For Quick Alerts
ALLOW NOTIFICATIONS  
For Daily Alerts

"ದ ಡೀಲ್ ಈಸ್ ಡನ್"- ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದದ ಘೋಷಣೆ ಮಾಡಿದ ಬೋರಿಸ್ ಜಾನ್ಸನ್

By ಅನಿಲ್ ಆಚಾರ್
|

"ದ ಡೀಲ್ ಈಸ್ ಡನ್"- "ಒಪ್ಪಂದ ಮುಗಿದಿದೆ" ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ. ಯುರೋಪ್ ನ ಸಹವರ್ತಿಯಾಗಿ ಹಾಗೂ "ನಂಬರ್ ಒನ್ ಮಾರುಕಟ್ಟೆಯಾಗಿ" ಯು.ಕೆ. ಮುಂದುವರಿಯಲಿದೆ ಎಂದು ಘೋಷಣೆ ಮಾಡಿದ್ದಾರೆ.

ಬ್ರಿಟನ್ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡ ನಂತರ ನಡೆಯುತ್ತಿರುವ ಅತಿ ದೊಡ್ಡ ಜಾಗತಿಕ ಬದಲಾವಣೆ ಇದು. ವಿಶ್ವದ ಅತಿ ದೊಡ್ಡ ವಾಣಿಜ್ಯ ಗುಂಪಾದ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ಹೊರಬರುವುದಕ್ಕೆ ಇನ್ನೊಂದು ವಾರ ಬಾಕಿ ಇರುವಂತೆ ಗುರುವಾರದಂದು (ಡಿಸೆಂಬರ್ 24, 2020) ಬ್ರೆಕ್ಸಿಟ್ ವಾಣಿಜ್ಯ ಒಪ್ಪಂದಕ್ಕೆ ಅಂತಿಮವಾಗಿ ಬಂದಿದೆ.

Brexit ಅಂದರೇನು? ಹೇಗೆ ಸ್ಪಂದಿಸಲಿದೆ ಭಾರತದ ಅರ್ಥ ವ್ಯವಸ್ಥೆ?Brexit ಅಂದರೇನು? ಹೇಗೆ ಸ್ಪಂದಿಸಲಿದೆ ಭಾರತದ ಅರ್ಥ ವ್ಯವಸ್ಥೆ?

ಅಂದ ಹಾಗೆ ಬ್ರೆಕ್ಸಿಟ್ ಅಂದರೆ ಅದರಲ್ಲಿ ಬ್ರಿಟಿಷ್ ಮತ್ತು ಎಕ್ಸಿಟ್ (ಹೊರಬರುವುದು) ಎಂಬೆರಡು ಪದಗಳಿವೆ. ಎರಡನೇ ಪ್ರಪಂಚ ಯುದ್ಧ ನಡೆದ ನಂತರ ಸುದೀರ್ಘ ಪ್ರಯತ್ನದಲ್ಲಿ ಯುರೋಪಿಯನ್ ಒಕ್ಕೂಟ ರಚನೆ ಆಗಿತ್ತು. 27 ರಾಷ್ಟ್ರಗಳು ಸೇರಿ ರಾಜಕೀಯ ಹಾಗೂ ಆರ್ಥಿಕ ಒಕ್ಕೂಟ ಮಾಡಿಕೊಂಡಿದ್ದವು. ಅದರಿಂದ ಈಗ ಬ್ರಿಟನ್ ಬೇರೆಯಾಗಿದೆ.

ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಕ್ಕೆ ಒಂದೇ ವೀಸಾ ಸಾಕಾಗಿತ್ತು. ವಾಣಿಜ್ಯ ಒಪ್ಪಂದಗಳಾಗಿ, ತೆರಿಗೆ- ಸುಂಕಗಳಲ್ಲಿ ವಿನಾಯಿತಿ ಇತ್ತು. ಅದರಿಂದ ಮೊಟ್ಟಮೊದಲಿಗೆ 2016ರಲ್ಲಿ ಹೊರಬರುವ ತನ್ನ ಉದ್ದೇಶವನ್ನು ಬ್ರಿಟನ್ ತಿಳಿಸಿತ್ತು. ಈ ವರ್ಷದ ಜನವರಿಯಲ್ಲೇ ಅಧಿಕೃತವಾಗಿ ಬ್ರಿಟನ್ ಹೊರಬಂದಿದೆ. ಆದರೆ ವಿವಿಧ ಬದಲಾವಣೆ ಪ್ರಕ್ರಿಯೆಗಳು ಈ ವರ್ಷದ ಕೊನೆ ತನಕ ನಡೆಯುತ್ತವೆ. ಆದ್ದರಿಂದ ವ್ಯಾಪಾರ, ಪ್ರಯಾಣ, ವಾಣಿಜ್ಯ ನೀತಿಗೆ ಸಂಬಂಧಿಸಿದಂತೆ ವರ್ಷದ ಕೊನೆ ತನಕ ಬದಲಾವಣೆ ಇರುವುದಿಲ್ಲ.

"ಒಪ್ಪಂದ ಮುಗಿದಿದೆ," ಎಂದು ಬ್ರಿಟನ್ ಮೂಲಗಳು ತಿಳಿಸಿವೆ. "ನಮ್ಮ ಹಣ, ಗಡಿ, ಕಾನೂನು, ವ್ಯಾಪಾರ ಮತ್ತು ಮೀನುಗಾರಿಕೆ ನೀರು ಎಲ್ಲವನ್ನು ವಾಪಸ್ ಹತೋಟಿಗೆ ಪಡೆದಿದ್ದೇವೆ.

"ದಾಖಲೆ ಸಮಯದಲ್ಲಿ ಹಾಗೂ ವಿಪರೀತ ಸವಾಲಿನ ಸನ್ನಿವೇಶದಲ್ಲಿ ಯುನೈಟೆಡ್ ಕಿಂಗ್ ಡಮ್ ಗಾಗಿ ಅದ್ಭುತವಾದ ಒಪ್ಪಂದ ಮಾಡಿ ಮುಗಿಸಿದ್ದೇವೆ... ನಮ್ಮ ಸಾರ್ವಭೌಮತ್ವ ಮರಳಿ ಪಡೆಯುವ ನಿಟ್ಟಿನಲ್ಲಿ ಎಲ್ಲ ಪ್ರಮುಖ ವಿಚಾರಗಳಲ್ಲೂ ಯಶಸ್ಸು ಸಾಧಿಸಿದ್ದೇವೆ." ಎಂದು ತಿಳಿಸಲಾಗಿದೆ.

ಇನ್ನು ಯುರೋಪಿಯನ್ ಆಯೋಗದ ಅಧ್ಯಕ್ಷರು ಮಾತನಾಡಿ, ಈ ಒಪ್ಪಂದ ನ್ಯಾಯಸಮ್ಮತ, ಸಮತೋಲಿತ ಹಾಗೂ ಸರಿಯಾದ ರೀತಿಯಲ್ಲಿ ಆಗಿದೆ ಎಂದು ಹೇಳಿದ್ದಾರೆ. ಏನೇ ಒಪ್ಪಂದ ಅಂತ ಆಗಿದ್ದರೂ 2021ರ ಜನವರಿ 1ರಿಂದ ಕೆಲವು ವ್ಯತ್ಯಯ ಇರುತ್ತದೆ. ಅದರಲ್ಲೂ ಕೋವಿಡ್- 19 ಬಿಕ್ಕಟ್ಟು ಇರುವಂಥ ಸಂದರ್ಭದಲ್ಲಿ ಈ ಒಪ್ಪಂದ ಆಗಿದೆ.

English summary

"The Deal Is Done"- Brexit Trade Deal Announced By UK PM Boris Johnson

UK PM Boris Johnson Thursday announced, "The Deal Is Done" about Brexit trade deal with European Union (EU). Here is the details.
Story first published: Thursday, December 24, 2020, 23:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X