For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆ ಬುಧವಾರ ಬಂದ್; ಯಾವ ವಹಿವಾಟು ಇಲ್ಲ

|

ಮುಂಬೈ, ಅ. 26: ದೀಪಾವಳಿ ಬಲಿಪಾಡ್ಯಮಿ ಪ್ರಯುಕ್ತ ಷೇರುಪೇಟೆ ಇಂದು ಬುಧವಾರ ಬಂದ್ ಆಗಿದೆ. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎಸ್‌ಎಸ್‌ಇ ನಿಫ್ಟಿಯಲ್ಲಿ ಇಂದು ಯಾವ ವ್ಯವಹಾರ, ವಹಿವಾಟು ನಡೆಯುವುದಿಲ್ಲ.

ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಕ್ಟೋಬರ್ 26ರಂದು ಷೇರು ಮಾರುಕಟ್ಟೆಗೆ ರಜೆ ಇರಲಿದೆ. ಈಕ್ವಿಟಿ ಸೆಗ್ಮೆಂಟ್, ಈಕ್ವಿಟಿ ಡಿರೈವೇಟಿವ್ ಮತ್ತು ಎಸ್‌ಎಲ್‌ಬಿ ಸೆಗ್ಮೆಂಟ್‌ನಲ್ಲಿ ಇಂದು ಚಟುವಟಿಕೆ ನಡೆಯುವುದಿಲ್ಲ. ಕರೆನ್ಸಿ ಡಿರೈವೇಟಿವ್ ಮತ್ತು ಇಂಟರೆಸ್ಟ್ ರೇಟ್ ಸೆಗ್ಮೆಂಟ್‌ಗಳಲ್ಲೂ ಇಂದು ಟ್ರೇಡಿಂಗ್ ಇರುವುದಿಲ್ಲ.

ಮುಹೂರ್ತ ಟ್ರೇಡಿಂಗ್ ಅಂತ್ಯ: ಷೇರುಪೇಟೆಯಲ್ಲಿ ಗೂಳಿಯಾಟಮುಹೂರ್ತ ಟ್ರೇಡಿಂಗ್ ಅಂತ್ಯ: ಷೇರುಪೇಟೆಯಲ್ಲಿ ಗೂಳಿಯಾಟ

ಎಂಸಿಎಕ್ಸ್ (ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್) ಮೊದಲಾರ್ಧದಲ್ಲಿ ಬಂದ್ ಆಗಿರುತ್ತದಾದರೂ ಸಂಜೆ 5 ಗಂಟೆಯ ನಂತರದ ಸೆಷನ್‌ನಲ್ಲಿ ವಹಿವಾಟು ನಡೆಯಲಿದೆ ಎಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಷೇರು ಮಾರುಕಟ್ಟೆ ಬುಧವಾರ ಬಂದ್; ಯಾವ ವಹಿವಾಟು ಇಲ್ಲ

ಷೇರುಪೇಟೆ ಈ ವರ್ಷ ಒಟ್ಟು 13 ರಜಾ ದಿನಗಳನ್ನು ಹೊಂದಿದೆ. ನವೆಂಬರ್ 8ರಂದು ಗುರುನಾನಕ್ ಜಯಂತಿ ದಿನದಂದು ಸ್ಟಾಕ್ ಮಾರ್ಕೆಟ್‌ನಲ್ಲಿ ವಹಿವಾಟು ಇರುವುದಿಲ್ಲ. ಷೇರುಪೇಟೆಗೆ ಈ ವರ್ಷದ ಕೊನೆಯ ರಜಾ ದಿನ ಅದಾಗಿರಲಿದೆ. ಗುರುವಾರ ಷೇರು ಮಾರುಕಟ್ಟೆ ಮತ್ತೆ ಕಾರ್ಯಾರಂಬಿಸುತ್ತದೆ.

ಕಳೆದ ಏಳು ದಿನಗಳ ಕಾಲ ಉತ್ತಮ ವಹಿವಾಟು ಕಂಡಿದ್ದ ಷೇರುಪೇಟೆ ನಿನ್ನೆ ಮಂಗಳವಾರ ನಿರಾಸೆ ಕಂಡಿತ್ತು. ಬಿಎ್‌ಇ ಸೆನ್ಸೆಕ್ಸ್ ಮಂಗಳವಾರ 287.7 ಅಂಕಗಳಷ್ಟು ಇಳಿಕೆ ಕಂಡು 59,543.9 ಮಟ್ಟಕ್ಕೆ ಬಂದಿತು. ಎನ್‌ಎಸ್‌ಇ ನಿಫ್ಟಿ ಶೇ. 0.4ರಷ್ಟು ಇಳಿಕೆಗೊಂಡು 17,656ರ ಮಟ್ಟ ಮುಟ್ಟಿದೆ.

ಇನ್ನು, ನಿನ್ನೆ ಮಾರುಕಟ್ಟೆಯಲ್ಲಿ ಸಿಕ್ಕ ಸಕರಾತ್ಮಕ ಅಂಶ ರೂಪಾಯಿಯದ್ದು. ಡಾಲರ್ ಎದುರು ರೂಪಾಯಿ 7 ಪೈಸೆಯಷ್ಟು ಬಲವೃದ್ಧಿ ಮಾಡಿಕೊಂಡಿತು. ಕಚ್ಛಾ ತೈಲ ಬೆಲೆ ಇಳಿಕೆಯಾಗಿದ್ದು ಹೂಡಿಕೆದಾರರಲ್ಲಿ ಆತ್ಮವಿಶ್ವಾಸ ಮೂಡಿಸಿದ ಪರಿಣಾಮ ರೂಪಾಯಿ ಮೌಲ್ಯ ತುಸು ಏರಲು ಕಾರಣವಾಗಿರಬಹುದು. ಸದ್ಯ ಡಾಲರ್ ಎದುರು ರೂಪಾಯಿ ಮೌಲ್ಯ 82.81 ಇದೆ.

ಷೇರು ಮಾರುಕಟ್ಟೆ ಬುಧವಾರ ಬಂದ್; ಯಾವ ವಹಿವಾಟು ಇಲ್ಲ

2079ರ ಹಿಂದೂ ಸಂವತ್ಸರ ವರ್ಷದ ಆರಂಭವೆನಿಸಿರುವ ಸೋಮವಾರದಂದು ಒಂದು ಗಂಟೆಯ ವಿಶೇಷ ಮುಹೂರ್ತ ಟ್ರೇಡಿಂಗ್ ಸೆಷನ್ ನಡೆಯಿತು. ಬಿಎಸ್‌ಇ ಬೆಂಚ್‌ಮಾರ್ಕ್ ಅಂದು 524.5 ಅಂಕಗಳಷ್ಟು ಹೆಚ್ಚಳ ಕಂಡಿತು. ನಿಫ್ಟಿ ಕೂಡ ಶೇ. 0.8ರಷ್ಟು ಹೆಚ್ಚಳ ಕಂಡಿತು. ಇನ್ನು, 10 ವರ್ಷದ ಸರ್ಕಾರಿ ಬಾಂಡ್‌ನ ಮೌಲ್ಯ ಶೇ. 7.4424ರಷ್ಟು ಹೆಚ್ಚಾಗಿದೆ.

English summary

Stock Market To Remain Closed On Oct 26th, Now Trading At Sensex, Nifty

The Indian stock market will be closed on Wednesday on the account of Diwali Balipratipada, therefore, there will be no trading activity today.
Story first published: Wednesday, October 26, 2022, 11:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X