For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ, 2020ರಲ್ಲಿ ಒಟ್ಟಾರೆ ಲೀಟರ್‌ಗೆ 3 ರುಪಾಯಿ ಕುಸಿತ

|

ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ -ಡೀಸೆಲ್ ದರವು ಮತ್ತಷ್ಟು ಇಳಿಕೆಯತ್ತ ಸಾಗಿದೆ. 2020ರ ಆರಂಭದಿಂದಲೂ ಪೆಟ್ರೋಲ್, ಡೀಸೆಲ್ ಬೆಲೆಯು ಕಡಿಮೆಯಾಗುತ್ತಲೇ ಸಾಗಿದ್ದು ಒಟ್ಟಾರೆ ಲೀಟರ್‌ಗೆ ಮೂರು ರುಪಾಯಿ ಕಡಿಮೆಯಾಗಿದೆ. ಸೋಮವಾರ ಪೆಟ್ರೋಲ್ ಲೀಟರ್‌ಗೆ 13 ಪೈಸೆ, ಡೀಸೆಲ್ ದರವು ಲೀಟರ್‌ಗೆ 16 ಪೈಸೆ ಕಡಿಮೆಯಾಗಿದೆ.

ಕಚ್ಛಾ ತೈಲ ದರವು ವರ್ಷದ ಆರಂಭದಲ್ಲಿ ಬ್ಯಾರೆಲ್‌ಗೆ 75 ಡಾಲರ್‌ನಷ್ಟಿತ್ತು. ಆದರೆ ಇದೀಗ 54 ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿರುವುದರಿಂದ ಪೆಟ್ರೋಲ್ -ಡೀಸೆಲ್ ಬೆಲೆ ಇಳಿಕೆಯತ್ತ ಮುಖಮಾಡಿದೆ. ಹೀಗಾಗಿ ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಕಳೆದ ಹಲವು ದಿನ ತೈಲ ಬೆಲೆಯನ್ನು ಕಡಿತಗೊಳಿಸುತ್ತಾ ಬಂದಿದ್ದಾರೆ.

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರವು ಲೀಟರ್‌ಗೆ ಎಷ್ಟಿದೆ ಎಂಬುದು ಈ ಕೆಳಕಂಡಂತಿದೆ.

ನಗರ ಪೆಟ್ರೋಲ್ ದರ ಡೀಸೆಲ್ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು74.5567.28
ದೆಹಲಿ72.1065.07
ಕೊಲ್ಕತ್ತಾ74.7467.39
ಮುಂಬೈ77.7668.19
ಚೆನ್ನೈ74.9068.72
ಗುರುಗಾವ್72.0064.28
ನೊಯ್ಡ74.0765.41
ಭುವನೇಶ್ವರ್71.0469.68
ಚಂಡೀಗಡ68.1661.93
ಹೈದ್ರಾಬಾದ್76.6270.88
ಜೈಪುರ76.5870.65
ಲಕ್ನೋ73.9465.30
ಪಾಟ್ನಾ76.7169.64
ತ್ರಿವೆಂಡ್ರಮ್75.5470.10

English summary

Petrol Diesel Prices On February 10

Petrol and diesel prices were slashed again. India's Major cities latest rates here.
Story first published: Monday, February 10, 2020, 11:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X