For Quick Alerts
ALLOW NOTIFICATIONS  
For Daily Alerts

HDFC ಬ್ಯಾಂಕ್- ಟಾಟಾ ಮೋಟಾರ್ಸ್ ಸಹಭಾಗಿತ್ವದಲ್ಲಿ ಆಕರ್ಷಕ ಹಣಕಾಸು ಸೌಲಭ್ಯ

By ಅನಿಲ್ ಆಚಾರ್
|

ಟಾಟಾ ಮೋಟಾರ್ಸ್ ಪ್ರಯಾಣಿಕರ ವಾಹನಗಳ ಹಣಕಾಸು ವ್ಯವಸ್ಥೆಗಾಗಿ ಎಚ್ ಡಿಎಫ್ ಸಿ ಬ್ಯಾಂಕ್ ಜತೆಗೆ ಸಹಭಾಗಿತ್ವ ವಹಿಸಿದೆ. ಇದಕ್ಕಾಗಿ ಎರಡು ಹೊಸ ಯೋಜನೆಗಳನ್ನು ಪರಿಚಯಿಸಿರುವುದಾಗಿ ಕಂಪೆನಿ ಹೇಳಿದೆ. "ಗ್ರಾಜುಯೆಲ್ ಸ್ಟೆಪ್ ಅಪ್ ಸ್ಕೀಮ್" ಹಾಗೂ TML ಫ್ಲೆಕ್ಸಿ ಡ್ರೈವ್ ಸ್ಕೀಮ್ ಎಂಬ ಎರಡು ಯೋಜನೆ ಪರಿಚಯಿಸಲಾಗಿದೆ.

 

ಗ್ರಾಹಕರ ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಕೈಗೆಟುಕುವ ದರದಲ್ಲಿ ಸಾಲ ಸಿಗಬೇಕು ಎಂಬ ಉದ್ದೇಶದಿಂದ ಈ ಯೋಜನೆಗಳನ್ನು ರೂಪಿಸಲಾಗಿದೆ. ಇದು 2020ರ ನವೆಂಬರ್ ಕೊನೆ ತನಕ ಸಿಗುತ್ತದೆ. BS VI ಎಂಜಿನ್ ನ ಎಲ್ಲ ಕಾರುಗಳು ಹಾಗೂ ಎಸ್ ಯುವಿ ಮತ್ತು ಎಲೆಕ್ಟ್ರಿಕಲ್ ವಾಹನಗಳಿಗೆ ಅನ್ವಯ ಆಗುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

 

FY21ರಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ 25% ತನಕ ಕುಸಿತ: IcraFY21ರಲ್ಲಿ ಪ್ರಯಾಣಿಕರ ವಾಹನಗಳ ಮಾರಾಟ 25% ತನಕ ಕುಸಿತ: Icra

ಗ್ರಾಜುಯೆಲ್ ಸ್ಟೆಪ್ ಅಪ್ ಯೋಜನೆಯಲ್ಲಿ ಗ್ರಾಹಕರಿಗೆ ಅತ್ಯಂತ ಕಡಿಮೆ ಅಂದರೆ ಪ್ರತಿ ಲಕ್ಷ ರುಪಾಯಿಗೆ 799 ರುಪಾಯಿ ಇಎಂಐ ಬರುತ್ತದೆ. ಇದು ಯಾವ ಪ್ರಾಡಕ್ಟ್ ಅನ್ನೋದರ ಆಧಾರದಲ್ಲಿ ಬದಲಾಗುತ್ತದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಇಎಂಐ ಜಾಸ್ತಿ ಆಗುತ್ತಾ ಸಾಗುತ್ತದೆ. ಅದು ಕೂಡ ಖರೀದಿದಾರರ ಅನುಕೂಲಕ್ಕೆ ತಕ್ಕಂತೆ ಆಗುತ್ತದೆ ಎಂದು ಹೇಳಲಾಗಿದೆ.

HDFC ಬ್ಯಾಂಕ್- ಟಾಟಾ ಮೋಟಾರ್ಸ್ ಸಹಭಾಗಿತ್ವ; ಆಕರ್ಷಕ ಹಣಕಾಸು ಸೌಲಭ್ಯ

ಫ್ಲೆಕ್ಸಿ ಡ್ರೈವ್ ಸ್ಕೀಮ್ ಆಫರ್ ನಲ್ಲಿ ಗ್ರಾಹಕರು ವರ್ಷದ ಯಾವುದಾದರೂ ಮೂರು ತಿಂಗಳು ಆರಿಸಿಕೊಳ್ಳಬಹುದು. ಆ ತಿಂಗಳಲ್ಲಿ ಕನಿಷ್ಠ ಇಎಂಐ, ಪ್ರತಿ ಲಕ್ಷಕ್ಕೆ 789 ರುಪಾಯಿ ಪಾವತಿಸಬಹುದು. ಅದು ಕೂಡ ಯಾವ ಪ್ರಾಡಕ್ಟ್ ಎಂಬ ಆಧಾರದಲ್ಲಿ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕಟ್ಟಬಹುದು.

ಇದೇ ವೇಳೆ ಟಾಟಾ ಮೋಟಾರ್ಸ್ ನಿಂದ ಎಕ್ಸ್ ಶೋರೂಂ ಬೆಲೆಯ ಶೇಕಡಾ ನೂರರಷ್ಟು ಫೈನಾನ್ಸಿಂಗ್ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಈ ಎರಡೂ ಯೋಜನೆ ಅಡಿಯಲ್ಲಿ ಶೇಕಡಾ ನೂರರಷ್ಟು ಸಾಲ ದೊರೆಯುತ್ತದೆ.

English summary

Tata Motors Offering Attractive Finance Scheme With HDFC Bank Partnership

Tata Motors offering attractive finance offers for it's passenger vehicles with HDFC bank partnership.
Story first published: Sunday, October 18, 2020, 9:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X