Petrol, Diesel Price Today: ಸುಂಕ ಇಳಿಕೆ ಬಳಿಕ ಪ್ರಮುಖ ನಗರಗಳ ಇಂಧನ ದರ ವಿವರ

ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆ ಜಾಗತಿಕ ಕಚ್ಚಾತೈಲ ಬೆಲೆ ಕೆಲವು ದಿನಗಳಿಂದ ಮತ್ತೆ ಏರಿಕೆಯಾಗುತ್ತಿದೆ. ಸತತವಾಗಿ 111 ಪ್ಲಸ್ ಯುಎಸ್ ಡಾಲರ್ ಪ್ರತಿ ಬ್ಯಾರೆಲ್‌ನಂತೆ ವ್ಯವಹರಿಸುತ್ತಿದೆ. ಭಾರತದಲ್ಲಿ ಇಂದು (ಮೇ 22, ಭಾನುವಾರ) ಪೆಟ್ರೋಲ್‌, ಡೀಸೆಲ್ ದರದಲ್ಲಿ ಇಳಿಕೆಯಾಗಲಿದೆ. ಕೇಂದ್ರ ಸರ್ಕಾರವು ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ ಮೇ 21ರಂದು ಘೋಷಿಸಿದೆ. ಸುಮಾರು 40 ದಿನಗಳಿಂದ ಸ್ಥಿರವಾಗಿದ್ದ ಇಂಧನ ದರ ಇಳಿಕೆಯಾಗಿದೆ.

ದೇಶದ ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ದೇಶದ ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಪರಿಷ್ಕರಣೆಯನ್ನು ಸ್ಥಗಿತ ಮಾಡಿದ್ದವು. ಆದರೆ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ದೇಶದಲ್ಲಿ ಪ್ರತಿದಿನ ಇಂಧನ ದರ ಪರಿಷ್ಕರಣೆ ಮಾಡಲು ಆರಂಭ ಮಾಡಿದ್ದ ಸರ್ಕಾರಿ ತೈಲ ಕಂಪನಿಗಳು, ಕಳೆದ ನಾಲ್ಕು ವಾರದಿಂದಲೂ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಪ್ರಮುಖ ನಗರಗಳ ಇಂಧನ ದರ ವಿವರ, ಕಚ್ಚಾತೈಲ ದರ, ಸುಂಕ ಕಡಿತದಿಂದ ತಗ್ಗಿದ ಇಂಧನ ಬೆಲೆ ಎಷ್ಟಾಗಿದೆ? ಮುಂದೆ ಓದಿ...

ನಿರೀಕ್ಷೆಯಂತೆ ಸುಂಕ ಇಳಿಕೆ

ನಿರೀಕ್ಷೆಯಂತೆ ಸುಂಕ ಇಳಿಕೆ

ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಕಳೆದ ಮಾರ್ಚ್ 22ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿತ್ತು. ಸುಮಾರು 10 ರು ಬೆಲೆ ಏರಿಕೆ ಬಳಿಕ ಇಂಧನ ದರ ಬಹುತೇಕ ಒಂದು ತಿಂಗಳಿನಿಂದ ಸ್ಥಿರವಾಗಿತ್ತು. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ನಡುವೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡುವ ನಿರೀಕ್ಷೆಯನ್ನು ಜನರು ಹೊಂದಿದ್ದರು. ಅದರಂತೆ ಸುಮಾರು 40 ದಿನಗಳ ಬಳಿಕ ನಿರೀಕ್ಷೆಯಂತೆ ಸುಂಕ ಇಳಿಕೆ ಮಾಡಲಾಗಿದೆ.

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ಸುಂಕ ಇಳಿಕೆ ಬಳಿಕವೂ ಭಾರತದಲ್ಲೇ ಅತ್ಯಧಿಕ ಇಂಧನ ದರ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ದಾಖಲಾಗಿದೆ. ಪೆಟ್ರೋಲ್ 113.65 ರು ಪ್ರತಿ ಲೀಟರ್ ಹಾಗೂ ಡೀಸೆಲ್ 98.39 ರು ನಷ್ಟಿದೆ. ಮೆಟ್ರೋ ನಗರಗಳ ಪೈಕಿ ಮುಂಬೈ ನಗರದಲ್ಲಿ ಪೆಟ್ರೋಲ್ ದರ ಅತ್ಯಧಿಕ 113.5 ರು ಪ್ರತಿ ಲೀಟರ್ ದಾಟಿದೆ. ಭಾರತದ ಇತರೆ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿವರ ತಿಳಿಯಲು ಕ್ಲಿಕ್ ಮಾಡಿ 

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಇದೀಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಮತ್ತೆ ಏರಿಕೆ ಕಾಣುತ್ತಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು. ಪರಿಣಾಮವಾಗಿ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂಧನ ದರವನ್ನು ಏರಿಕೆ ಮಾಡುತ್ತಿದ್ದವು. ಆದರೆ ಇಂದು (ಭಾನುವಾರ, ಮೇ 22) ಇಂಧನ ದರ ಏರಿಕೆಯಾಗಿಲ್ಲ. ವರದಿಗಳ ಪ್ರಕಾರ, ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 112.6 ಯುಎಸ್ ಡಾಲರ್ ನಂತೆ ವ್ಯವಹಾರ ನಡೆಸುತ್ತಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ಬೆಂಗಳೂರು ಪೆಟ್ರೋಲ್ ದರ

ಬೆಂಗಳೂರು ಪೆಟ್ರೋಲ್ ದರ

ಬೆಂಗಳೂರು

ಪೆಟ್ರೋಲ್ ದರ (ಪ್ರತಿ ಲೀಟರ್) : 101.94 ರೂ.(-9.15 ರು)
ಡೀಸೆಲ್ (ಪ್ರತಿ ಲೀಟರ್): 94.79 ರೂ. (87.89 (-6.90)

ದೆಹಲಿಯಲ್ಲಿ
ಪೆಟ್ರೋಲ್ ದರ (ಪ್ರತಿ ಲೀಟರ್) : 96.72ರೂ. (-8.69)
ಡೀಸೆಲ್ (ಪ್ರತಿ ಲೀಟರ್): 96.67 ರೂ. (-7.05)

ಮುಂಬೈನಲ್ಲಿ ಇಂಧನ ದರ
ಪೆಟ್ರೋಲ್ ದರ (ಪ್ರತಿ ಲೀಟರ್) : 111.35 ರೂ. (-9.16)
ಡೀಸೆಲ್ (ಪ್ರತಿ ಲೀಟರ್): 97.28 ರೂ.(-7.49)

ಚೆನ್ನೈನಲ್ಲಿ ಇಂಧನ ದರ

ಪೆಟ್ರೋಲ್ ದರ (ಪ್ರತಿ ಲೀಟರ್): 102.63 ರೂ. (-8.22)
ಡೀಸೆಲ್ (ಪ್ರತಿ ಲೀಟರ್): 100.94ರೂ. (-6.70)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+