ದೇಶದ ಎಕ್ಸ್‌ಪ್ರೆಸ್‌ವೇಗಳಲ್ಲಿ ಪುಣೆ-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪ್ರಮುಖವಾಗಿದೆ. ಇದು ಸರಿಸುಮಾರು 700 ಕಿಲೋಮೀಟರ್‌ಗಳಷ್ಟು ದೂರವನ್ನು ವ್ಯಾಪಿಸಿದೆ. ಮಹಾರಾಷ್ಟ್ರದ ಎರಡನೇ ಅತೀ ದೊಡ್ಡ ಪುಣೆ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರು ನಡುವೆ ಇದು ಸಂಪರ್ಕವನ್ನು ಕಲ್ಪಿಸುತ್ತದೆ. ಭಾರತಮಾಲಾ ಪರಿಯೋಜನಾ ಹಂತ-2 ರ ಅಡಿಯಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇದನ್ನು ಅಭಿವೃದ್ಧಿಪಡಿಸುತ್ತಿದೆ.
ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿ NH-48 (ಹಳೆಯ NH-4) ಗೆ ಹೋಲಿಸಿದರೆ ಈ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ವೇಗವಾದ ಮತ್ತು ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ. ಎಂಟು ಪಥದ ಪ್ರವೇಶ-ನಿಯಂತ್ರಿತ ವಿನ್ಯಾಸದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೆದ್ದಾರಿಯು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆಗೊಳಿಸುತ್ತದೆ. ಹೊಸ 6-ಲೇನ್‌ನ ಹೆದ್ದಾರಿಯು (8 ಲೇನ್‌ವರೆಗೆ ವಿಸ್ತರಿಸಬಹುದಾದ) ಗ್ರೀನ್‌ಫೀಲ್ಡ್ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ಆಗಿದೆ.

ಪುಣೆ- ಬೆಂಗಳೂರು ಎಕ್ಸ್‌ಪ್ರೆಸ್‌ವೇ ಯೋಜನೆಯ ಪ್ರಮುಖ ವಿವರಗಳು
ಅಂದಾಜು ಯೋಜನಾ ವೆಚ್ಚ: ಸುಮಾರು 55,072 ಕೋಟಿ ರೂಪಾಯಿಗಳು
ಒಟ್ಟಾರೆ ಯೋಜನೆಯ ಉದ್ದ: 702.439 ಕಿಮೀ
ಲೇನ್ಸ್: 6 ಲೇನ್‌ಗಳು (8 ಲೇನ್‌ಗಳವರೆಗೆ ವಿಸ್ತರಿಸಬಹುದು)
ರೈಟ್ ಆಫ್ ವೇ: 100 ಮೀ
ಭೂಸ್ವಾಧೀನ: 7,900 ಹೆಕ್ಟೆರ್
ಅಂದಾಜು ಪೂರ್ಣಗೊಳಿಸುವಿಕೆಯ ಅಂತಿಮ ದಿನಾಂಕ: 2027
ಮಾಲೀಕರು/ಏಜೆನ್ಸಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಈ ಎಕ್ಸ್‌ಪ್ರೆಸ್‌ವೇ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಪ್ರಸ್ತಾವಿತ ಯೋಜನೆಯಲ್ಲಿ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ದಾವಣಗೆರೆ ಮತ್ತು ತುಮಕೂರು ಸೇರಿವೆ. ಇದು ಪುಣೆ ರಿಂಗ್ ರೋಡ್‌ನಿಂದ ಪ್ರಾರಂಭವಾಗುತ್ತದೆ. ಇದು ಮಹಾರಾಷ್ಟ್ರದ ಉಳಿದ ಭಾಗಗಳಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
ಪುಣೆ, ಭೋರ್, ಖಂಡಾಲ, ಫಾಲ್ತಾನ್, ಖಾನಾಪುರ, ಸತಾರಾ, ತಾಸಗಾಂವ್, ಮೀರಜ್, ಕವತೆಮಹಂಕಲ್, ಸಾಂಗ್ಲಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಈ ಎಕ್ಸ್‌ಪ್ರೆಸ್‌ವೇ ಉದ್ದಕ್ಕೂ ಇರುವ ಪ್ರಮುಖ ನಗರಗಳಾಗಿವೆ.

ಈ ಉದ್ದೇಶಿತ ಎಕ್ಸ್‌ಪ್ರೆಸ್‌ವೇ ಮಹಾರಾಷ್ಟ್ರದ ಮೂರು ಜಿಲ್ಲೆಗಳಾದ ಪುಣೆ, ಸತಾರಾ ಮತ್ತು ಸಾಂಗ್ಲಿ ಮೂಲಕ ಹಾದು ಹೋಗುತ್ತದೆ. ಪ್ರಸ್ತಾವಿತ ಯೋಜನೆಯು ಕರ್ನಾಟಕದ ಒಂಬತ್ತು ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಬೆಂಗಳೂರು ಜಿಲ್ಲೆಗಳನ್ನು ಒಳಗೊಂಡಿದೆ.


Click it and Unblock the Notifications