ಜಾಗತಿಕವಾಗಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ರಷ್ಯಾ- ಉಕ್ರೇನ್ ನಡುವಿನ ಯುದ್ಧದ ತೈಲ ಬೆಲೆ ಭಾರತದಲ್ಲಿ ಇಳಿಕೆಯಾಗಿಲ್ಲ. ದೇಶದ ಸರ್ಕಾರಿ ತೈಲ ಕಂಪನಿಗಳು ಇಂದು ಗುರುವಾರ (ಮಾ.3) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ದೇಶದ ಮೆಟ್ರೋ ನಗರಗಳಲ್ಲಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೈಪುರ, ಪಾಟ್ನಾ ಗುರುಗ್ರಾಮ, ನೋಯ್ಡಾ, ಲಕ್ನೋ ಸೇರಿದಂತೆ ಕೆಲ ನಗರಗಳಲ್ಲಿ ಬೆಲೆಯಲ್ಲಿ ಸ್ವಲ್ಪ ಏರಿಳಿತ ಕಂಡು ಬಂದಿದೆ. ಮಿಕ್ಕಂತೆ, ನವೆಂಬರ್ 4ರಿಂದ ಇಂದಿನ ತನಕ ಇಂಧನ ದರ ಸ್ಥಿರವಾಗಿದೆ.
ಕಚ್ಚಾತೈಲ ಬೆಲೆ ಮಾರ್ಚ್ 2ರಂದು 113 ಯುಎಸ್ ಡಾಲರ್ ಪ್ರತಿ ಬ್ಯಾರೆಲ್ ಮುಟ್ಟಿದ್ದು, ಗರಿಷ್ಠ ಮಟ್ಟ ತಲುಪಿದೆ. ಸದ್ಯ ಶೇ 5 ಪ್ರತಿ ಬ್ಯಾರೆಲ್ ನಂತೆ ಬೆಲೆ ಏರಿಕೆ ಕಾಣುತ್ತಿದೆ. ಮುಂದಿನ ವಾರದಿಂದ ಭಾರತದಲ್ಲಿ ಇಂಧನ ದರ ಏರಿಕೆ ಮುನ್ಸೂಚನೆ ಸಿಕ್ಕಿದೆ.
ಲಕ್ನೋದಲ್ಲಿ ಪೆಟ್ರೋಲ್ ಬೆಲೆ 95.14 ರು ಪ್ರತಿ ಲೀಟರ್ ಹಾಗೂ ಡೀಸೆಲ್ 86.68 ರು ಆಗಿದೆ. ಗುರುಗ್ರಾಮದಲ್ಲಿ ಇಂದು ಪೆಟ್ರೋಲ್ 95.81 ರು ಪ್ರತಿ ಲೀಟರ್ ಹಾಗೂ 87.02 ಪ್ರತಿ ಲೀಟರ್ ನಷ್ಟಾಗಿದೆ. ನೋಯ್ಡಾದಲ್ಲಿ ಪ್ರತಿ ಲೀಟರ್ 95.73 ರು ಆಗಿದೆ, ಡೀಸೆಲ್ 87.21 ರು ಆಗಿದೆ. ಪಾಟ್ನಾದಲ್ಲಿ ಪೆಟ್ರೋಲ್ 106.59 ರು ಹಾಗೂ ಡೀಸೆಲ್ 91.73 ರು ಪ್ರತಿ ಲೀಟರ್ ನಷ್ಟಿದೆ. ದೇಶದಲ್ಲೇ ಅತ್ಯಧಿಕ ದರ ರಾಜಸ್ಥಾನದ ಗಂಗಾನಗರದಲ್ಲಿ ಪೆಟ್ರೋಲ್ 111.84 ಡೀಸೆಲ್ 95.02 ಪ್ರತಿಲೀಟರ್ ಬೆಲೆ ಇದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ತಿಂಗಳು ಯುಎಸ್‌ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ ಶೇ 3.60ರಷ್ಟು ಏರಿಕೆಯಾಗಿ 116.5 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 3: 100.58 ರೂ.
ಮಾ. 2: 100.58 ರೂ.
ಮಾ. 1: 100.58 ರೂ.
ಫೆ. 28: 100.58 ರೂ.
ಫೆ. 27:100.58 ರೂ.
ಡೀಸೆಲ್ (ಪ್ರತಿ ಲೀಟರ್)
ಮಾ. 3: 85.01 ರೂ.
ಮಾ. 2: 85.01 ರೂ.
ಮಾ. 1: 85.01 ರೂ.
ಫೆ. 28: 85.01 ರೂ.
ಫೆ. 27: 85.01 ರೂ.
ಫೆ. 26: 85.01 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 3: 95.41 ರೂ.
ಮಾ. 2: 95.41 ರೂ.
ಮಾ. 1: 95.41 ರೂ.
ಫೆ. 28: 95.41 ರೂ.
ಫೆ. 27: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಮಾ. 3: 86.67 ರು
ಮಾ. 2: 86.67 ರು
ಮಾ. 1: 86.67 ರು
ಫೆ. 28: 86.67 ರು
ಫೆ. 27: 86.67 ರು
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 3: 109.98 ರು
ಮಾ. 2: 109.98 ರು
ಮಾ. 1: 109.98 ರು
ಫೆ. 28: 109.98 ರು
ಫೆ. 27: 109.98 ರು
ಡೀಸೆಲ್ (ಪ್ರತಿ ಲೀಟರ್)
ಮಾ. 3: 94.14 ರು
ಮಾ. 2: 94.14 ರು
ಮಾ. 1: 94.14 ರು
ಫೆ. 28: 94.14 ರು
ಫೆ. 27: 94.14 ರು
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 3: 101.40 ರು
ಮಾ. 2: 101.40 ರು
ಮಾ. 1: 101.40 ರು
ಫೆ. 28: 101.40 ರು
ಫೆ. 27: 101.40 ರು
ಡೀಸೆಲ್ (ಪ್ರತಿ ಲೀಟರ್)
ಮಾ. 3: 91.43 ರು
ಮಾ. 2: 91.43 ರು
ಮಾ. 1: 91.43 ರು
ಫೆ. 28: 91.43 ರು
ಫೆ. 27: 91.43 ರು


Click it and Unblock the Notifications