For Quick Alerts
ALLOW NOTIFICATIONS  
For Daily Alerts

ಪಿಂಚಣಿದಾರರು ಲೈಫ್ ಸರ್ಟಿಫಿಕೇಟ್ ಆನ್ ಲೈನ್ ನಲ್ಲಿ ಸಲ್ಲಿಸಲು ಪೋಸ್ಟ್ ಮನ್ ಗಳ ನೆರವು

By ಅನಿಲ್ ಆಚಾರ್
|

ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ತಮ್ಮ 'ಲೈಫ್ ಸರ್ಟಿಫಿಕೇಟ್' (ಜೀವಿತ ಪ್ರಮಾಣಪತ್ರ) ಆನ್ ಲೈನ್ ನಲ್ಲೇ ಸಲ್ಲಿಸುವುದಕ್ಕೆ ಪೋಸ್ಟ್ ಮನ್ ಮನೆ ಬಾಗಿಲಿಗೇ ಸೇವೆ ಒದಗಿಸಲಿದ್ದಾರೆ ಎಂದು ಗುರುವಾರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಕ್ಕೆ ಶುಲ್ಕ ವಿಧಿಸಲಾಗಿತ್ತದೆ. ಹಾಗೂ ಭಾರತದಲ್ಲಿ ಇರುವ ಎಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ಇದು ಅನ್ವಯ ಆಗಲಿದೆ.

ಸದ್ಯದ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಮನೆಯಲ್ಲೇ ಇರಬೇಕಿರುವಾಗ ಜೀವಿತ ಪ್ರಮಾಣಪತ್ರ ಸಲ್ಲಿಸುವುದರಿಂದ ದೊಡ್ಡ ಪರಿಹಾರ ದೊರೆತಂತಾಗುತ್ತದೆ ಎಂದು ಸಿಬ್ಬಂದಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೋಲ್ ಇಂಡಿಯಾದಿಂದ ಸರ್ಕಾರಕ್ಕೆ 3056 ಕೋಟಿ ರು. ಡಿವಿಡೆಂಡ್ಕೋಲ್ ಇಂಡಿಯಾದಿಂದ ಸರ್ಕಾರಕ್ಕೆ 3056 ಕೋಟಿ ರು. ಡಿವಿಡೆಂಡ್

ಅಂಚೆ ಇಲಾಖೆಯ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಸಚಿವಾಲಯದ ವತಿಯಿಂದ ಮನೆ ಬಾಗಿಲಲ್ಲೇ ಲೈಫ್ ಸರ್ಟಿಫಿಕೇಟ್ ಪೋಸ್ಟ್ ಮ್ಯಾನ್ ಮೂಲಕ ಸಲ್ಲಿಸುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಲಾಗಿದೆ.

ಲೈಫ್ ಸರ್ಟಿಫಿಕೇಟ್ ಆನ್ ಲೈನ್ ನಲ್ಲಿ ಸಲ್ಲಿಸಲು ಪೋಸ್ಟ್ ಮನ್ ಗಳ ನೆರವು

ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಜೀವಿತಾವಧಿ ಪ್ರಮಾಣಪತ್ರವನ್ನು ಆನ್ ಲೈನ್ ಮೂಲಕ ಸಲ್ಲಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2014ರ ನವೆಂಬರ್ ನಲ್ಲಿ ಚಾಲನೆ ನೀಡಿದರು.

ಬ್ಯಾಂಕ್ ಖಾತೆಯಿಂದ ಹಣ ವಿಥ್ ಡ್ರಾ ಮಾಡುವುದನ್ನು ಸಹ ಮನೆಯಿಂದ ಕೂತಲ್ಲೇ ಮಾಡಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಐಪಿಪಿಬಿಗೆ ದೇಶದಾದ್ಯಂತ ಜಾಲವಿದ್ದು, ಅಂಚೆ ಕಚೇರಿಗಳಲ್ಲಿ 1,36,000 ಸಂಪರ್ಕ ಕೇಂದ್ರಗಳಿವೆ. 1,89,000ಕ್ಕೂ ಹೆಚ್ಚು ಪೋಸ್ಟ್ ಮನ್ ಮತ್ತು ಗ್ರಾಮೀಣ್ ಡಾಕ್ ಸೇವಕ್ಸ್ ಗಳಿಗೆ ಸ್ಮಾರ್ಟ್ ಫೋನ್ ಗಳು, ಬಯೋಮೆಟ್ರಿಕ್ ಸಲಕರಣೆಗಳನ್ನು ನೀಡಿ, ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸಲು ನೆರವಾಗುತ್ತದೆ ಎಂದು ತಿಳಿಸಲಾಗಿದೆ.

ದೇಶದಾದ್ಯಂತ ಇರುವ ದೊಡ್ಡ ಸಂಖ್ಯೆಯ ಪಿಂಚಣಿದಾರರು ಪೋಸ್ಟ್ ಮ್ಯಾನ್/ಗ್ರಾಮೀಣ್ ಡಾಕ್ ಸೇವಕ್ ಮೂಲಕ ಮನೆ ಬಾಗಿಲಿಗೆ ಸೇವೆ ಪಡೆಯಬಹುದು. ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯ ಇಲ್ಲದೆ ಅಥವಾ ಸರತಿಯಲ್ಲಿ ನಿಲ್ಲುವ ಅಗತ್ಯ ಇಲ್ಲದೆ ಸೇವೆ ಪಡೆಯಬಹುದು ಎನ್ನಲಾಗಿದೆ.

ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನ್ನು ಮನೆ ಬಾಗಿಲಲ್ಲೇ ಸಲ್ಲಿಸುವುದಕ್ಕೆ ippbonline.com ವೆಬ್ ಸೈಟ್ ಮೂಲಕ ಮಾಹಿತಿ ಪಡೆಯಬಹುದು

English summary

Postmen To Help Central Government Pensioners To Submit Life Certificate Online, Govt

Postmen to help central government pensioners to submit life certificate online, said government.
Story first published: Thursday, November 12, 2020, 21:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X