For Quick Alerts
ALLOW NOTIFICATIONS  
For Daily Alerts

54.7 ಲಕ್ಷ ಹೊಸ ಗ್ರಾಹಕರನ್ನು ಸೆಳೆದ ಜಿಯೋ, ವೊಡಾಫೋನ್ ಐಡಿಯಾಗೆ ಮತ್ತಷ್ಟು ನಷ್ಟ!

|

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಜೂನ್ 2021 ರ ವರದಿಯನ್ನು ಬಿಡುಗಡೆ ಮಾಡಿದ್ದು, ರಿಲಯನ್ಸ್ ಜಿಯೋ ಅತಿ ಹೆಚ್ಚು ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

 

ಅತಿದೊಡ್ಡ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಹಲವಾರು ಲಕ್ಷ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದ್ದು, ವೊಡಾಫೋನ್ ಐಡಿಯಾ ಸ್ಥಿತಿ ಮೊದಲಿಗಿಂತ ಕೆಟ್ಟದಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಜೂನ್ ನಲ್ಲಿ 54.7 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿಕೊಂಡರೆ, ಭಾರ್ತಿ ಏರ್‌ಟೆಲ್ 38.1 ಲಕ್ಷ ಹೊಸ ಗ್ರಾಹಕರನ್ನು ಸೇರಿಸಿದೆ. ಆದರೆ ಮತ್ತೊಂದೆಡೆ, ವೊಡಾಫೋನ್ ಐಡಿಯಾ ಸತತ ಎರಡನೇ ತಿಂಗಳಲ್ಲಿ ಸುಮಾರು 42.8 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ.

ಜೂನ್‌ನಲ್ಲಿ ಹೆಚ್ಚಾದ ವೈರ್‌ಲೆಸ್ ಬಳಕೆದಾರರು

ಜೂನ್‌ನಲ್ಲಿ ಹೆಚ್ಚಾದ ವೈರ್‌ಲೆಸ್ ಬಳಕೆದಾರರು

ಮೇ 2021 ರ ಅಂತ್ಯದ ವೇಳೆಗೆ ಒಟ್ಟು ವೈರ್‌ಲೆಸ್ ಗ್ರಾಹಕರ ಸಂಖ್ಯೆ 1,1764.83 ಮಿಲಿಯನ್‌ನಷ್ಟಿದ್ದು, ಜೂನ್ ತಿಂಗಳಲ್ಲಿ 0.34% ಮಾಸಿಕ ಬೆಳವಣಿಗೆ ದರವನ್ನು ದಾಖಲಿಸಿದೆ. ಜೂನ್‌ನಲ್ಲಿ, ವೈರ್‌ಲೆಸ್ ಗ್ರಾಹಕರು ಮಾಸಿಕ 0.34% ಬೆಳವಣಿಗೆ ದರವನ್ನು ದಾಖಲಿಸಿದ್ದು 1,180.83 ದಶಲಕ್ಷ ಗ್ರಾಹಕರಿಗೆ ಬೆಳೆದಿದೆ.

ನಗರ ಪ್ರದೇಶಗಳಲ್ಲಿ ಜೂನ್ 21 ರ ಅಂತ್ಯಕ್ಕೆ ವೈರ್‌ಲೆಸ್ ಬಳಕೆದಾರರ ಸಂಖ್ಯೆ 641.48 ಮಿಲಿಯನ್‌ನಿಂದ 646.29 ಮಿಲಿಯನ್‌ಗೆ ಹೆಚ್ಚಾಯಿತು. ಆದಾಗ್ಯೂ, ಗ್ರಾಮೀಣ ಪ್ರದೇಶಗಳಲ್ಲಿ ವೈರ್‌ಲೆಸ್ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ.

 

ಗ್ರಾಮೀಣ ಪ್ರದೇಶಗಳಲ್ಲಿ ವೈರ್‌ಲೆಸ್ ಬಳಕೆದಾರರ ಸಂಖ್ಯೆ ಕಡಿಮೆ..!

ಗ್ರಾಮೀಣ ಪ್ರದೇಶಗಳಲ್ಲಿ ವೈರ್‌ಲೆಸ್ ಬಳಕೆದಾರರ ಸಂಖ್ಯೆ ಕಡಿಮೆ..!

ಗ್ರಾಮೀಣ ಪ್ರದೇಶಗಳಲ್ಲಿ ವೈರ್‌ಲೆಸ್ ಬಳಕೆದಾರರ ಸಂಖ್ಯೆ 535.36 ಮಿಲಿಯನ್‌ನಿಂದ 534.54 ಮಿಲಿಯನ್‌ಗೆ ಇಳಿಕೆಯಾಗಿದೆ. ಇದು ಮಾಸಿಕ -0.15 ಕುಸಿತವನ್ನು ತೋರಿಸುತ್ತದೆ. ಜೂನ್ 2021 ರ ಅಂತ್ಯದ ವೇಳೆಗೆ ನಗರ ಮತ್ತು ಗ್ರಾಮೀಣ ಚಂದಾದಾರರ ಪಾಲು ಒಟ್ಟು ವೈರ್‌ಲೈನ್‌ನಲ್ಲಿ ಕ್ರಮವಾಗಿ 91.11% ಮತ್ತು 8.89% ಇತ್ತು. ಜೂನ್ 21 ರ ಕೊನೆಯಲ್ಲಿ ವೈರ್‌ಲೈನ್ ಬಳಕೆದಾರರು 21.66 ಮಿಲಿಯನ್‌ನಿಂದ 21.74 ಮಿಲಿಯನ್‌ಗೆ ಹೆಚ್ಚಿದ್ದಾರೆ.

ಅಗ್ಗದ ಪ್ರಿಪೇಯ್ಡ್ ಯೋಜನೆ: ಇವುಗಳಲ್ಲಿ OTT ಚಂದಾದಾರಿಕೆ ಉಚಿತ

BSNL ಮತ್ತು MTNL ವೈರ್‌ಲೈನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ
 

BSNL ಮತ್ತು MTNL ವೈರ್‌ಲೈನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್‌ಗಳಾದ BSNL ಮತ್ತು MTNL ವೈರ್‌ಲೈನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿವೆ ಮತ್ತು ಜೂನ್ 30, 2021 ರ ವೇಳೆಗೆ ವೈರ್‌ಲೈನ್ ಮಾರುಕಟ್ಟೆಯಲ್ಲಿ 47.60% ಪಾಲನ್ನು ಹೊಂದಿವೆ. ಆದಾಗ್ಯೂ, ವೈರ್‌ಲೆಸ್ ಬಳಕೆದಾರರ ಮಾರುಕಟ್ಟೆಯಲ್ಲಿ, ಖಾಸಗಿ ಟೆಲಿಕಾಂ ಆಪರೇಟರ್‌ಗಳು ಮಾರುಕಟ್ಟೆಯ 89.95% ನಷ್ಟು ಪಾಲನ್ನು ಹೊಂದಿದ್ದರೆ.

BSNL ಮತ್ತು MTNL ಗಳು 10.5% ನಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದವು. ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (MNP) ಸುಮಾರು 12.27 ಮಿಲಿಯನ್ ಗ್ರಾಹಕರು ಜೂನ್ ನಲ್ಲಿ MNP ಗಾಗಿ ತಮ್ಮ ವಿನಂತಿಯನ್ನು ಸಲ್ಲಿಸಿದ್ದಾರೆ.

 ವೊಡಾಫೋನ್ ಐಡಿಯಾ ಈ ಪ್ರಿಪೇಯ್ಡ್‌ ಯೋಜನೆ ಇನ್ಮುಂದೆ ಲಭ್ಯವಿಲ್ಲ

ಜೂನ್ ನಲ್ಲಿ MNP ವಿನಂತಿಗಳು ಹೆಚ್ಚಿವೆ

ಜೂನ್ ನಲ್ಲಿ MNP ವಿನಂತಿಗಳು ಹೆಚ್ಚಿವೆ

ಒಟ್ಟು MNP ವಿನಂತಿಗಳ ಸಂಖ್ಯೆ ಮೇ 2021 ರ ಕೊನೆಯಲ್ಲಿ 593.61 ದಶಲಕ್ಷದಿಂದ, ಜೂನ್ 2021 ರ ಅಂತ್ಯದ ವೇಳೆಗೆ 605.88 ಮಿಲಿಯನ್‌ಗೆ ಹೆಚ್ಚಾಗಿದೆ. ಬ್ರಾಡ್‌ಬ್ಯಾಂಡ್ ಬಳಕೆದಾರರ ವಿಭಾಗವು 1.60% ಬೆಳವಣಿಗೆ ದರವನ್ನು ಕಂಡಿದೆ ಎಂದು TRAI ಡೇಟಾ ತೋರಿಸಿದೆ. ಬ್ರಾಡ್‌ಬ್ಯಾಂಡ್ ಚಂದಾದಾರರು ಜೂನ್ 2021 ರ ಕೊನೆಯಲ್ಲಿ 792.78 ಮಿಲಿಯನ್‌ಗಳಷ್ಟಿದ್ದರು.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಬಹಿರಂಗಪಡಿಸಿರುವ ಮಾಹಿತಿಯು, 2021 ರ ಜೂನ್‌ನಲ್ಲಿ ಸಕ್ರಿಯ ವೈರ್‌ಲೆಸ್ ಗ್ರಾಹಕರ ಸಂಖ್ಯೆ 984.79 ಮಿಲಿಯನ್ ಆಗಿತ್ತು ಎಂದು ತೋರಿಸುತ್ತದೆ.

 

English summary

Reliance Jio Adds Highest Number Of Wireless Subscribers In June: VI Loses 43 Lakh Subscribers In June

Vodafone idea continued as the embattled telecom operator lost even more mobile subscribers in June. Meanwhile, rivals Reliance Jio and Bharti Airtel gained more users during the month
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X