ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಅದಾದ ನಂತರ 11 ಬಾರಿ ಇಂಧನ ಬೆಲೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಮಾ.22ರಿಂದ ಇಂದಿನ ತನಕ ಸರಾಸರಿ 8 ರೂ. ಹೆಚ್ಚಾಗಿದೆ. ಶನಿವಾರದಂತೆ ರವಿವಾರದಂದು ಪೆಟ್ರೋಲ್, ಡೀಸೆಲ್ ಬೆಲೆ ಸರಾಸರಿ 80 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿದೆ. ಇಂದು (ಭಾನುವಾರ, ಏಪ್ರಿಲ್ 3) ಕೂಡ ಇಂಧನ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನ ಬೆಲೆ ಏರಿಕೆ ನಂತರ ಪೆಟ್ರೋಲ್ 103.41 ರು; ಡೀಸೆಲ್ 93.87 ರು ಆಗಿದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು. ಪರಿಣಾಮವಾಗಿ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂಧನ ದರವನ್ನು ಏರಿಕೆ ಮಾಡುತ್ತಿವೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಇಂಧನ ಏರಿಕೆ ಕಾಣುವ ಸಾಧ್ಯತೆಯನ್ನು ಅಂದಾಜಿಸಲಾಗಿತ್ತು. ವರದಿಗಳ ಪ್ರಕಾರ, ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 104.4 ಯುಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಏ.3: 108.99 ರೂ
ಏ.2: 108.14 ರೂ.
ಏ.1: 107.30 ರೂ.
ಮಾ. 31: 107.30 ರೂ.
ಮಾ. 30: 106.46 ರೂ.
ಮಾ. 29: 105.62 ರೂ.
ಡೀಸೆಲ್ (ಪ್ರತಿ ಲೀಟರ್)
ಏ.3: 92.83 ರೂ
ಏ.2: 92.05 ರೂ.
ಏ.1: 91.27 ರೂ.
ಮಾ. 31: 91.27 ರೂ.
ಮಾ. 30: 90.49 ರೂ.
ಮಾ. 29: 89.70 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಏ.3: 103.41 ರೂ
ಏ.2: 102.61 ರೂ.
ಏ.1: 101.81 ರೂ.
ಮಾ. 31: 101.81 ರೂ.
ಮಾ. 30: 101.01 ರೂ.
ಮಾ. 29: 100.21 ರೂ.
ಡೀಸೆಲ್ (ಪ್ರತಿ ಲೀಟರ್)
ಏ.3: 94.67 ರೂ
ಏ.2: 93.87 ರೂ.
ಏ.1: 93.07 ರೂ.
ಮಾ. 31: 93.07 ರೂ.
ಮಾ. 30: 92.27 ರೂ.
ಮಾ. 29: 91.47 ರೂ.
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಏ.3: 118.41 ರೂ
ಏ.2: 117.57 ರೂ.
ಏ.1: 116.72 ರೂ.
ಮಾ. 31: 116.72 ರೂ.
ಮಾ. 30: 115.88 ರೂ.
ಮಾ. 29: 115.04 ರೂ.
ಡೀಸೆಲ್ (ಪ್ರತಿ ಲೀಟರ್)
ಏ.3: 102.61 ರೂ
ಏ.2: 101.79 ರೂ.
ಏ.1: 100.94 ರೂ.
ಮಾ. 31: 100.94 ರೂ.
ಮಾ. 30: 100.10 ರೂ.
ಮಾ. 29: 99.25 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಏ.3: 108.96 ರೂ
ಏ.2: 107.4 ರೂ.
ಏ.1: 107.45 ರೂ.
ಮಾ. 31: 107.45 ರೂ.
ಮಾ. 30: 106.69 ರೂ.
ಮಾ. 29: 105.94 ರೂ.
ಡೀಸೆಲ್ (ಪ್ರತಿ ಲೀಟರ್)
ಏ.3: 99.04 ರೂ
ಏ.2: 97.52 ರೂ
ಏ.1: 97.52 ರೂ.
ಮಾ. 31: 97.52 ರೂ.
ಮಾ. 30: 96.76 ರೂ.
ಮಾ. 29: 96.00 ರೂ.


Click it and Unblock the Notifications