For Quick Alerts
ALLOW NOTIFICATIONS  
For Daily Alerts

5ಜಿ ಪರೀಕ್ಷೆಗಾಗಿ ವಿ ಹಾಗೂ ರಿಲಯನ್ಸ್‌ಗೆ ಲೈಸನ್ಸ್ ನೀಡಿದ ಇಲಾಖೆ

|

ಗುಜರಾತ್‌ನಲ್ಲಿ 5ಜಿ ಪರೀಕ್ಷೆಗಾಗಿ ದೂರಸಂಪರ್ಕ ಇಲಾಖೆ (ಡಿಒಟಿ) 2021ರ ವೊಡಾಫೋನ್ ಐಡಿಯಾಸಂಸ್ಥೆ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್‌ ಪರವಾನಗಿ ಮತ್ತು ತರಂಗಗುಚ್ಛವನ್ನು ಹಂಚಿಕೆ ಮಾಡಿದೆ. ಈ ಕುರಿತ ವಿವರವನ್ನು ಕೇಂದ್ರ ಸರ್ಕಾರದ ಸಂಪರ್ಕ ಇಲಾಖೆ ಹಂಚಿಕೊಂಡಿದೆ.

ವೊಡಾಫೋನ್ ಐಡಿಯಾ ಲಿಮಿಟೆಡ್‌ಗೆ ಗಾಂಧಿನಗರದ (ನಗರ ಪ್ರದೇಶ), ಮನ್ಸಾ(ಉಪನಗರ) ಮತ್ತು ಉನಾವದಲ್ಲಿ (ಗ್ರಾಮೀಣ) - ಉಪಕರಣಗಳ ಪೂರೈಕೆದಾರನಾಗಿ ನೋಕಿಯಾಗೆ ಪರವಾನಗಿ ನೀಡಲಾಗಿದೆ.

ರಿಲಾಯನ್ಸ್ ಜಿಯೋ ಇನ್ಫೋಕಾಮ್‌ಗೆ ಜಾಮ್‌ನಗರದಲ್ಲಿ (ಉಪನಗರ/ಗ್ರಾಮೀಣ) - ಉಪಕರಣಗಳ ಪೂರೈಕೆದಾರನಾಗಿ ಸ್ಯಾಮ್ ಸಂಗ್ಗೆ ಪರವಾನಗಿ ನೀಡಲಾಗಿದೆ.

ನಿರ್ದೇಶಕರಾದ ಸುಮಿತ್ ಮಿಶ್ರಾ, ವಿಕಾಸ್ ದಾದಿಚ್ ಮತ್ತು ಸಹಾಯಕ ವಿಭಾಗೀಯ ಎಂಜಿನಿಯರ್ ಸೂರ್ಯಶ್ ಗೌತಮ್ ಅವರನ್ನೊಳಗೊಂಡ ʻ5ಜಿʼ ಕುರಿತ ಗುಜರಾತ್ ʻಎಲ್ಎಸ್ಎʼ ಮತ್ತು ಟೆಲಿಕಾಂ ಇಲಾಖೆಯ ಸಂಚಾಲಕ ಸಮಿತಿಯು ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ನೋಕಿಯಾ ತಾಂತ್ರಿಕ ತಂಡದೊಂದಿಗೆ ಗಾಂಧಿನಗರದಲ್ಲಿಪರೀಕ್ಷಾ ಸ್ಥಳಗಳಿಗೆ ಭೇಟಿ ನೀಡಿತು.

5ಜಿ ಪರೀಕ್ಷೆಗಾಗಿ ವಿ ಹಾಗೂ ರಿಲಯನ್ಸ್‌ಗೆ ಲೈಸನ್ಸ್ ನೀಡಿದ ಇಲಾಖೆ

ಗಾಂಧಿನಗರದ ಮಹಾತ್ಮಾ ಮಂದಿರ 5ಜಿ ಸ್ಥಳ'ದಲ್ಲಿ ತಂಡವು ಡೇಟಾ ವೇಗವನ್ನು ಪರಿಶೀಲಿಸಿತು. ಈ ವೇಗವು ಸುಮಾರು 1.5 ಜಿಬಿಪಿಎಸ್ ಇರುವುದು ಕಂಡುಬಂದಿದೆ - ಇದು 4ಜಿಗಿಂತ ಸುಮಾರು 100 ಪಟ್ಟು ವೇಗವಾಗಿದೆ. ನಾನ್-ಸ್ಟ್ಯಾಂಡ್ ಅಲೋನ್ 5ಜಿ ಮೋಡ್‌ನಲ್ಲಿ ವೇಗ ಪರೀಕ್ಷೆಯನ್ನು ಮಾಡಲಾಯಿತು.

ಗುಜರಾತ್ ʻಎಲ್‌ಎಸ್ಎʼ, ʻಡಿಒಟಿʼ ತಂಡವು ಸ್ಥಳದಲ್ಲಿ ಪರೀಕ್ಷಿಸಿತು:

1. 360 ಡಿಗ್ರಿ ವರ್ಚುವಲ್ ರಿಯಾಲಿಟಿ ಕಂಟೆಂಟ್‌ ಪ್ಲೇಬ್ಯಾಕ್ - ಬಳಕೆದಾರರು ಕಂಟೆಂಟ್‌ ಒದಗಿಸುವ ಸರ್ವರ್ಗೆ 5ಜಿ ಮೂಲಕ ಸಂಪರ್ಕಗೊಂಡು, ಆ ಸ್ಥಳವನ್ನು ವರ್ಚುವಲ್ ರಿಯಾಲಿಟಿ ಮೂಲಕ ನೋಡುತ್ತಾರೆ, ಅವರು ದೈಹಿಕವಾಗಿ ಆ ಸ್ಥಳದಲ್ಲೇ ಇರುವ ಅನುಭವವನ್ನು ಹೊಂದುತ್ತಾರೆ.

2. ವರ್ಚುವಲ್ ರಿಯಾಲಿಟಿ ಸಂಪರ್ಕಿತ ತರಗತಿ - 5ಜಿ ನೆಟ್‌ವರ್ಕ್ ಸಂರ್ಪಕಿತ 360 ಡಿಗ್ರಿ ಲೈವ್ ಸ್ಟ್ರೀಮಿಂಗ್ ಮೂಲಕ ದೂರದಿಂದಲೇ ವಿದ್ಯಾರ್ಥಿಗಳನ್ನು ತಲುಪಲು ಶಿಕ್ಷಕರಿಗೆ ಅನುಕೂಲ ಮಾಡಿಕೊಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ಖಾಸಗಿ ತರಗತಿಯಲ್ಲೇ ಇರುವ ಅನುಭವವನ್ನು ಹೊಂದುತ್ತಾರೆ, ಅಲ್ಲಿ ಅವನು /ಅವಳು ಧ್ವನಿ ಚಾಟ್ ಮೂಲಕ ಶಿಕ್ಷಕರೊಂದಿಗೆ ನೇರ ಸಂವಹನ ನಡೆಸಬಹುದು.

3. 5ಜಿ ಇಮ್ಮರ್ಸೀವ್‌ ಗೇಮಿಂಗ್‌ - ಇಲ್ಲಿ ಗೇಮರ್‌ಗಳ ಚಲನವಲನಗಳನ್ನು ಆನ್‌ಲೈನ್‌ನಲ್ಲಿ ಸೆರೆಹಿಡಿದು, 5ಜಿ ನೆಟ್‌ವರ್ಕ್ ಮೂಲಕ ಗೇಮಿಂಗ್ ವೇದಿಕೆಗೆ ಕಳುಹಿಸಲಾಗುತ್ತದೆ, ಅಲ್ಲಿ ಅದು ಮೊದಲೇ ರೆಕಾರ್ಡ್ ಮಾಡಿದ ಗೇಮಿಂಗ್ ವೀಡಿಯೊದೊಂದಿಗೆ ವಿಲೀನವಾಗುತ್ತದೆ.

4. ಕೃತಕ ಬುದ್ಧಿಮತ್ತೆ ನೆರವಿನ 360 ಡಿಗ್ರಿ ಕ್ಯಾಮೆರಾ - 360 ಡಿಗ್ರಿ ಕ್ಯಾಮೆರಾಗಳಿಂದ ರಿಯಲ್ ಟೈಮ್ ವೀಡಿಯೊ ಸ್ಟ್ರೀಮ್ ಅನ್ನು 5ಜಿ ನೆಟ್‌ವರ್ಕ್ ಮೂಲಕ ಅಪ್‌ಲೋಡ್ ಮಾಡಲಾಗುತ್ತದೆ; ಅಂತಿಮ ಬಳಕೆದಾರರು ನಿಜವಾದ 360 ಡಿಗ್ರಿ ಅನುಭವವನ್ನು ಪಡೆಯುತ್ತಾರೆ ಮತ್ತು ಹೆಚ್ಚುವರಿ ಕೃತಕ ಬುದ್ಧಿಮತ್ತೆಯೊಂದಿಗೆ, ಅವರು ಅಲ್ಲಿರುವ ಜನರು, ಚೀಲಗಳು, ಬಾಟಲಿಗಳು, ಲ್ಯಾಪ್ ಟಾಪ್ ಮುಂತಾದ ವಸ್ತುಗಳನ್ನು ಸಹ ಪತ್ತೆ ಹಚ್ಚಬಹುದು.

ಬಳಕೆಯ ಪ್ರಕರಣಗಳನ್ನು ಸ್ಟ್ಯಾಂಡ್ ಅಲೋನ್ 5ಜಿ ಮೋಡ್ ಬಳಸಿ ಪರೀಕ್ಷಿಸಲಾಯಿತು.

5 ಜಿ ಪ್ರಯೋಗಗಳು ಮತ್ತು ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ವೋಡಾಫೋನ್ ಐಡಿಯಾ ಲಿಮಿಟೆಡ್‍ನ ಮುಖ್ಯ ಉದ್ಯಮ ವ್ಯವಹಾರ ಅಧಿಕಾರಿ ಅಭಿಜಿತ್ ಕಿಶೋರ್, "ದೊಡ್ಡ ಮತ್ತು ಸಣ್ಣ ಉದ್ಯಮಗಳಿಗೆ ಸ್ಮಾರ್ಟ್ ಯುಟಿಲಿಟಿ ಮತ್ತು ಸ್ಮಾರ್ಟ್ ಮೂಲಸೌಕರ್ಯ ಪರಿಹಾರಗಳನ್ನು ಸಕ್ರಿಯಗೊಳಿಸುವಲ್ಲಿ ವಿ ಬಿಸಿನೆಸ್ ಮಹತ್ವದ ಉಪಸ್ಥಿತಿಯನ್ನು ಹೊಂದಿದೆ. 5ಜಿ ಪರಿಹಾರಗಳನ್ನು ಪ್ರದರ್ಶಿಸಲು ಮತ್ತು ಮೌಲ್ಯೀಕರಿಸಲು ಅಥೋನೆಟ್ ಜೊತೆಗಿನ ನಮ್ಮ ಸಹಭಾಗಿತ್ವವು ಉದ್ಯಮ 4.0 ಬಳಕೆಯ ಪ್ರಕರಣಗಳನ್ನು ನಿರ್ಮಿಸುವ ನಿರ್ಣಾಯಕ ಹೆಜ್ಜೆಯಾಗಿದೆ, ಇದು ಭವಿಷ್ಯದಲ್ಲಿ ಡಿಜಿಟಲ್ ಆರ್ಥಿಕತೆಯ ಮಹತ್ವದ ಬೆಳವಣಿಗೆಯ ಚಾಲಕ ಶಕ್ತಿಯಾಗಿರುತ್ತದೆ" ಎಂದು ಹೇಳಿದರು. (ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ)

English summary

Telecom Department allots license and spectrum to Vodafone Idea Limited and Reliance Jio Infocomm for 5G testing in Gujarat

Department of Telecommunications (DoT) for 5G testing in Gujarat, allotted license and spectrum to to Vodafone Idea Limited and Reliance Jio Infocomm.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X