For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ: ಮುಕೇಶ್ ಅಂಬಾನಿ ಮಾತುಗಳು

|

ಬುಧವಾರ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರು ಸಂಸ್ಥೆಯ 43ನೇ ವಾರ್ಷಿಕ ಷೇರುದಾರರ ಸಭೆಯಲ್ಲಿ ಮಾತನಾಡಿದರು. ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಹೂಡಿಕೆದಾರರಾಗಿ ಗೂಗಲ್‌ ಅನ್ನು ಅಂಬಾನಿ ಸ್ವಾಗತಿಸಿದರು.

ಎರಡೂ ಸಂಸ್ಥೆಗಳು ಬದ್ಧಪಡಿಸುವ ಪಾಲುದಾರಿಕೆ ಹಾಗೂ ಒಪ್ಪಂದಕ್ಕೆ ಸಹಿಹಾಕಿದ್ದು ಅದರ ಅನ್ವಯ ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 7.7% ಪಾಲಿಗಾಗಿ ಗೂಗಲ್ 33,737 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಹೂಡಿಕೆ ಮಾಡಲಿದೆ.

ಮುಕೇಶ್ ಅಂಬಾನಿ ವಿಶ್ವದ 6ನೇ ಅತ್ಯಂತ ಸಿರಿವಂತ: ಆಸ್ತಿ ಮೌಲ್ಯ 7240 ಕೋಟಿ USD

ಸದ್ಯದ ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದು ಕಂಪನಿಯ ಮೊದಲ ಆನ್‌ಲೈನ್ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ಆಗಿತ್ತು. ಇಂದಿನ ಮಹತ್ವದ ಸಭೆಯಲ್ಲಿ ಮುಕೇಶ್ ಅಂಬಾನಿ ಅವರು ಮಾಡಿದ ಭಾಷಣದ ಪ್ರಮುಖಾಂಶಗಳು ಇಲ್ಲಿವೆ.

ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್
 

ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್

ಗೂಗಲ್ ಹಾಗೂ ಜಿಯೋ ಪಾಲುದಾರಿಕೆಯಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಮ್ ಅನ್ನು ನಿರ್ಮಿಸಲಾಗುವುದು, ಮತ್ತು ಜಿಯೋ-ಗೂಗಲ್‌ಗಳ ಈ ಪಾಲುದಾರಿಕೆಯು ಭಾರತವನ್ನು 2ಜಿ-ಮುಕ್ತವನ್ನಾಗಿಸಲು ನಿರ್ಧರಿಸಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಭಾರತವು 5ಜಿ ಯುಗದ ಹೊಸ್ತಿಲಿನಲ್ಲಿ ನಿಂತಿರುವುದರಿಂದ, ಪ್ರಸ್ತುತ 2ಜಿ ಫೀಚರ್ ಫೋನ್ ಬಳಸುತ್ತಿರುವ 350 ದಶಲಕ್ಷ ಭಾರತೀಯರನ್ನು ಕೈಗೆಟುಕುವ ಸ್ಮಾರ್ಟ್ ಫೋನ್‌ಗೆ ಸ್ಥಳಾಂತರಿಸಬೇಕು ಎಂದು ಅವರು ಹೇಳಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ರೀಟೇಲರ್ ಆಗಿದೆ

ವೇಗವಾಗಿ ಬೆಳೆಯುತ್ತಿರುವ ರೀಟೇಲರ್ ಆಗಿದೆ

1,62,936 ಕೋಟಿ ರೂ.ಗಳ ವರಮಾನ ಮತ್ತು 9,654 ಕೋಟಿ ರೂ.ಗಳ ಇಬಿಐಟಿಡಿಎನೊಂದಿಗೆ ರಿಲಯನ್ಸ್ ರಿಟೇಲ್ ಭಾರತದ ಅತಿದೊಡ್ಡ ಮತ್ತು ಅತ್ಯಂತ ಹೆಚ್ಚು ಲಾಭದಾಯಕ ರೀಟೇಲ್ ವ್ಯಾಪಾರವಾಗಿದ್ದು, ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರೀಟೇಲರ್ ಆಗಿದೆ. ಅಲ್ಲದೆ ಅಗ್ರ 100 ಜಾಗತಿಕ ರೀಟೇಲರ್‌ಗಳ ಪಟ್ಟಿಯಲ್ಲಿ ಸ್ಥಾನಪಡೆದಿರುವ ಏಕೈಕ ಭಾರತೀಯ ಸಂಸ್ಥೆಯಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಲಕ್ಷಾಂತರ ಭಾರತೀಯ ಸಣ್ಣ ವ್ಯಾಪಾರಿಗಳಿಗೆ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಮತ್ತು ಗ್ರಾಹಕರು ಕಿರಾಣಿ ಅಂಗಡಿಗಳೊಂದಿಗೆ ತೊಡಕಿಲ್ಲದೆ ವಹಿವಾಟು ನಡೆಸುವುದನ್ನು ಸಾಧ್ಯವಾಗಿಸಲು ಜಿಯೋಮಾರ್ಟ್ ಮತ್ತು ವಾಟ್ಸಾಪ್ ನಿಕಟವಾಗಿ ಕಾರ್ಯನಿರ್ವಹಿಸಲಿವೆ ಎಂದೂ ಅವರು ಹೇಳಿದ್ದಾರೆ. ಭಾರತದಾದ್ಯಂತ ಗ್ರಾಹಕರು ಮಾತ್ರವಲ್ಲದೆ ಎಸ್‌ಎಂಇಗಳು ಮತ್ತು ಉದ್ಯಮಿಗಳನ್ನೂ ಡಿಜಿಟಲ್ ಸಬಲೀಕರಣಗೊಳಿಸಲು ಫೇಸ್‌ಬುಕ್ ಮತ್ತು ಜಿಯೋ ಸದೃಢ ದೂರದೃಷ್ಟಿಯನ್ನು ಹಂಚಿಕೊಳ್ಳುತ್ತವೆ ಎಂದು ಆರ್‌ಐಎಲ್ ಮುಖ್ಯಸ್ಥ ಅಂಬಾನಿ ಹೇಳಿದ್ದಾರೆ.

ಸಂಪೂರ್ಣ 5ಜಿ
 

ಸಂಪೂರ್ಣ 5ಜಿ

ಸಂಪೂರ್ಣ 5ಜಿ ಪರಿಹಾರವೊಂದನ್ನು ಜಿಯೋ ಹೊಸದಾಗಿ ಅಭಿವೃದ್ಧಿಪಡಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. 5ಜಿ ಸ್ಪೆಕ್ಟ್ರಮ್ ಲಭ್ಯವಾದ ತಕ್ಷಣ ಇದಕ್ಕಾಗಿ ಪ್ರಯೋಗಗಳನ್ನು ಪ್ರಾರಂಭಿಸಲಾಗುತ್ತದೆ. ಮಾಧ್ಯಮ, ಹಣಕಾಸು ಸೇವೆಗಳು, ಹೊಸ ವಾಣಿಜ್ಯ, ಶಿಕ್ಷಣ, ಆರೋಗ್ಯ, ಕೃಷಿ, ಸ್ಮಾರ್ಟ್ ನಗರಗಳು, ಸ್ಮಾರ್ಟ್ ಉತ್ಪಾದನೆ ಮತ್ತು ಸ್ಮಾರ್ಟ್ ಮೊಬಿಲಿಟಿಯಂತಹ ಅನೇಕ ಉದ್ಯಮ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನಗಳನ್ನು ಬಳಸಿಕೊಂಡು ನಾವು ಸದೃಢ ಪರಿಹಾರಗಳನ್ನು ರಚಿಸಬಹುದು ಎಂದು ಅವರು ಹೇಳಿದ್ದಾರೆ. ಮೂಲ, ನಿರ್ಬಂಧದಲ್ಲಿರುವ ಬೌದ್ಧಿಕ ಆಸ್ತಿಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಜಿಯೋ ಪ್ಲಾಟ್‌ಫಾರ್ಮ್ಸ್‌ ಅನ್ನು ಪ್ರಾರಂಭಿಸಲಾಗಿದೆ. ಇದನ್ನು ಬಳಸಿಕೊಂಡು ನಾವು ಅನೇಕ ಪರಿಸರ ವ್ಯವಸ್ಥೆಗಳಲ್ಲಿ - ಮೊದಲು ಭಾರತದಲ್ಲಿ, ಮತ್ತು ನಂತರ ಪ್ರಪಂಚದ ಉಳಿದ ಭಾಗಗಳಲ್ಲಿ - ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಪ್ರದರ್ಶಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉಚಿತ ಕೋವಿಡ್ ಕಿಟ್

ಉಚಿತ ಕೋವಿಡ್ ಕಿಟ್

ವಿಶ್ವಾಸಾರ್ಹ ಸರಬರಾಜು, ತಾಜಾ ಉತ್ಪನ್ನಗಳು, ಮನೆ ಬಾಗಿಲಿಗೆ ತಲುಪಿಸುವ ಸೇವೆ; ಉತ್ತಮ ಮೌಲ್ಯ ಮತ್ತು ಆಕರ್ಷಕ ಬೆಲೆಗಳು; ಬಹು ಭಾಷೆಗಳಲ್ಲಿ ಧ್ವನಿ-ಏಕೀಕರಣದೊಂದಿಗೆ ಸಹಜ ಅನುಭವವನ್ನು ನೀಡುವ ಸುಲಭವಾದ ಪ್ಲಾಟ್‌ಫಾರ್ಮ್ ಎಂದು ಗ್ರಾಹಕರಿಗೆ ರಿಲಯನ್ಸ್ ಮಾರ್ಟ್‌ನ ವಿಶಿಷ್ಟ ಕೊಡುಗೆಗಳ ಸಾರಾಂಶವನ್ನು ಇಶಾ ಅಂಬಾನಿ ಪರಿಚಯಿಸಿದರು. ಜಿಯೋಮಾರ್ಟ್ ನೀಡುವ ಒಂದು ಅನನ್ಯ ಪರಿಹಾರವೆಂದರೆ ಅಸ್ತಿತ್ವದಲ್ಲಿರುವ ಕಿರಾಣಿ ಮಳಿಗೆಗಳನ್ನು 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅದು ರಿಫ್ರೆಶ್ ಮಾಡಿದ ಸ್ವ-ಸೇವಾ ಮಳಿಗೆಗಳಾಗಿ ಪರಿವರ್ತಿಸುತ್ತದೆ, ಮತ್ತು ಆ ಮೂಲಕ ಅವರ ಗ್ರಾಹಕರ ಅನುಭವವನ್ನೂ ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ಅವರು ಹೇಳಿದರು. ಪರಿಚಯಾತ್ಮಕ ಕೊಡುಗೆಯಾಗಿ, ಗ್ರಾಹಕರು ಜಿಯೋಮಾರ್ಟ್‌ನಲ್ಲಿ ಮಾಡುವ ಮೊದಲ ಆರ್ಡರ್‌ನೊಂದಿಗೆ ಉಚಿತ ಕೋವಿಡ್ ಅಗತ್ಯಗಳ ಕಿಟ್ ಅನ್ನು ಪಡೆಯಲಿದ್ದಾರೆಂದು ಅವರು ಹೇಳಿದ್ದಾರೆ.

English summary

RIL 43rd AGM: Mukesh Ambani Speech Highlights

RIL 43rd AGM: Mukesh Ambani Speech Highlights
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more