For Quick Alerts
ALLOW NOTIFICATIONS  
For Daily Alerts

ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣ : ಪ್ರಯಾಣಿಕರಿಂದ 100 ಕೋಟಿ ರುಪಾಯಿ ದಂಡ ವಸೂಲಿ

|

2019 ರ ಏಪ್ರಿಲ್ ನಿಂದ ಡಿಸೆಂಬರ್ ನಡುವೆ ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣಿಕರಿಂದ 104.10 ಕೋಟಿ ರುಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಟಿಕೆಟ್ ರಹಿತ ಅಥವಾ ಅನಿಯಮಿತ ಪ್ರಯಾಣದ 21.33 ಲಕ್ಷ ಪ್ರಕರಣಗಳು ಪತ್ತೆಯಾಗಿದೆ ಎಂದು ಪಶ್ಚಿಮ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿನ ಸಂಖ್ಯೆಗಳಿಗಿಂತ 8.85 ಪರ್ಸೆಂಟ್ ಹೆಚ್ಚಾಗಿದೆ. 2019 ರ ಡಿಸೆಂಬರ್ ತಿಂಗಳಲ್ಲಿ, ಟಿಕೆಟ್ ರಹಿತ ಅಥವಾ ಅನಿಯಮಿತ ಪ್ರಯಾಣದ 2.13 ಲಕ್ಷ ಪ್ರಕರಣಗಳಲ್ಲಿ 10.14 ಕೋಟಿ ರುಪಾಯಿ ವಸೂಲಿ ಮಾಡಲಾಗಿದೆ.

ರೈಲಿನಲ್ಲಿ ಟಿಕೆಟ್‌ ರಹಿತ ಪ್ರಯಾಣ : 100 ಕೋಟಿ ರುಪಾಯಿ ದಂಡ ವಸೂಲಿ

"ವಾಣಿಜ್ಯ ಇಲಾಖೆಯಿಂದ ಟೌಟ್ಸ್ ಮತ್ತು ಇತರ ಸಾಮಾಜಿಕ ವಿರೋಧಿ ಅಂಶಗಳ ವಿರುದ್ಧ 2019 ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಒಟ್ಟು 2,124 ತಪಾಸಣೆ ನಡೆಸಲಾಗಿದೆ" ಎಂದು ಪಶ್ಚಿಮ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರವೀಂದರ್ ಭಾಕರ್ ಹೇಳಿದ್ದಾರೆ.

ರೈಲ್ವೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ 1,821 ಜನರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ. ಜೊತೆಗೆ ಸುರಕ್ಷಿನಿ ದಳದಿಂದ 1,632 ಭಿಕ್ಷುಕರನ್ನು ರೈಲ್ವೆ ಆವರಣದಿಂದ ಹೊರ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary

Ticketless Train Travellers Fined 100 Crore Plus

Western Railway recovered ₹104.10 crore in fines from ticketless and irregular travellers between April to December 2019
Story first published: Wednesday, January 22, 2020, 12:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X