For Quick Alerts
ALLOW NOTIFICATIONS  
For Daily Alerts

SBI ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ

By Nayana
|

ನವದೆಹಲಿ, ಆಗಸ್ಟ್ 04: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ಕುರಿತು ಮಾಹಿತಿ ನೀಡಿದೆ.

 

ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್ 4 ಹಾಗೂ ಸೆಪ್ಟೆಂಬರ್ 5ರ ನಡುವೆ ಎಸ್‌ಬಿಐನ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದೆ.

 

ಇದಕ್ಕೂ ಮೊದಲು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಎಸ್‌ಬಿಐ ನಿರ್ವಹಣೆಯಿಂದಾಗಿ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ನಿರ್ವಹಣೆ ಕೆಲಸವನ್ನು ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಮಾಡಲಾಗುತ್ತದೆ. ಆದ್ದರಿಂದ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುವುದಿಲ್ಲ. ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್ ಹೊರತುಪಡಿಸಿ, ಯುಪಿಐ ಮತ್ತು ಯೋನೊ ಗ್ರಾಹಕರ ಒಟ್ಟು ಸಂಖ್ಯೆ 250 ಮಿಲಿಯನ್‌ಗಿಂತ ಹೆಚ್ಚಾಗಿದೆ.

SBI ಇಂಟರ್ನೆಟ್ ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂದರೆ SBI ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದೆ. ಇದರಲ್ಲಿ, "ಸೆಪ್ಟೆಂಬರ್ 4 ರ ರಾತ್ರಿ 22:35 ರಿಂದ ಸೆಪ್ಟೆಂಬರ್ 5 ರಂದು 01:35 ರವರೆಗೆ ಅಂದರೆ 180 ನಿಮಿಷಗಳ ನಿರ್ವಹಣಾ ಚಟುವಟಿಕೆಗಳಹಿನ್ನೆಲೆ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು" ಎಂದು ಬ್ಯಾಂಕ್ ಹೇಳಿದೆ.

ಈ ಸಮಯದಲ್ಲಿ, Inernet Banking, SBI Yono, Yono Lite, Yono Business, IMPS ಸೇರಿದಂತೆ UPI ಸೇವೆಗಳು ಬಳಸಲು ಸಾಧ್ಯವಾಗುವುದಿಲ್ಲ. ಇದರರ್ಥ ಈ ಸಮಯದಲ್ಲಿ ಯಾವುದೇ ವೇದಿಕೆಯಲ್ಲಿ ವಹಿವಾಟು ಸೇರಿದಂತೆ ಇತರ ಚಟುವಟಿಕೆಗಳನ್ನು ಮಾಡುವುದನ್ನು ತಪ್ಪಿಸುವ ಅವಶ್ಯಕತೆಯಿದೆ ಎಂದು ಹೇಳಲಾಗಿದೆ.

ಎಸ್‌ಬಿಐ ತನ್ನ ಗ್ರಾಹಕರಿಗೆ ಟ್ವಿಟರ್ ಮೂಲಕ ತಾತ್ಕಾಲಿಕ ನಿಲುಗಡೆ ಬಗ್ಗೆ ತಿಳಿಸಿದೆ ಎಸ್‌ಬಿಐ, ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ನೀಡಲು ಶ್ರಮಿಸುತ್ತಿರುವುದರಿಂದ ನಮ್ಮ ಗೌರವಾನ್ವಿತ ಗ್ರಾಹಕರು ನಮ್ಮೊಂದಿಗೆ ದಯವಿಟ್ಟು ಸಹಕರಿಸಬೇಕು ಎಂದು ನಾವು ವಿನಂತಿಸುತ್ತೇವೆ ಎಂದು ತಿಳಿಸಿದೆ.

English summary

SBI Internet Banking, Mobile App YONO To Remain Down On September 4

The State bank of India on September 3 announced that its internet banking, Yono, Yono Lite, Yono Business, IMPS, and UPI will remain unavailable on September 4 due to maintenance work.
Story first published: Saturday, September 4, 2021, 13:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X