ಜಾಗತಿಕ ಕಚ್ಚಾತೈಲ ಬೆಲೆ ಕೊಂಚ ಇಳಿಕೆಯಾಗಿದೆ. ಹಣದುಬ್ಬರ, ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮವು ಕಚ್ಚಾತೈಲದ ಮೇಲೆಯೂ ಬಿದ್ದಿದೆ. ಆದರೆ ಭಾರತದಲ್ಲಿ ಒಂದು ತಿಂಗಳಿನಿಂದ ಇಂಧನ ದರ ಏರಿಕೆಯಾಗದೆ ಸ್ಥಿರವಾಗಿದೆ. ಜೂನ್ 10ರಂದು ಪ್ರತಿ ಬ್ಯಾರೆಲ್‌ಗೆ 123.9 ಯುಎಸ್ ಡಾಲರ್‌ಗೆ ಏರಿತ್ತು. ಬಳಿಕ ಏರಿಳಿತ ಕಂಡು ಬಂದಿದೆ. ಇಂದು ಕಚ್ಚಾ ತೈಲ ದರ ಕೊಂಚ ಇಳಿಕೆ ಕಂಡು 111 USD ಆಸುಪಾಸಿನಲ್ಲಿದೆ.
ದೇಶದಲ್ಲಿ ಪ್ರತಿದಿನ ತೈಲ ದರ ಏರಿಕೆ ಮಾಡಲಾಗಿತ್ತು. ಆದರೆ ಹಲವಾರು ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದವು, ಈ ನಡುವೆ ಸರ್ಕಾರ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಕೂಡಾ ಸೆಸ್ ಇಳಿಕೆ ಮಾಡಿದೆ. ಕರ್ನಾಟಕವೂ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಬೇಡಿಕೆ ಇದೆ. ಕಚ್ಚಾತೈಲ ದರ ಏರಿಕೆ ನಡುವೆ ಬಿಹಾರ, ಗುರುಗ್ರಾಮ, ದೆಹಲಿ ಎನ್ ಸಿ ಆರ್ ಪ್ರದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕೆಲ ಪೈಸೆಗಳಷ್ಟು ವ್ಯತ್ಯಾಸ ಕಂಡಿವೆ.
ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಅಬಕಾರಿ ಸುಂಕ ಇಳಿಕೆ
ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಣೆ ಮಾಡಿದೆ. ಈ ಹಿನ್ನೆಲೆ ಭಾರತದಲ್ಲಿ ಇಂಧನ ದರವು 22ರಿಂದಲೇ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಕಂಡರೂ ಇಂದು ಸರ್ಕಾರಿ ತೈಲ ಕಂಪನಿಗಳು ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದರೆ ನಿರಂತರ ಕಚ್ಚಾ ತೈಲ ದರ ಏರಿಕೆಯಿಂದಾಗಿ ಇಂಧನ ದರ ಮತ್ತೆ ಪರಿಷ್ಕರಣೆ ಸಾಧ್ಯತೆ ಇದೆ.
ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಸ್ಥಗಿತ ಮಾಡಲಾಗಿದ್ದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆಯು ಚುನಾವಣೆಯ ಬಳಿಕ ಸರ್ಕಾರಿ ತೈಲ ಕಂಪನಿಗಳು ಮತ್ತೆ ಆರಂಭ ಮಾಡಿದ್ದವು. ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಮಾರ್ಚ್ 22 ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು.
ಕಚ್ಚಾತೈಲದ ಬೆಲೆ ಸ್ವಲ್ಪ ಇಳಿಕೆ
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸ್ವಲ್ಪ ಇಳಿಕೆ ಕಾಣುತ್ತಿದೆ. ರಾಷ್ಟ್ರಾದ್ಯಂತ ಮತ್ತೆ ಪೆಟ್ರೋಲ್- ಡೀಸೆಲ್ ದರದಲ್ಲಿ ಬದಲಾವಣೆ ಆಗಿಲ್ಲ. ಈ ಹಿಂದೆ ಯುಎಸ್ನ ಬೆಂಚ್‌ಮಾರ್ಕ್ ಡಬ್ಲ್ಯೂಟಿಐ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಾಲರ್‌ಗಳಷ್ಟು ಕುಸಿದಿತ್ತು. ಹಾಗೇ, ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ 72 ರೂ. ಕಡಿಮೆಯಾಗಿತ್ತು. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಬ್ರೆಂಟ್ ಕಚ್ಚಾತೈಲದ ದರ ಪ್ರತಿ ಬ್ಯಾರೆಲ್‌ಗೆ ನೂರರ ಗಡಿಯನ್ನು ದಾಟಿದೆ. ಈ ಸಮಯಕ್ಕೆ ಕುಗ್ಗಿ 111.6 ಯುಎಸ್ ಡಾಲರ್‌ನಷ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.22: 101.94 ರೂ.
ಜೂ.21: 101.94 ರೂ.
ಜೂ.20: 101.94 ರೂ.
ಜೂ.19: 101.94 ರೂ.
ಜೂ.18: 101.94 ರೂ.
ಜೂ.17: 101.94 ರೂ.
ಜೂ.16: 101.94 ರೂ.
ಜೂ.15: 101.94 ರೂ.
ಜೂ.14: 101.94 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.22: 87.89 ರೂ.
ಜೂ.21: 87.89 ರೂ.
ಜೂ.20: 87.89 ರೂ.
ಜೂ.19: 87.89 ರೂ.
ಜೂ.18: 87.89 ರೂ.
ಜೂ.17: 87.89 ರೂ.
ಜೂ.16: 87.89 ರೂ.
ಜೂ.15: 87.89 ರೂ.
ಜೂ.14: 87.89 ರೂ.
ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ದೆಹಲಿ
ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.22: 96.72 ರೂ.
ಜೂ.21: 96.72 ರೂ.
ಜೂ.20: 96.72 ರೂ.
ಜೂ.19: 96.72 ರೂ.
ಜೂ.18: 96.72 ರೂ.
ಜೂ.17: 96.72 ರೂ.
ಜೂ.16: 96.72 ರೂ.
ಜೂ.15: 96.72 ರೂ.
ಜೂ.14: 96.72 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.22: 89.62 ರೂ.
ಜೂ.21:89.62 ರೂ.
ಜೂನ್ 20: 89.62 ರೂ.
ಜೂನ್ 19: 89.62 ರೂ.
ಜೂ.18: 89.62 ರೂ.
ಜೂ.17: 89.62 ರೂ.
ಜೂ.16: 89.62 ರೂ.
ಜೂ.15: 89.62 ರೂ.
ಜೂ.14: 89.62 ರೂ.
ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಮುಂಬೈ
ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.22: 111.35 ರೂ.
ಜೂ.21: 111.35 ರೂ.
ಜೂ.20: 111.35 ರೂ.
ಜೂ.19: 111.35 ರೂ.
ಜೂ.18: 111.35 ರೂ.
ಜೂ.17: 111.35 ರೂ.
ಜೂ.16: 111.35 ರೂ.
ಜೂ.15: 111.35 ರೂ.
ಜೂ.14: 111.35 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.22:97.28 ರೂ.
ಜೂ.21:97.28 ರೂ.
ಜೂನ್ 20: 97.28 ರೂ.
ಜೂನ್ 19: 97.28 ರೂ.
ಜೂ.18: 97.28 ರೂ.
ಜೂ.17: 97.28 ರೂ.
ಜೂ.16: 97.28 ರೂ.
ಜೂ.15: 97.28 ರೂ.
ಜೂ.14: 97.28 ರೂ.
ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
ಚೆನ್ನೈ
ಪೆಟ್ರೋಲ್ ದರ (ಪ್ರತಿ ಲೀಟರ್)
ಜೂ.22:102.63 ರೂ.
ಜೂ.21:102.63 ರೂ.
ಜೂ.20: 102.73 ರೂ.
ಜೂ.19: 102.63 ರೂ.
ಜೂ.18: 102.63 ರೂ.
ಜೂ.17: 102.63 ರೂ.
ಜೂ.16: 102.63 ರೂ.
ಜೂ.15: 102.63 ರೂ.
ಜೂ.14: 102.63 ರೂ.
ಡೀಸೆಲ್ (ಪ್ರತಿ ಲೀಟರ್)
ಜೂ.22:94.24 ರೂ.
ಜೂ.21: 94.24 ರೂ.
ಜೂ.20: 94.33 ರೂ.
ಜೂ. 19: 94.24 ರೂ.
ಜೂ.18: 94.24 ರೂ.
ಜೂ.17: 94.24 ರೂ.
ಜೂ.16: 94.24 ರೂ.
ಜೂ.15: 94.24 ರೂ.
ಜೂ.14: 94.24 ರೂ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ



Click it and Unblock the Notifications