For Quick Alerts
ALLOW NOTIFICATIONS  
For Daily Alerts

ತಿನ್ನುವ ಪರೋಟ ಮೇಲೆ ಕೇಂದ್ರದ ಕಣ್ಣು; ಬಿತ್ತು ಶೇ 18 ರಷ್ಟು ಜಿಎಸ್‌ಟಿ

|

ನವದೆಹಲಿ, ಜೂನ್ 13: ಕೇಂದ್ರ ಸರ್ಕಾರ, ತಿನ್ನುವ ಪರೋಟಕ್ಕೆ (ಒಂದು ಬಗೆಯ ರೊಟ್ಟಿ) ಶೇ 18 ರಷ್ಟು ಜಿಎಸ್‌ಟಿ ವಿಧಿಸುಲು ಮುಂದಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಕೂಡ ವ್ಯಕ್ತವಾಗಿದೆ. ಸರ್ಕಾರದ ಕಾಲೆಳೆಯಲಾಗಿದೆ.

ಹೋಟೆಲ್‌ಗಳಲ್ಲಿ ಪ್ಲೇನ್ ರೊಟ್ಟಿಯನ್ನು ಅಥವಾ ಪಟೋಟವನ್ನು ಮಾರಿದರೆ ಶೇ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ, ಅದನ್ನೇ ಪ್ಯಾಕ್‌ ಮಾಡಿ ಪರೋಟ ಎಂದು ಮಾರಿದರೆ ಶೇ 18 ರಷ್ಟು ಜಿಎಸ್ ಟಿ ಒಳಪಡುತ್ತದೆ ಎಂದು ಕೇಂದ್ರ ಜಿಎಸ್‌ಟಿ ಮಂಡಳಿ ಶುಕ್ರವಾರ ತೀರ್ಮಾನ ತೆಗೆದುಕೊಂಡಿದೆ.

ಸಂರಕ್ಷಿಸಲ್ಪಟ್ಟ ಅಂದರೆ ಪ್ಯಾಕಿಂಗ್ ಮಾಡಿದ ಪರೋಟಾಗಳು ರೊಟ್ಟಿಯ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವುದಿಲ್ಲ. ಅವು 18% ತೆರಿಗೆಯನ್ನು ಆಕರ್ಷಿಸುತ್ತವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಲು ಹಣಕಾಸು ಸಚಿವಾಲಯ ನಿರಾಕರಿಸಿದೆ ಎನ್ನಲಾಗಿದೆ.

ಪ್ಯಾಕಿಂಗ್ ಪದಾರ್ಥಗಳ ಸಾಲಿಗೆ

ಪ್ಯಾಕಿಂಗ್ ಪದಾರ್ಥಗಳ ಸಾಲಿಗೆ

ಹೋಟೆಲ್‌ಗಳಲ್ಲಿ ಸೇವಿಸುವ ಸಾಮಾನ್ಯ ಪರೋಟಾಗಳು ಶೇ 18% ರಷ್ಟು ಜಿಎಸ್‌ಟಿ ಗೆ ಒಳಪಡುವುದಿಲ್ಲ. ಆದರೆ, ಅವುಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಿದರೇ ದುಬಾರಿ ಜಿಎಸ್‌ಟಿ ಒಳಪಡುತ್ತದೆ ಎನ್ನುವ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಅಗ್ಗದ ಬಿಸ್ಕತ್ತುಗಳು, ಪೇಸ್ಟ್ರಿಗಳು, ಕೇಕುಗಳು ​​ಮುಂತಾದ ಪ್ಯಾಕಿಂಗ್ ವಸ್ತುಗಳು 18% ಜಿಎಸ್‌ಟಿಯನ್ನು ವಿಧಿಸುತ್ತವೆ. ಪ್ಯಾಕಿಂಗ್ ಪರೋಟವೂ ಇದೇ ಸಾಲಿಗೆ ಸೇರುತ್ತದೆ ಎಂಬುದು ಕೇಂದ್ರದ ವಾದವಾಗಿದೆ.

ಜಿಎಸ್‌ಟಿ ಮಂಡಳಿಯ 37 ನೇ ಸಭೆಯಲ್ಲಿ

ಜಿಎಸ್‌ಟಿ ಮಂಡಳಿಯ 37 ನೇ ಸಭೆಯಲ್ಲಿ

ಈ ಬಗ್ಗೆ ಜಿಎಸ್‌ಟಿ ಮಂಡಳಿಯ 37 ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೋಟಗಳನ್ನು ಸಂಘಟಿತ ವಲಯದಿಂದ ಮಾರಾಟ ಮಾಡಲಾಗುತ್ತದೆ ಎಂಬ ಕಾರಣಕ್ಕಾಗಿ ಪ್ಯಾಕಿಂಗ್ ಪರೋಟಾದ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆ ಮಾಡಲು ಮಂಡಳಿ ಶಿಫಾರಸು ಮಾಡಿಲ್ಲ ಎನ್ನಲಾಗಿದೆ. ಹೀಗಾಇ ಶೇ 18 ರಷ್ಟು ತೆರಿಗೆಯನ್ನು ಪರೋಟ ಪ್ರಿಯರು ಪಾವತಿಸಬೇಕಾಗುತ್ತದೆ.

ತೀವ್ರ ಟೀಕೆ ವ್ಯಕ್ತವಾಗಿದೆ

ತೀವ್ರ ಟೀಕೆ ವ್ಯಕ್ತವಾಗಿದೆ

ಪ್ಯಾಕಿಂಗ್ ಮಾಡಿದ ಪರೋಟಕ್ಕೆ ಕೇಂದ್ರ ಸರ್ಕಾರ ಶೇ 18 ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಬಡವರ ರೋಟಿ ಮೇಲೆ ಏಕೆ ಸರ್ಕಾರದ ಕಣ್ಣು ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾಲೆಳೆಯಲಾಗಿದೆ. ಮೆಮ್‌ಗಳನ್ನು ಹರಿಬಿಡಲಾಗಿದೆ.

ಕುಲ್ಚಾಗಳಿಗೆ ಶೇ 28 ಜಿಎಸ್‌ಟಿ ಕಟ್ಟಬೇಕಾ?

ಕುಲ್ಚಾಗಳಿಗೆ ಶೇ 28 ಜಿಎಸ್‌ಟಿ ಕಟ್ಟಬೇಕಾ?

ಟ್ವಿಟ್ಟರ್ ನಲ್ಲಿ ರಮೇಶ್ ಶ್ರೀವಾತ್ಸವ್ ಎನ್ನುವರು ಪ್ಲೇನ್ ರೋಟಿಗೆ ಶೇ 5 ರಷ್ಟು ಜಿಎಸ್‌ಟಿ, ಪರೋಟಾಕ್ಕೆ ಶೇ 18 ಜಿಎಸ್‌ಟಿ ಕೊಟ್ಟರೇ, ಕುಲ್ಚಾಗಳಿಗೆ ಶೇ 28 ಜಿಎಸ್‌ಟಿ ಕಟ್ಟಬೇಕಾ ಎಂದು ವ್ಯಂಗ್ಯಭರಿತವಾಗಿ ಪರೋಟಾ ಮೇಲಿನ ಜಿಎಸ್‌ಟಿ ಹೆಚ್ಚಳವನ್ನು ವಿರೋಧಿಸಿದ್ದಾರೆ.

English summary

Ready-To-Eat Frozen Parotas to Attract 18% GST

18 Per Cent GST On Paking Parota By Central GST Council. In restaurant Fresh parotas are attracts 5% GST, frozen parotas are attracts 18% GST, this is very much criticize in social media.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X