For Quick Alerts
ALLOW NOTIFICATIONS  
For Daily Alerts

ಕಾರ್ಪೋರೇಟ್ ತೆರಿಗೆ ಬಗ್ಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್

|

ನವದೆಹಲಿ, ಜೂನ್ 9: ಹೊಸ ಹೂಡಿಕೆಗಳ ಮೇಲೆ ಕಡಿಮೆ ತೆರಿಗೆ ಪಡೆಯುವ ಗಡುವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.

ನಾನು ಏನು ಮಾಡಬಹುದೆಂದು ನೋಡುತ್ತೇನೆ. ಹೊಸ ಹೂಡಿಕೆಗಳ ಮೇಲಿನ 15% ಕಾರ್ಪೊರೇಟ್ ತೆರಿಗೆಯಿಂದ ಉದ್ಯಮವು ಲಾಭ ಪಡೆಯಬೇಕೆಂದು ನಾನು ಬಯಸುತ್ತೇನೆ. ಕಡಿಮೆ ತೆರಿಗೆ ಪಡೆಯುವ ಗಡುವನ್ನು 2023 ರ ಮಾರ್ಚ್ 31 ರ ನಂತರ ವಿಸ್ತರಣೆಯ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಾರ್ಪೋರೇಟ್ ಕಂಪೆನಿಗಳ ಮೇಲಿನ ತೆರಿಗೆ ಒತ್ತಡವನ್ನು ಕಡಿಮೆಗೊಳಿಸವುದರ ಬಗ್ಗೆ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾರ್ಪೋರೇಟ್ ತೆರಿಗೆ ಬಗ್ಗೆ ಸಿಹಿ ಸುದ್ದಿ ನೀಡಿದ ನಿರ್ಮಲಾ ಸೀತಾರಾಮನ್

ಸೋಮವಾರ ನಡೆದ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾವು ಕರೊನಾವೈರಸ್ ಸಾಂಕ್ರಾಮಿಕ ರೋಗದ ವಿನಾಶಕಾರಿ ಪರಿಣಾಮಗಳಿಂದ ಚೇತರಿಸಿಕೊಳ್ಳುವ ಹಂತದಲ್ಲಿರುವ ಕಾರಣ ಕಾರ್ಪೋರೇಟ್ ವ್ಯವಹಾರಗಳಿಗೆ ಚೇತರಿಸಿಕೊಳ್ಳಲು ಹೆಚ್ಚುವರಿ ಸಮಯವನ್ನು ನೀಡಲು ಸರ್ಕಾರ ಸಿದ್ಧವಾಗಿದೆ. ಆರ್ಥಿಕ ಕುಸಿತವನ್ನು ಹಿಮ್ಮೆಟ್ಟಿಸಲು ಸರ್ಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸಿತು. ಸರ್ಕಾರವು ಕನಿಷ್ಟ ಪರ್ಯಾಯ ತೆರಿಗೆಯ ದರವನ್ನು 18.5% ರಿಂದ 15% ಕ್ಕೆ ಇಳಿಸಿತ್ತು ಎಂದಿದ್ದಾರೆ.

ಸಣ್ಣ ಉದ್ಯಮಗಳಿಗೆ ಬಾಕಿ ಇರುವ ಪಾವತಿಗಳನ್ನು ಪೂರೈಸಲು ಪ್ರತಿ ಇಲಾಖೆಗೆ ತಿಳಿಸಲಾಗಿದೆ. ಯಾವುದೇ ಇಲಾಖೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಸರ್ಕಾರ ಅದನ್ನು ಬಗೆಹರಿಸುತ್ತದೆ. ಕೋವಿಡ್‌ನಿಂದ ಹಾನಿಗೊಳಗಾದ ಕ್ಷೇತ್ರಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಕಡಿಮೆ ಮಾಡುವ ಅಂತಿಮ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ತೆಗೆದುಕೊಳ್ಳುತ್ತದೆ ಎಂದು ಸೀತಾರಾಮನ್ ಹೇಳಿದ್ದಾರೆ.

English summary

Thinking About Extending The Lower Corporate Tax Deadline: Nirmala Sitharaman

Thinking About Expanding The Lower Corporate Tax Deadline: Nirmala Sitharaman, ಕ
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X