For Quick Alerts
ALLOW NOTIFICATIONS  
For Daily Alerts

ಫಾರ್ಚೂನ್ 2020 ಉದ್ಯಮಿಗಳ ಪಟ್ಟಿಯಲ್ಲಿ ಎಲಾನ್ ಮಸ್ಕ್ ಟಾಪ್

By ಅನಿಲ್ ಆಚಾರ್
|

ಅಡೋಬ್ ಕಂಪೆನಿ ಸಿಇಒ ಶಂತನು ನಾರಾಯಣ್ ಮತ್ತು ಮಾಸ್ಟರ್ ಕಾರ್ಡ್ ಸಿಇಒ ಅಜಯ್ ಬಂಗಾ ಅವರು 2020ನೇ ಇಸವಿಯ ಉದ್ಯಮಿಗಳು ಎಂದು ಫಾರ್ಚೂನ್ ನಿಂದ ಹೆಸರಿಸಲಾಗಿದೆ. ಆ ಪಟ್ಟಿಯಲ್ಲಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಟಾಪ್ ನಲ್ಲಿದ್ದಾರೆ. ಸತತವಾಗಿ ಎರಡನೇ ವರ್ಷ ಮಸ್ಕ್ ಟಾಪ್ ನಲ್ಲಿ ಇದ್ದಾರೆ.

 

ಮೂವತ್ತೆಂಟು ವರ್ಷದ ನಾರಾಯಣ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಡಿಸೈನ್ ಮತ್ತು ಪಬ್ಲಿಷಿಂಗ್ ಸಲಕರಣೆಯನ್ನು ಸಬ್ ಸ್ಕ್ರಿಪ್ಷನ್ ಆಧಾರಿತ ಉದ್ಯಮವಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಈಗಿನ ಸವಾಲಿನ ಸನ್ನಿವೇಶದಲ್ಲೂ ಕಂಪೆನಿಯ ಈಚಿನ ಮೂರನೇ ತ್ರೈಮಾಸಿಕ ಫಲಿತಾಂಶವು ಕಳೆದ ವರ್ಷಕ್ಕಿಂತ 14 ಪರ್ಸೆಂಟ್ ಬೆಳವಣಿಗೆ ದಾಖಲಿದ್ದು, 330 ಕೋಟಿ ಅಮೆರಿಕನ್ ಡಾಲರ್ ತಲುಪಿದೆ.

 

ಎಲಾನ್ ಮಸ್ಕ್ ಆಸ್ತಿ ಈ ವರ್ಷ 6,66,000 ಕೋಟಿ ಜಂಪ್; ಈಗ ಶ್ರೀಮಂತ ನಂ. 3 ಆಗಲು ಸಿದ್ಧಎಲಾನ್ ಮಸ್ಕ್ ಆಸ್ತಿ ಈ ವರ್ಷ 6,66,000 ಕೋಟಿ ಜಂಪ್; ಈಗ ಶ್ರೀಮಂತ ನಂ. 3 ಆಗಲು ಸಿದ್ಧ

ಇನ್ನು ಸಂಜಯ್ ಬಂಗಾ ಕಳೆದ ಹತ್ತು ವರ್ಷಗಳಿಂದ ಮಾಸ್ಟರ್ ಕಾರ್ಡ್ಸ್ ಸಿಇಒ ಆಗಿದ್ದಾರೆ. ಇನ್ನೇನು ಅವರು ಹುದ್ದೆಯಿಂದ ಕೆಳಗೆ ಇಳಿಯಲಿದ್ದು, ಜನವರಿ 1, 2021ರಿಂದ ಮೈಕೆಲ್ ಮೈಬಾಕ್ ಹೊಸ ಸಿಇಒ ಆಗಲಿದ್ದಾರೆ. ಪಟ್ಟಿಯಲ್ಲಿ ಬಂಗಾ ಅವರು ಒಂಬತ್ತನೇ ಸ್ಥಾನದಲ್ಲಿ ಇದ್ದಾರೆ.

ಫಾರ್ಚೂನ್ 2020 ಉದ್ಯಮಿಗಳ ಪಟ್ಟಿಯಲ್ಲಿ ಎಲಾನ್ ಮಸ್ಕ್ ಟಾಪ್

ಇನ್ನು ಟೆಸ್ಲಾ ಕಂಪೆನಿ S&P 500 ಗೆ ಸೇರ್ಪಡೆಯಿಂದ ಮಸ್ಕ್ ವೈಯಕ್ತಿಕ ಆಸ್ತಿ ಹೊಸ ಎತ್ತರಕ್ಕೆ ಏರಿದ್ದು, ವಿಶ್ವದ ಎರಡನೇ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದಾರೆ. ಫಾರ್ಚೂನ್ ಟಾಪ್ 20 ಪಟ್ಟಿಯಲ್ಲಿ ಅಡ್ವಾನ್ಸ್ ಮೈಕ್ರೋ ಡಿವೈಸಸ್ ಸಿಇಒ ಲಿಸಾ ಸು ಎರಡನೇ ಸ್ಥಾನ, ನೆಟ್ ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ನಾಲ್ಕು, ಫೋರ್ಟೆಸ್ಕ್ಯೂ ಮೆಟಲ್ ಗ್ರೂಪ್ ಸಿಇಒ ಎಲೆಜಬೆತ್ ಗೇನೆಸ್ ಐದು, ಬೆಜೋಸ್ ಏಳು ಮತ್ತ್ಯ್ ಇನ್ ಟ್ಯೂಟ್ ಸಿಇಒ ಸಾಸನ್ ಗೂಡಾರ್ಜಿ ಹದಿನಾರನೇ ಸ್ಥಾನದಲ್ಲಿದ್ದಾರೆ.

English summary

Tesla CEO Elon Musk Tops Fortune Businessperson Of The Year 2020

US based Tesla company CEO Elon Musk top in Fortune Businessperson of the year 2020. Here is the list.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X