನ್ನದೇ ಫಾರ್ಮಾಟ್ ರೂಪಿಸಿದೆ. ಇದಕ್ಕಾಗಿ ಕಾನೂನು ಸಚಿವಾಲಯ ಮತ್ತಿತರರನ್ನು ಭೇಟಿ ಆಗಿದೆ. "ಶೀಘ್ರದಲ್ಲೇ ನಾವು ದ್ವಿಪಕ್ಷೀಯ ಸಾಲ ಒಪ್ಪಂದಕ್ಕೆ ಸಹಿ ಹಾಕುತ್ತೇವೆ. ಕೊರೊನಾದಿಂದ ಆಗಿರುವ ಸಮಸ್ಯೆಯಿಂದ ಹೊರಬರುವುದಕ್ಕೆ ಈ ಸಾಲ ಪರಿಹಾರ ಅಗತ್ಯ ಇದೆ" ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ.

English summary

Pakistan To Avail 335 Billion Corona Pandemic Debt Relief From G20 Countries

Pakistan to avail 335 billion rupee debt relief from G20 countries to come out of Corona pandemic negative impact.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more