For Quick Alerts
ALLOW NOTIFICATIONS  
For Daily Alerts

ಸೊಕ್ಕಿನ ಮಾತಿನ ಪಾಕಿಸ್ತಾನಕ್ಕೆ ಸಾಲ, ತೈಲ ಕೊನೆ ಮಾಡಿದ ಸೌದಿ ಅರೇಬಿಯಾ

|

ಪಾಕಿಸ್ತಾನಕ್ಕೆ ಸಾಲ ಮತ್ತು ಅದಕ್ಕೆ ಹೊಂದಿಕೊಂಡಂತೆ ತೈಲ ಪೂರೈಕೆಯನ್ನು ಸೌದಿ ಅರೇಬಿಯಾ ಕೊನೆ ಮಾಡಿದೆ. ರಿಯಾದ್ ಪಾರಮ್ಯ ಇರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (OIC) ಕಾಶ್ಮೀರ ವಿಚಾರದಲ್ಲಿ ಅಗತ್ಯ ಪ್ರಮಾಣದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಪಾಕಿಸ್ತಾನ ಟೀಕೆ ಮಾಡಿತ್ತು. ಆ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ.

ಕಾಶ್ಮೀರ ವಿಚಾರವಾಗಿಯೇ ಪ್ರತ್ಯೇಕ ಸೆಷನ್ ಮಾಡದಿದ್ದಲ್ಲಿ OICಯನ್ನೇ ವಿಭಜಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬೆದರಿಕೆಯೊಡ್ಡಿದ್ದರು. ಕಾಶ್ಮೀರ ವಿಚಾರದಲ್ಲಿ ಒಐಸಿಯಲ್ಲಿ ಚರ್ಚೆ ನೇತೃತ್ವ ವಹಿಸಲೇಬೇಕು ಎಂದು ಆಗ್ರಹಿಸಿದಾಗ ಸೌದಿ ಅರೇಬಿಯಾಗೆ ಪಾಕಿಸ್ತಾನವು 100 ಕೋಟಿ ಅಮೆರಿಕನ್ ಡಾಲರ್ ಮರುಪಾವತಿಸಬೇಕಿತ್ತು.

G20 ರಾಷ್ಟ್ರಗಳೊಂದಿಗೆ 33,500 ಕೋಟಿ ರುಪಾಯಿ ಸಾಲ ಕೇಳಿದ ಪಾಕ್G20 ರಾಷ್ಟ್ರಗಳೊಂದಿಗೆ 33,500 ಕೋಟಿ ರುಪಾಯಿ ಸಾಲ ಕೇಳಿದ ಪಾಕ್

2018ರ ನವೆಂಬರ್ ನಲ್ಲಿ ಸೌದಿ ಅರೇಬಿಯಾವು ಘೋಷಣೆ ಮಾಡಿದ್ದ 6.2 ಬಿಲಿಯನ್ USD ಪ್ಯಾಕೇಜ್ ನ ಭಾಗವಾಗಿತ್ತು ಆ ಸಾಲ. ಅದರಲ್ಲಿ 3 ಬಿಲಿಯನ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ಸಾಲವನ್ನು ನೀಡುವ ಒಪ್ಪಂದ ಅದಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಕಾಶ್ಮೀರ ವಿಷಯ ಕುರಿತು ಪ್ರತ್ಯೇಕ ಚರ್ಚೆಗೆ ಆಗ್ರಹ

ಕಾಶ್ಮೀರ ವಿಷಯ ಕುರಿತು ಪ್ರತ್ಯೇಕ ಚರ್ಚೆಗೆ ಆಗ್ರಹ

ಆದರೆ, ಭಾರತದೊಂದಿಗೆ ಸಹಭಾಗಿತ್ವ ವಿಸ್ತರಣೆಯಲ್ಲಿ ತೊಡಗಿರುವ ಸೌದಿ ಅರೇಬಿಯಾವು ಕಾಶ್ಮೀರ ವಿಚಾರಕ್ಕೆ ಪ್ರತ್ಯೇಕ ಚರ್ಚೆ ಆಯೋಜಿಸುವುದಕ್ಕೆ ಸಾಧ್ಯವಿಲ್ಲ ಎಂದಿತ್ತು. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಮಾಧ್ಯಮಗಳೊಂದಿಗೆ ಇದೇ ವಿಚಾರ ಮಾತನಾಡಿದ್ದರು. ಒಐಸಿಗೆ ನಾನು ಮತ್ತೊಮ್ಮೆ ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ. ವಿದೇಶಾಂಗ ಸಚಿವರ ಸಮಿತಿಯ ಸಭೆ ಕರೆಯಬೇಕು ಎಂಬುದು ನಮ್ಮ ನಿರೀಕ್ಷೆ. ನೀವು ಅದನ್ನು ಕರೆಯಲು ಸಾಧ್ಯವಿಲ್ಲದಿದ್ದರೆ ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆಯುವಂತೆ ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನೇ ಒತ್ತಾಯಿಸುತ್ತೇನೆ. ಕಾಶ್ಮೀರ ವಿಷಯದಲ್ಲಿ ಹಾಗೂ ದಮನಿತ ಕಾಶ್ಮೀರಿಗಳ ಬೆಂಬಲಕ್ಕೆ ನಿಲ್ಲಲು ಇಸ್ಲಾಮಿಕ್ ರಾಷ್ಟ್ರಗಳು ಸಿದ್ಧವಾಗಿವೆ ಎಂದು ಖುರೇಷಿ ಹೇಳಿದ್ದರು.

ಒಐಸಿ ಹೊರಗೆ ಸೆಷನ್ ನಡೆಸಲು ಸಿದ್ಧ

ಒಐಸಿ ಹೊರಗೆ ಸೆಷನ್ ನಡೆಸಲು ಸಿದ್ಧ

ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದ ಖುರೇಷಿ, ಇನ್ನಷ್ಟು ಸಮಯ ಕಾಯಲು ಪಾಕಿಸ್ತಾನ ಸಿದ್ಧವಿಲ್ಲ. ಒಂದು ವೇಳೆ ವಿದೇಶಾಂಗ ಸಚಿವರ ಸಮಿತಿ ಸಭೆಯನ್ನು ಕರೆಯಲು ಸಾಧ್ಯವಾಗದಿದ್ದಲ್ಲಿ ಒಐಸಿ ಹೊರಗೆ ಸೆಷನ್ ನಡೆಸಲು ಪಾಕಿಸ್ತಾನವು ಸಿದ್ಧವಿದೆ ಎಂದು ಬೆದರಿಕೆಯೊಡ್ಡಿದ್ದರು. ಕಳೆದ ಡಿಸೆಂಬರ್ ನಲ್ಲಿ ಕೌಲಾಲಂಪುರ್ ನಲ್ಲಿ ನಡೆದ ಸಮಾವೇಶಕ್ಕೆ ಸೌದಿ ಅರೇಬಿಯಾದ ಮನವಿ ಮೇರೆಗೆ ಪಾಕಿಸ್ತಾನವು ಭಾಗಿ ಆಗಲಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದು, ಕಾಶ್ಮೀರ ವಿಷಯದಲ್ಲಿ ರಿಯಾದ್ ನಾಯಕತ್ವ ವಹಿಸಬೇಕು ಎಂಬುದು ಈಗ ಪಾಕಿಸ್ತಾನಿ ಮುಸ್ಲಿಮರ ಒತ್ತಾಯವಾಗಿದೆ ಎಂದು ಹೇಳಿದ್ದರು. ಪಾಕಿಸ್ತಾನದ ನಿರ್ಧಾರಕ್ಕೆ ಟರ್ಕಿಯ ಬೆಂಬಲ ಇದೆ. ಇಸ್ಲಾಮಿಕ್ ಜಗತ್ತಿನಲ್ಲಿ ಸೌದಿ ಅರೇಬಿಯಾದ ನಾಯಕತ್ವವನ್ನು ಅದು ಪ್ರಶ್ನಿಸಲು ಬಯಸುತ್ತದೆ. "ಕಾಶ್ಮೀರ ವಿಚಾರ ಭಾರತಕ್ಕೆ ಸಂಬಂಧಿಸಿದ್ದು" ಎಂದು ರಿಯಾದ್ ಹೇಳಿತ್ತು.

ಉಲ್ಟಾ ಹೊಡೆಯುತ್ತಿದೆ

ಉಲ್ಟಾ ಹೊಡೆಯುತ್ತಿದೆ

ಯುಎಇ, ಒಮನ್, ಉತ್ತರ ಆಫ್ರಿಕಾದ ಕೆಲವು ದೇಶಗಳು ಹಾಗೂ ಪಶ್ಚಿಮ ಏಷ್ಯಾದ ಮುಸ್ಲಿಂ ಬಾಹುಳ್ಯದ ಕೆಲವು ದೇಶಗಳು ಭಾರತವನ್ನು ಬೆಂಬಲಿಸಿದ್ದವು. ಇನ್ನು ವಿಶ್ವದಲ್ಲೇ ಅತಿ ದೊಡ್ಡ ಮುಸ್ಲಿಂ ದೇಶ ಇಂಡೋನೇಷ್ಯಾದ ಅಘೋಷಿತ ಬೆಂಬಲ ಭಾರತಕ್ಕೆ ಇದೆ. ಇದರ ಜತೆಗೆ ಕೇಂದ್ರ ಏಷ್ಯಾ ರಾಷ್ಟ್ರಗಳೂ ಭಾರತದ ಬೆಂಬಲಕ್ಕೆ ಇವೆ. ಒಐಸಿಯಲ್ಲಿ ಭಾರತದ ವಿರುದ್ಧ ವಿಷಯ ಮಂಡನೆಗೆ ಪಾಕಿಸ್ತಾನ ಮಾಡಿದ ಮನವಿಗೆ ಕಳೆದ ಮೇ ತಿಂಗಳಲ್ಲಿ ಮಾಲ್ಡೀವ್ಸ್ ವಿರೋಧ ವ್ಯಕ್ತಪಡಿಸಿದೆ. ಸೌದಿ ಅರೇಬಿಯಾ ಮತ್ತು ಯುಎಇ (ಒಂದು ಕಾಲಕ್ಕೆ ಪಾಕಿಸ್ತಾನದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳು) ಸಹ ಮಾಲ್ಡೀವ್ಸ್ ನಿಲುವನ್ನು ಬೆಂಬಲಿಸಿದ್ದವು. ಒಮನ್ ಕೂಡ ಕಾಶ್ಮೀರದ ವಿಷಯ ಭಾರತದ ಆಂತರಿಕ ಸಂಗತಿ ಎಂದು ತಿಳಿಸಿದ್ದಾಗಿ ಮೂಲಗಳು ಮಾಹಿತಿ ನೀಡಿದ್ದವು. ಪಾಕಿಸ್ತಾನದ ಪ್ರಯತ್ನಕ್ಕೆ ಒಐಸಿಯಲ್ಲಿನ ಹಲವು ಸದಸ್ಯ ರಾಷ್ಟ್ರಗಳು ಬೆಂಬಲ ಸೂಚಿಸಲಿಲ್ಲ. ಇನ್ನು ಭಾರತದ ನಿಲುವನ್ನು ಯುಎಇ ಬೆಂಬಲಿಸಿದ್ದಕ್ಕೆ ಪಾಕಿಸ್ತಾನ ಉಲ್ಟಾ ಹೊಡೆಯುತ್ತಿದೆ.

English summary

Saudi Arabia Ends Loan And Associated Oil Supply To Pakistan

After threat by Pakistan to split OIC, Saudi Arabia ends loan and associated oil supply to Pakistan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X