ಜಾಗತಿಕವಾಗಿ ಕಚ್ಚಾತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ದೇಶದ ಸರ್ಕಾರಿ ತೈಲ ಕಂಪನಿಗಳು ಇಂದು ಬುಧವಾರ (ಫೆಬ್ರವರಿ 16) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ದೇಶದ ಪ್ರಮುಖ ನಗರಗಳ ಪೈಕಿ ಚೆನ್ನೈ ಹೊರತುಪಡಿಸಿ ಉಳಿದ ಮೆಟ್ರೋ ನಗರಗಳಲ್ಲಿ ಕಳೆದ 103 ದಿನಗಳಿಂದ(ನವೆಂಬರ್ 4ರಿಂದ ಇಂದಿನ ತನಕ) ಇಂಧನ ದರ ಸ್ಥಿರವಾಗಿದೆ. ಚೆನ್ನೈ ನಗರದಲ್ಲಿ ಪೆಟ್ರೋಲ್ 11 ಪೈಸೆ ಹಾಗೂ ಡೀಸೆಲ್ 10 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿರುವುದರಿಂದ ಬರೋಬ್ಬರಿ ಎರಡು ತಿಂಗಳುಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್- ಡೀಸೆಲ್ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.
ಸಾಮಾನ್ಯ ಹಣದುಬ್ಬರದ ಹಿನ್ನೆಲೆಯಿಂದಾಗಿ ಭಾರತದಲ್ಲಿ ತೈಲ ಬೆಲೆಗೆ ಇನ್ನಷ್ಟು ಉತ್ತೇಜನ ನೀಡಬಹುದು. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣ ಆಗುತ್ತದೆ. ಅಂದಹಾಗೆ ಕಳೆದ ವರ್ಷದ ನವೆಂಬರ್ನಲ್ಲಿ ಸರ್ಕಾರದಿಂದ ತೈಲ ಬೆಲೆಯ ಅಬಕಾರಿ ಸುಂಕ ಇಳಿಕೆ ಮಾಡಿದ ಮೇಲೆ ಬೆಲೆ ಸ್ಥಿರವಾಗಿಯೇ ಇದೆ. ಆದರೆ ಹೊಸ ವರ್ಷದ ಶುರುವಿನಿಂದಲೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ಒಂದು ವರದಿಗಳ ಪ್ರಕಾರ, ಕಳೆದ ನಾಲ್ಕು ವಾರದಲ್ಲಿ ಶೇ.25ರಷ್ಟು ಹೆಚ್ಚಳವಾಗಿದೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರ ಪರಿಷ್ಕರಣೆ
ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ಆದರೂ, ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂಧನ ದರ ಕಡಿಮೆಯಾದರೆ ವಾಹನ ಸವಾರರಿಗೆ ಮತ್ತಷ್ಟು ಭಾರ ಕಡಿಮೆಯಾಗಲಿದೆ. ಕಳೆದ ತಿಂಗಳು ಯುಎಸ್ನ ಬೆಂಚ್ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್ಗೆ 70 ಡಾಲರ್ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್ಗೆ 72 ರೂ. ಕಡಿಮೆಯಾಗಿತ್ತು. ಈ ಸಮಯಕ್ಕೆ ಶೇ 0.40ರಷ್ಟು ಇಳಿಕೆಯಾಗಿ 92.84 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 16: 100.58 ರೂ.
ಫೆ. 15: 100.58 ರೂ.
ಫೆ. 14: 100.58 ರೂ.
ಫೆ. 13: 100.58 ರೂ.
ಫೆ. 12: 100.58 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 16: 85.01 ರೂ.
ಫೆ. 15: 85.01 ರೂ.
ಫೆ. 14: 85.01 ರೂ.
ಫೆ. 13: 85.01 ರೂ.
ಫೆ. 12: 85.01 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 16: 101.51 ರೂ.
ಫೆ. 15: 101.40 ರೂ.
ಫೆ. 14: 101.40 ರೂ.
ಫೆ. 13: 101.40 ರೂ.
ಫೆ. 12: 101.40 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 16: 91.53 ರೂ.
ಫೆ. 15: 91.43 ರೂ.
ಫೆ. 14: 91.43 ರೂ.
ಫೆ. 13: 91.43 ರೂ.
ಫೆ. 12: 91.43 ರೂ.
ಹೈದ್ರಾಬಾದ್‌ನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 16: 108.20 ರೂ.
ಫೆ. 15: 108.20 ರೂ.
ಫೆ. 14: 108.20 ರೂ.
ಫೆ. 13: 108.20 ರೂ.
ಫೆ. 12: 108.20 ರೂ.
ಡೀಸೆಲ್ ದರ (ಪ್ರತಿ ಲೀಟರ್)
ಫೆ. 16: 94.62 ರೂ.
ಫೆ. 15: 94.62 ರೂ.
ಫೆ. 14: 94.62 ರೂ.
ಫೆ. 13: 94.62 ರೂ.
ಫೆ. 12: 94.62 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಫೆ. 16: 95.41 ರೂ.
ಫೆ. 15: 95.41 ರೂ.
ಫೆ. 14: 95.41 ರೂ.
ಫೆ. 13: 95.41 ರೂ.
ಫೆ. 12: 95.41 ರೂ.
ಡೀಸೆಲ್ (ಪ್ರತಿ ಲೀಟರ್)
ಫೆ. 16: 86.67 ರೂ.
ಫೆ. 15: 86.67 ರೂ.
ಫೆ. 14: 86.67 ರೂ.
ಫೆ. 13: 86.67 ರೂ.
ಫೆ. 12: 86.67 ರೂ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications