For Quick Alerts
ALLOW NOTIFICATIONS  
For Daily Alerts

ಬಜಾಜ್ ಫೈನಾನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ

|

ಈ ತಿಂಗಳ ಕೊನೆಯಲ್ಲಿ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ರಾಹುಲ್ ಬಜಾಜ್ ಕೆಳಗಿಳಿಯಲಿದ್ದಾರೆ ಎಂದು ಕಂಪನಿಯು ಮಂಗಳವಾರ ತಿಳಿಸಿದೆ. ಅವರ ನಂತರ ಹಾಲಿ ಉಪಾಧ್ಯಕ್ಷರಾದ ಸಂಜೀವ್ ಬಜಾಜ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬಜಾಜ್ ಫೈನಾನ್ಸ್ ತಿಳಿಸಿದೆ.

 

ಕಂಪನಿಯ ಕಾರ್ಯನಿರ್ವಾಹಕ ಅಧ್ಯಕ್ಷರಲ್ಲದ ರಾಹುಲ್ ಬಜಾಜ್, 1987 ರಲ್ಲಿ ಕಂಪನಿಯ ಪ್ರಾರಂಭದಿಂದಲೂ ಮತ್ತು ಐದು ದಶಕಗಳಿಂದಲೂ ಕಂಪನಿಯ ಚುಕ್ಕಾಣಿ ಹಿಡಿದಿದ್ದರು. ಆದಾಗ್ಯೂ, ರಾಹುಲ್ ಬಜಾಜ್ ಕಂಪನಿಗೆ ಕಾರ್ಯನಿರ್ವಾಹಕೇತರ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ಅದು ಹೇಳಿದೆ.

 

ಬಜಾಜ್ ನಿಂದ ಹೊಸ ಡಾಮಿನರ್ ಟೂರರ್ ಬೈಕ್- 250 ಬಿಡುಗಡೆಬಜಾಜ್ ನಿಂದ ಹೊಸ ಡಾಮಿನರ್ ಟೂರರ್ ಬೈಕ್- 250 ಬಿಡುಗಡೆ

ಆಗಸ್ಟ್ 1 ರಿಂದ ರಾಹುಲ್ ಬಜಾಜ್ ಬದಲಿಗೆ ಸಂಜೀವ್ ಬಜಾಜ್ ನೇಮಕಕ್ಕೆ ಕಂಪನಿಯ ಮಂಡಳಿ ಅನುಮೋದನೆ ನೀಡಿದೆ ಎಂದು ಫೈಲಿಂಗ್ ತಿಳಿಸಿದೆ. ಸಂಜೀವ್ ಬಜಾಜ್ ಅವರು 2013 ರಿಂದ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶುರೆನ್ಸ್ ಕಂಪನಿ ಮತ್ತು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯ ಮಂಡಳಿಯ ಅಧ್ಯಕ್ಷರಾಗಿದ್ದಾರೆ. ಅವರು ಬಜಾಜ್ ಹೋಲ್ಡಿಂಗ್ಸ್ ಮತ್ತು ಇನ್ವೆಸ್ಟ್ಮೆಂಟ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಬಜಾಜ್ ಫೈನಾನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಬಜಾಜ್ ರಾಜೀನಾಮೆ

ಕಂಪನಿಯ ದುರ್ಬಲ ಕಾರ್ಯಕ್ಷಮತೆ ಮತ್ತು ನಾಯಕತ್ವದ ಬದಲಾವಣೆಯ ಘೋಷಣೆಯಿಂದಾಗಿ ಕಂಪನಿಯ ಷೇರುಗಳು ಸುಮಾರು 4% ರಷ್ಟು ಕುಸಿದವು.

Read more about: finance ಹಣಕಾಸು
English summary

Rahul Bajaj steps down as Chairman of Bajaj Finance

Rahul Bajaj Resigns As Bajaj Finance Non Executive Chairperson
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X