For Quick Alerts
ALLOW NOTIFICATIONS  
For Daily Alerts

ಕೊರೊನಾ ಅಬ್ಬರಕ್ಕೆ ಏಪ್ರಿಲ್‌ನಲ್ಲಿ ಪೆಟ್ರೋಲ್, ಡೀಸೆಲ್ ಬೇಡಿಕೆ 66 ಪರ್ಸೆಂಟ್ ಇಳಿಕೆ

|

ಕೊರೊನಾವೈರಸ್‌ ಅಬ್ಬರಕ್ಕೆ ವಿಶ್ವದ, ಎಲ್ಲಾ ಉದ್ಯಮಗಳು ನೆಲಕಚ್ಚಿದ್ದು, ದೇಶದಲ್ಲಿಯೂ 21 ದಿನಗಳ ಬಳಿಕವೂ ಲಾಕ್‌ಡೌನ್‌ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಂಡು ಬರ್ತಿದೆ. ಇದರ ನಡುವೆ ಈಗಾಗಲೇ ಲಾಕ್‌ಡೌನ್‌ನಿಂದಾಗಿ ಏಪ್ರಿಲ್‌ನಲ್ಲಿ ತೈಲ ಬಳಕೆ ಪ್ರಮಾಣವು 66 ಪರ್ಸೆಂಟ್ ಕುಸಿದಿದೆ.

ಮಾರ್ಚ್‌ ತಿಂಗಳಿನಲ್ಲಿ ಇಳಿಕೆಗೊಂಡಿದ್ದ ತೈಲ ಬೇಡಿಕೆಯು ಏಪ್ರಿಲ್‌ ತಿಂಗಳಿನಲ್ಲಿ ಮತ್ತಷ್ಟು ತಳ ಮುಟ್ಟಿದೆ. ಜಗತ್ತಿನಲ್ಲಿ ಅತಿ ಹೆಚ್ಚು ತೈಲ ಬಳಕೆಯ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿ ಈ ತಿಂಗಳು(ಏಪ್ರಿಲ್) ಪೆಟ್ರೋಲ್ ಹಾಗೂ ಡೀಸೆಲ್ ಬೇಡಿಕೆಯು 66 ಪರ್ಸೆಂಟ್ ಕುಸಿದಿದೆ. ವಿಮಾನಗಳಿಗೆ ಬಳಕೆಯಾಗುವ ಏವಿಯೇಷನ್ ಟರ್ಬೈನ್ ಫ್ಯೂಯೆಲ್ (ಎಟಿಎಫ್) ಬೇಡಿಕೆ 90 ಪರ್ಸೆಂಟ್ ಕುಸಿತಗೊಂಡಿದೆ.

ವಿಮಾನ ಹಾರಾಟ ಸಂಪೂರ್ಣ ಬಂದ್, ಬೇಡಿಕೆ 90 ಪರ್ಸೆಂಟ್ ಇಳಿಕೆ

ವಿಮಾನ ಹಾರಾಟ ಸಂಪೂರ್ಣ ಬಂದ್, ಬೇಡಿಕೆ 90 ಪರ್ಸೆಂಟ್ ಇಳಿಕೆ

ದೇಶದಲ್ಲಿ ಲಾಕ್‌ಡೌನ್ ಘೋಷಣೆಯ ಜೊತೆಗೆ ದೇಶಿಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವೂ ಬಂದ್ ಆಯಿತು. ಪ್ರಯಾಣಿಕರ ವಿಮಾನ ಸೇರಿದಂತೆ ವಾಣಿಜ್ಯ ವಿಮಾನಗಳು ಸಂಚಾರ ನಡೆಸುತ್ತಿಲ್ಲ. ಅಗತ್ಯವಸ್ತುಗಳನ್ನು ಪೂರೈಸಲು ಹಾಗೂ ಕೊರೊನಾ ಪೀಡಿತ ರಾಷ್ಟ್ರಗಳಿಗೆ ಔಷಧಿ ಪೂರೈಕೆಗೆ ಮಾತ್ರ ವಿಮಾನ ಹಾರಾಟ ನಡೆಸಲಾಗುತ್ತಿದೆ. ಹೀಗಾಗಿ ಎಟಿಎಫ್ ತೈಲ ಬಳಿಕೆ 90 ಪರ್ಸೆಂಟ್‌ರಷ್ಟು ಇಳಿಕೆಗೊಂಡಿದೆ.

10 ವರ್ಷಗಳಲ್ಲೇ ಅತಿ ಕಡಿಮೆ ಪೆಟ್ರೋಲ್ ಮಾರಾಟ

10 ವರ್ಷಗಳಲ್ಲೇ ಅತಿ ಕಡಿಮೆ ಪೆಟ್ರೋಲ್ ಮಾರಾಟ

ಜಗತ್ತಿನಲ್ಲಿ ತೈಲದ ಬಹುದೊಡ್ಡ ಗ್ರಾಹಕನಾಗಿರುವ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ತೈಲ ಬಳಸುವ ಮೂರನೇ ರಾಷ್ಟ್ರವಾಗಿದೆ. ಇಷ್ಟು ದೊಡ್ಡ ರಾಷ್ಟ್ರವು ಕಳೆದ ತಿಂಗಳಿನಲ್ಲಿ 10 ವರ್ಷಗಳಲ್ಲೇ ಅತಿ ಕಡಿಮೆ ತೈಲ ಮಾರಾಟ ಮಾಡಿದೆ. ಮಾರ್ಚ್‌ನಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ 17.79 ಪರ್ಸೆಂಟ್ ಇಳಿಕೆಯಾಗಿ 16.08 ಮಿಲಿಯನ್‌ ಟನ್‌ಗಳಿಗೆ ಇಳಿಕೆಯಾಗಿದೆ.

ಡೀಸೆಲ್ ಬಳಕೆಯಲ್ಲೂ ಗಣನೀಯ ಇಳಿಕೆ
 

ಡೀಸೆಲ್ ಬಳಕೆಯಲ್ಲೂ ಗಣನೀಯ ಇಳಿಕೆ

ಪೆಟ್ರೋಲ್‌ಗಿಂತ ಹೆಚ್ಚಾಗಿ ಡೀಸೆಲ್ ಭಾರತದಲ್ಲಿ ಬಳಕೆಯಾಗುತ್ತದೆ. ಆದರೆ ೨೧ ದಿನಗಳ ಲಾಕ್‌ಡೌನ್‌ನಿಂದಾಗಿ ಬಳಕೆ ಪ್ರಮಾಣ ಕುಸಿದಿದೆ. ರೈಲುಗಳ ಸಂಚಾರ ಸ್ಥಗಿತ, ನಿಂತಲ್ಲೇ ನಿಂತಿರುವ ಟ್ರಕ್‌ಗಳು, ಬಹುತೇಕ ಡೀಸೆಲ್ ವಾಹನಗಳ ಸಂಚಾರವೂ ಇಳಿಕೆಯಾಗಿದೆ ಇದರಿಂದಾಗಿ ಡೀಸೆಲ್ ಬೇಡಿಕೆಯು 24.23 ರಿಂದ 5.65 ಮಿಲಿಯನ್ ಟನ್‌ಗೆ ಇಳಿದಿದೆ. ಪೆಟ್ರೋಲ್ ಮಾರಾಟವೂ 16.37 ಪರ್ಸೆಂಟ್ ಇಳಿಕೆಯಾಗಿ 2.15 ಮಿಲಿಯನ್ ಟನ್‌ಗೆ ತಲುಪಿದೆ.

ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆ ಹೆಚ್ಚು

ಎಲ್‌ಪಿಜಿ ಸಿಲಿಂಡರ್‌ಗಳ ಬೇಡಿಕೆ ಹೆಚ್ಚು

ದೇಶದಲ್ಲಿ ವಾಹನಗಳ ಓಡಾಟ ಸ್ಥಗಿತಗೊಂಡು ಪೆಟ್ರೋಲ್-ಡೀಸೆಲ್ ಬೇಡಿಕೆ ಮತ್ತು ಬಳಕೆ ಇಳಿಕೆಯಾದರೆ, ಎಲ್‌ಪಿಜಿ ಅನಿಲ ಸಿಲಿಂಡರ್‌ಗಳ ಬೇಡಿಕೆ ಹೆಚ್ಚಾಗಿದೆ. ಲಾಕ್‌ಡೌನ್‌ನಿಂದಾಗಿ ದೇಶದ ಜನತೆ ಮನೆಯಲ್ಲೇ ಇರಬೇಕಾದ ಕಾರಣ ಎಲ್‌ಪಿಜಿ ಸಿಲಿಂಡರ್ ಬಳಕೆ ಮತ್ತು ಬೇಡಿಕೆ ಹೆಚ್ಚಾಗಿದೆ. ಮಾರ್ಚ್‌ನಲ್ಲಿ 1.9 ಪರ್ಸೆಂಟ್ ಬೇಡಿಕೆ ಹೆಚ್ಚಿದ್ದು, ಏಪ್ರಿಲ್ ತಿಂಗಳಿನಲ್ಲಿ 30 ಪರ್ಸೆಂಟ್ ಹೆಚ್ಚಾಗಿದೆ.

English summary

Petrol And Diesel Demand Down 66 Percent In April

India’s fuel consumption slumped by over 66% in April as a nationwide lockdown
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X