For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರಿಗೆ ಬಿಗ್ ರಿಲೀಫ್:ಮ್ಯೂಚುವಲ್ ಫಂಡ್‌ಗೆ 50,000 ಕೋಟಿ ವಿಶೇಷ ಪ್ಯಾಕೇಜ್‌ ಘೋಷಿಸಿದ RBI

|

ಕೊರೊನಾ ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ಬಹು ದೊಡ್ಡ ರಿಲೀಫ್ ನೀಡಿದೆ. ಮ್ಯೂಚುವಲ್ ಫಂಡ್‌ಗಳಿಗೆ ಸೋಮವಾರ 50,000 ಕೋಟಿ ರುಪಾಯಿಯ ವಿಶೇಷ ದ್ರವ್ಯತಾ ವ್ಯವಸ್ಥೆ ಕಲ್ಪಿಸಿದೆ.

ಫ್ರಾಂಕ್ಲಿನ್ ಟೆಂಪಲ್ಟನ್ ಬಿಕ್ಕಟ್ಟು ತಲೆದೂರಿದ ಬಳಿಕ ಮ್ಯೂಚುವಲ್ ಫಂಡ್ ಹೂಡಿಕೆದಾರರು ಕಂಗಾಲಾಗಿದ್ದರು. ಇದರಿಂದಾಗಿ ಬಂಡವಾಳ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ
ಮ್ಯೂಚುವಲ್ ಫಂಡ್‌ ಹೂಡಿಕೆದಾರರಿಗೆ ಆರ್‌ಬಿಐ ಇದೀಗ ರಿಲೀಫ್ ನೀಡಿದೆ.

ಮ್ಯೂಚುವಲ್ ಫಂಡ್‌ಗಳಿಗೆ 50,000 ಕೋಟಿ ವಿಶೇಷ ಪ್ಯಾಕೇಜ್‌ ಘೋಷಿಸಿದ RBI

ರಾಷ್ಟ್ರವ್ಯಾಪಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಣಕಾಸು ಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣವನ್ನು ಬಗೆಹರಿಸಲು ಮ್ಯೂಚುವಲ್ ಫಂಡ್ ಗಳ ಮೇಲಿನ ದ್ರವ್ಯತೆ ಒತ್ತಡವನ್ನು ಸುಗಮಗೊಳಿಸಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ.

''ಆರ್ಥಿಕ ಮಾರುಕಟ್ಟೆ ಪೂರ್ಣವಾಗಿ ಕುಸಿದಿರುವ ಈ ಸಮಯದಲ್ಲಿ ಆರ್ಥಿಕ ಸ್ಥಿರತೆ ಸಾಧಿಸಲು ಹೆಚ್ಚು ಜಾಗರೂಕತೆಯಿಂದ ಕ್ರಮ ಕೈಗೊಳ್ಳಲಾಗುವುದು. ಮ್ಯೂಚುವಲ್ ಫಂಡ್ ಗಳ ಮೇಲಿನ ದ್ರವ್ಯತೆ ಒತ್ತಡವನ್ನು ನಿವಾರಿಸಲು 50 ಸಾವಿರ ಕೋಟಿ ರೂಪಾಯಿಗಳ ಮ್ಯೂಚುವಲ್ ಫಂಡ್ ಗಳ ವಿಶೇಷ ದ್ರವ್ಯತೆ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ'' ಎಂದು ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೌಲಭ್ಯದಡಿ, ಆರ್‌ಬಿಐ ನಿರ್ದಿಷ್ಟ ದರದಲ್ಲಿ 90 ದಿನಗಳ ರೆಪೋ ಕಾರ್ಯಾಚರಣೆ ನಡೆಸಬಹುದಾಗಿದೆ. ಈ ಹಣವನ್ನು ಪಡೆಯಲು ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರ ನಡುವೆ ಬ್ಯಾಂಕುಗಳು ತಮ್ಮ ಬಿಡ್ ಗಳನ್ನು ಸಲ್ಲಿಸಬಹುದು. ಇಂದಿನಿಂದ ಮೇ 11ರವರೆಗೆ ಅಥವಾ ಹಂಚಿಕೆಯಾದ ಹಣ ಬಳಕೆಯಾಗುವವರೆಗೆ ಯಾವುದು ಮೊದಲು ಅನ್ವಯವಾಗುತ್ತದೆಯೋ ಅಲ್ಲಿಯವರೆಗೆ ಈ ಸೌಲಭ್ಯ ಅನ್ವಯವಾಗಲಿದೆ.

ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್ ಫಂಡ್ ಬಂದ್: 30,800 ಕೋಟಿ ಹಣ ಲಾಕ್ಭಾರತದಲ್ಲಿ ಫ್ರಾಂಕ್ಲಿನ್ ಟೆಂಪಲ್ಟನ್‌ನ 6 ಮ್ಯೂಚುವಲ್ ಫಂಡ್ ಬಂದ್: 30,800 ಕೋಟಿ ಹಣ ಲಾಕ್

ಇತ್ತೀಚೆಗಷ್ಟೇ ಅಮೆರಿಕಾ ಮೂಲದ ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಏಪ್ರಿಲ್ 23ರಿಂದ ಅನ್ವಯವಾಗುವಂತೆ ಭಾರತದಲ್ಲಿನ ಆರು ಸ್ಥಿರ ಆದಾಯದ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಬಂದ್ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ಉಂಟಾಗಿರುವುದರ ಜೊತೆಗೆ ಮ್ಯೂಚುವಲ್ ಫಂಡ್ ವಹಿವಾಟು ಇಲ್ಲದಿರುವುದು ದೊಡ್ಡ ಪರಿಣಾಮ ಬೀರಿದೆ ಎಂದು ತಿಳಿಸಿದೆ.

English summary

RBI Announeces 50,000 Crore Special Liquidity Facility For Mutual Funds

Big Relief For Mutual Fund Investors, RBI Announeces 50,000 Crore Special Liquidity Facility For Mutual Funds
Story first published: Monday, April 27, 2020, 14:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X