For Quick Alerts
ALLOW NOTIFICATIONS  
For Daily Alerts

ದಿವಾಳಿಯಾದ DHFLಗೆ ಮೂವರ ಸಲಹಾ ಸಮಿತಿ ರಚಿಸಿದ ಆರ್‌ಬಿಐ

|

ಬ್ಯಾಂಕುಗಳಿಂದ ಮತ್ತು ಮುಕ್ತ ಮಾರುಕಟ್ಟೆಯಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ವಿಫಲವಾಗಿರುವ ಗೃಹ ನಿರ್ಮಾಣ ಸಂಸ್ಥೆ ಡಿಹೆಚ್ಎಫ್ಎಲ್ ಗೆ ಮೂವರು ಸದಸ್ಯರ ಸಲಹಾ ಸಮಿತಿಯನ್ನು ಆರ್‌ಬಿಐ ಶುಕ್ರವಾರ ನೇಮಿಸಿದೆ. ನಿರ್ದೇಶಕ ಮಂಡಳಿಯನ್ನು ರದ್ದು ಪಡಿಸಿರುವ ಡಿಹೆಚ್ಎಫ್ಎಲ್‌ಗೆ ನೇಮಿಸಿರುವ ಆಡಳಿತಗಾರನಿಗೆ ನೆರವಾಗಲು ಈ ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿದೆ.

ಬ್ಯಾಂಕ್, ಮ್ಯೂಚುವಲ್ ಫಂಡ್, ನ್ಯಾಷನಲ್ ಹೌಸಿಂಗ್ ಬೋರ್ಡ್‌ನಿಂದ ಮತ್ತು ಬಾಂಡ್ ಹೊಂದಿರುವವರಿಗೆ ಡಿಹೆಚ್ಎಫ್ಎಲ್ 83,873 ಕೋಟಿ ಸಾಲವನ್ನು ನೀಡಬೇಕಿದೆ. ಈ ಸಾಲವನ್ನು ವಸೂಲಿ ಮಾಡಲು ಸಲಹಾ ಸಮಿತಿಯು ಆಡಳಿತಗಾರನಿಗೆ ನೆರವಾಗಲಿದೆ.

ದಿವಾಳಿಯಾದ DHFLಗೆ ಮೂವರ ಸಲಹಾ ಸಮಿತಿ ರಚಿಸಿದ ಆರ್‌ಬಿಐ

ದಿವಾಳಿ ನೀತಿ ಸಂಹಿತೆಯಡಿ ಡಿಹೆಚ್ಎಫ್ಎಲ್ ನಿರ್ದೇಶಕ ಮಂಡಳಿಯನ್ನು ರದ್ದು ಮಾಡಿರುವ ಆರ್‌ಬಿಐ ಬಿಕ್ಕಟ್ಟು ಬಗೆಹರಿಸುವುದಾಗಿ ಹೇಳಿದೆ. ದಿವಾಳಿ ನೀತಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆಗೆ ಒಳಪಟ್ಟಿರುವ ಮೊದಲ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಇದಾಗಿದೆ. ಈ ವರ್ಷ ಡಿಹೆಚ್ಎಫ್‌ನ ಷೇರುಗಳು ಶೇಕಡಾ 90ರಷ್ಟು ಕುಸಿತ ಕಂಡಿವೆ.

ಈ ಹಿಂದೆ ಸಾಲ ನೀಡಿರುವ ಬ್ಯಾಂಕ್ ಮತ್ತು ಮ್ಯೂಚುವಲ್ ಫಂಡ್‌ಗಳು ತಮ್ಮ ಪಾಲಿನ ಸಾಲವನ್ನು ಷೇರುಗಳಾಗಿ ಪರಿವರ್ತಿಸಿ ಶೇಕಡಾ 51ರಷ್ಟು ಪಾಲು ಬಂಡವಾಳ ಹೊಂದಲು ಉದ್ದೇಶಿಸಿವೆ. ಆದರೆ ಇದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

English summary

RBI Moves On DHFL, Institutes 3 Member Panel

The reserve bank of india bolstering its role as a financial services regulator, set up a 3 member advisory committee on Friday
Story first published: Saturday, November 23, 2019, 9:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X