ಕೊರೊನಾ ಪರಿಣಾಮ: 23.2 ಬಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಿಂಗಾಪುರ

ಕೊರೊನಾವೈರಸ್ ಸೃಷ್ಟಿಸಿರುವ ಬಿಕ್ಕಟ್ಟಿನ ಪರಿಹಾರವಾಗಿ ಸಿಂಗಾಪುರವು ಮಂಗಳವಾರ ಮತ್ತೊಂದು ಸುತ್ತಿನಲ್ಲಿ 33 ಬಿಲಿಯನ್ ಸಿಂಗಾಪುರ ಡಾಲರ್ (23.2 ಅಮೆರಿಕನ್ ಡಾಲರ್) ಪರಿಹಾರವನ್ನು ಘೋಷಿಸಿದೆ. ಈ ಮೂಲಕ ಕೋವಿಡ್-19 ಬಿಕ್ಕಟ್ಟು ಮತ್ತು ಮಂದವಾದ ಆರ್ಥಿಕತೆಯನ್ನು ಚೇತರಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಸಿಂಗಾಪುರದಲ್ಲಿ ಇದುವರೆಗೂ ಕೊರೊನಾವೈರಸ್ ಸೋಂಕು 32,343 ಜನರಿಗೆ ತಗುಲಿದ್ದು, 23 ಜನರನ್ನು ಬಲಿ ತೆಗೆದುಕೊಂಡಿದೆ.

23.2 ಬಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ಸಿಂಗಾಪುರ

ನಾಲ್ಕು ತಿಂಗಳೊಳಗೆ ಉದ್ಯೋಗ ರಕ್ಷಣೆಯನ್ನು ವಿಸ್ತರಿಸಲು ಸಿಂಗಾಪುರ ಡಾಲರ್ 2.9 ಶತಕೋಟಿ ಹಣವನ್ನು ಮೀಸಲಿಟ್ಟಿದೆ, ಇದರಲ್ಲಿ ಉದ್ಯೋಗ ಬೆಂಬಲ ಯೋಜನೆಗಳು ಸೇರಿವೆ ಎಂದು ಉಪ ಪ್ರಧಾನ ಮಂತ್ರಿ ಹೆಂಗ್ ಸ್ವೀ ಕೀಟ್ ಹೇಳಿದ್ದಾರೆ.

ಹಣಕಾಸು ಸಚಿವರಾಗಿರುವ ಹೆಂಗ್ ಈ ಹಿಂದೆ ಫೆಬ್ರವರಿಯಲ್ಲಿ 6.4 ಬಿಲಿಯನ್ ಸಿಂಗಾಪುರ ಡಾಲರ್ ಬಜೆಟ್, ಮಾರ್ಚ್‌ನಲ್ಲಿ 48 ಬಿಲಿಯನ್ ಸಿಂಗಾಪುರ ಡಾಲರ್ ಮತ್ತು 5.1 ಬಿಲಿಯನ್ ಸಾಲಿಡಾರಿಟಿ ಬಜೆಟ್ ಅನ್ನು ಏಪ್ರಿಲ್ ಆರಂಭದಲ್ಲಿ ಘೋಷಿಸಿದ್ದರು. ಸಾಲಿಡಾರಿಟಿ ಬಜೆಟ್‌ಗಾಗಿ ಅದೇ ತಿಂಗಳಲ್ಲಿ ಸರ್ಕಾರವು ಇನ್ನೂ 3.8 ಬಿಲಿಯನ್ ಸಿಂಗಾಪುರ್ ಡಾಲರ್ ಹೆಚ್ಚಿಸಿದೆ.

"ಈ ಬಜೆಟ್‌ಗಳ ಜೊತೆಯಲ್ಲಿ ಕೋವಿಡ್-19 ವಿರುದ್ಧದ ಈ ಯುದ್ಧದಲ್ಲಿ ಸಿಂಗಾಪುರದವರನ್ನು ಬೆಂಬಲಿಸಲು ಸರ್ಕಾರವು 100 ಬಿಲಿಯನ್ ಸಿಂಗಾಪುರ ಡಾಲರ್ ಅಥವಾ ಜಿಡಿಪಿಯ ಸುಮಾರು 20 ಪರ್ಸೆಂಟ್ ಮೀಸಲಿಟ್ಟಿದೆ" ಎಂದು ಹೆಂಗ್ ಹೇಳಿದರು.

ಕೊರೊನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಜಾಗತಿಕ ಆಘಾತಗಳಿಂದ ಸಿಂಗಾಪುರದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೆಂಗ್ ಇತ್ತೀಚಿನ ಬಜೆಟ್ ಅನ್ನು ಅನಾವರಣಗೊಳಿಸುವಾಗ ಸಂಸತ್ತಿನಲ್ಲಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+