For Quick Alerts
ALLOW NOTIFICATIONS  
For Daily Alerts

ಭಾರತದ ಚಿಲ್ಲರೆ ಹಣದುಬ್ಬರ ಮೂರು ವರ್ಷದ ಗರಿಷ್ಠ ಮಟ್ಟ 5.54%

|

ಭಾರತದ ಚಿಲ್ಲರೆ ಹಣದುಬ್ಬರ ದರವು ನವೆಂಬರ್ ನಲ್ಲಿ 5.54% ತಲುಪಿದೆ. ಅಕ್ಟೋಬರ್ ನಲ್ಲಿ ಹಣದುಬ್ಬರ ಪ್ರಮಾಣವು 4.62% ಇತ್ತು. ಈ ನವೆಂಬರ್ ನಲ್ಲಿ ತಲುಪಿರುವ ಮಟ್ಟವು 2016ರಿಂದ ಈಚೆಗೆ ಗರಿಷ್ಠ ಮಟ್ಟವಾಗಿದೆ. ಅಂದಹಾಗೆ RBIನಿಂದ ಮಧ್ಯಮಾವಧಿಗೆ ಹಣದುಬ್ಬರದ ಗುರಿಯನ್ನು 4% ಎಂದು ಇರಿಸಿಕೊಂಡಿತ್ತು.

 

ಆಹಾರ ಪದಾರ್ಥದ ಬೆಲೆಯಲ್ಲಿನ ಹೆಚ್ಚಳವು ಈ ಏರಿಕೆಗೆ ಮುಖ್ಯ ಕಾರಣವಾಗಿದೆ. ಆಹಾರ ಪದಾರ್ಥಗಳ ಏರಿಕೆಯು (ನಗರ ಮತ್ತು ಗ್ರಾಮೀಣ ಪ್ರದೇಶಗಳು) ನವೆಂಬರ್ ನಲ್ಲಿ 10.01%ಗೆ ಏರಿಕೆ ಆಗಿದೆ. ಭಾರತದಲ್ಲಿ ಗ್ರಾಹಕ ದರ ಸೂಚ್ಯಂಕವು ಈ ಮಟ್ಟ ತಲುಪುವಲ್ಲಿ ಆಹಾರ ಪದಾರ್ಥಗಳ ಪಾಲು 45.9% ಇದೆ. ಹಣದುಬ್ಬರ ಏರಿಕೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದ ಪಾತ್ರವೂ ಇದೆ.

 

ನವೆಂಬರ್ ತಿಂಗಳಲ್ಲಿ ತರಕಾರಿ ಹಣದುಬ್ಬರ ಪ್ರಮಾಣ 35.99 ಪರ್ಸೆಂಟ್ ಇದೆ. ಅಕ್ಟೋಬರ್ ನಲ್ಲಿ ಇದು 26.10 ಪರ್ಸೆಂಟ್ ಇತ್ತು. ಅದೇ ರೀತಿ ಕಾಳುಗಳು ಮತ್ತು ಮೊಟ್ಟೆ 3.71% ಏರಿಕೆಯಾಗಿದೆ. ಇನ್ನು ಮಾಂಸ ಮತ್ತು ಮೀನು ವಾರ್ಷಿಕವಾಗಿ 9.38 ಪರ್ಸೆಂಟ್ ಹೆಚ್ಚಿದ್ದರೆ, ನವೆಂಬರ್ ನಲ್ಲಿ ಮೊಟ್ಟೆ 6.2 ಪರ್ಸೆಂಟ್ ಏರಿಕೆಯಾಗಿದೆ.

ಭಾರತದ ಚಿಲ್ಲರೆ ಹಣದುಬ್ಬರ ಮೂರು ವರ್ಷದ ಗರಿಷ್ಠ ಮಟ್ಟ 5.54%

ಅಂದಹಾಗೆ, ಗ್ರಾಹಕ ದರ ಸೂಚ್ಯಂಕದ ಮೇಲೆ ಅವಲಂಬಿಸಿದ ಹಣದುಬ್ಬರವು ಅಕ್ಟೋಬರ್ ನಲ್ಲಿ 4.62% ಇತ್ತು. 2018ರ ನವೆಂಬರ್ ನಲ್ಲಿ ಈ ಪ್ರಮಾಣ 2.33% ಇತ್ತು. ಮುಖ್ಯವಾಗಿ ಈರುಳ್ಳಿ ದರವು 45.3 ಪರ್ಸೆಂಟ್ ಸೆಪ್ಟೆಂಬರ್ ನಲ್ಲಿ ಹೆಚ್ಚಳವಾಗಿದೆ. ಅಕ್ಟೋಬರ್ ನಲ್ಲಿ ಮತ್ತೂ 19.6% ಹೆಚ್ಚಾಗಿದೆ.

ಹಣದುಬ್ಬರ ಲೆಕ್ಕಾಚಾರದ ಅರ್ಧದಷ್ಟು ಚಿಲ್ಲರೆ ಆಹಾರ ಪದಾರ್ಥಗಳೇ ಆಗುತ್ತವೆ. ಅವು ನವೆಂಬರ್ ನಲ್ಲಿ 10.01% ಏರಿಕೆಯಾಗಿದೆ. ಅದು ನವೆಂಬರ್ ನಲ್ಲಿ 7.89% ಇತ್ತು. ಪ್ರಮುಖ ಹಣದುಬ್ಬರದಲ್ಲಿ ಅಕ್ಟೋಬರ್ ನಲ್ಲಿ ಇದ್ದ 3.5% ಹಾಗೇ ಮುಂದುವರಿದಿದೆ.

English summary

Retail inflation 3 Year High Of 5.54 Percent In November

India's retail inflation touched 3 year high of 5.54% in November 2019. Here is the complete details.
Story first published: Thursday, December 12, 2019, 20:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X