For Quick Alerts
ALLOW NOTIFICATIONS  
For Daily Alerts

ವೈಕುಂಠ ಏಕಾದಶಿ: ತಿರುಪತಿ ತಿಮ್ಮಪ್ಪನ ಹುಂಡಿಗೆ ಬಿದ್ದ ಬರೋಬ್ಬರಿ ಹಣ ಇಷ್ಟು!

|

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹುಂಡಿಗೆ ಭಕ್ತರು ಹಾಕಿದ ಒಂದು ದಿನದ ಹಣವು ಈ ಹಿಂದಿನ ದಾಖಲೆಯನ್ನು ಮುರಿದಿದೆ. ವೈಕುಂಠ ಏಕಾದಶಿ ದಿನವೇ ಸುಮಾರು 7.68 ಕೋಟಿ ರೂಪಾಯಿಯನ್ನು ಜನರು ಹುಂಡಿಗೆ ಹಾಕಿದ್ದಾರೆ. ಈ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಲಾಗಿದೆ.

 

ಈ ಹಿಂದೆ ಅಕ್ಟೋಬರ್ 23ರಂದು ಒಂದು ದಿನದಲ್ಲಿಯೇ ತಿರುಮಲ ತಿರುಪತಿ ದೇವಸ್ಥಾನದ ಹುಂಡಿಗೆ 6.31 ಕೋಟಿ ರೂಪಾಯಿ ಹುಂಡಿಗೆ ಹಾಕಿದ್ದಾರೆ. ಒಟ್ಟಾಗಿ 69,414 ಕೋಟಿ ಯಾತ್ರಿಗಳು ದೇವಾಲಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ 7.68 ಕೋಟಿ ರೂಪಾಯಿಯನ್ನು ಜನರು ಹುಂಡಿಗೆ ಹಾಕಿದ್ದಾರೆ.

ತಿರುಪತಿಯಲ್ಲಿ ಸ್ಥಾಪಿಸಲಾದ ಟೋಕನ್ ಕೌಂಟರ್‌ಗಳಿಂದ ಸಾವಿರಾರು ಭಕ್ತರು ವೈಕುಂಠ ಏಕಾದಶಿ ಮತ್ತು ವೈಕುಂಠ ದ್ವಾರ ದರ್ಶನ ತಿರುಮಲಕ್ಕೆ ಉಚಿತ ಟೋಕನ್‌ಗಳನ್ನು ತಿರುಪತಿಯಲ್ಲಿ ಸ್ಥಾಪಿಸಲಾದ ಟೋಕನ್ ಕೌಂಟರ್‌ಗಳಿಂದ ಪಡೆದಿದ್ದಾರೆ.

ವೈಕುಂಠ ಏಕಾದಶಿ: ತಿಮ್ಮಪ್ಪನ ಹುಂಡಿಗೆ ಬಿದ್ದ ಬರೋಬ್ಬರಿ ಹಣ ಇಷ್ಟು!

ಟೋಕನ್ ಕೌಂಟರ್‌ಗಳು

ಜನವರಿ 2 ರಿಂದ 11 ರವರೆಗೆ ತಿರುಮಲದಲ್ಲಿ ಆಚರಿಸಲಾಗುವ 10 ದಿನಗಳ ವೈಕುಂಟಾ ದ್ವಾರ ದರ್ಶನ ಉತ್ಸವಕ್ಕಾಗಿ ಭಕ್ತರಿಗೆ 4.5 ಲಕ್ಷ ಉಚಿತ ಎಸ್‌ಎಸ್‌ಡಿ ಟೋಕನ್‌ಗಳನ್ನು ವಿತರಣೆ ಮಾಡಲಾಗಿದೆ. ದಿನಕ್ಕೆ 45,000 ಟೋಕನ್ ವಿತರಿಸಲು ಟಿಟಿಡಿ ಒಂಬತ್ತು ಸ್ಥಳಗಳಲ್ಲಿ ಸುಮಾರು 100 ಕೌಂಟರ್‌ಗಳನ್ನು ಸ್ಥಾಪಿಸಿದೆ.

ವೈಕುಂಠ ದ್ವಾರ ದರ್ಶನದ ವೇಳೆ ದೂರದ ಊರುಗಳಿಂದ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಲು ಬಂದಿದ್ದ ಭಕ್ತರು ಶನಿವಾರ ರಾತ್ರಿಯಿಂದಲೇ ಒಂಬತ್ತು ಎಸ್‌ಎಸ್‌ಡಿ ಟೋಕನ್ ವಿತರಣಾ ಕೌಂಟರ್‌ಗಳ ಮುಂದೆ ಜಮಾಯಿಸಿದ್ದರು. ಮಧ್ಯರಾತ್ರಿ 1 ಗಂಟೆಯಿಂದಲೇ ಟೋಕನ್ ವಿತರಣೆ ಆರಂಭಿಸುವಂತೆ ಟಿಟಿಡಿ ಅಧಿಕಾರಿಗಳಿಗೆ ಒತ್ತಾಯಿಸಿದರು.

ಭಕ್ತರು ನೂಕುನುಗ್ಗಲು ತಪ್ಪಿಸಲು, ಅಧಿಕಾರಿಗಳು ಎಲ್ಲಾ ಒಂಬತ್ತು ಕೌಂಟರ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರೆ. ಈ ಕೌಂಟರ್‌ಗಳನ್ನು ತಿರುಪತಿಯ ಮೈದಾನದಲ್ಲಿ ಸ್ಥಾಪನೆ ಮಾಡಲಾಗಿದೆ.

"ಟೋಕನ್ ಕೌಂಟರ್‌ಗಳಲ್ಲಿ ಸರಿಯಾದ ನಿರ್ವಹಣೆಗಾಗಿ ಟಿಟಿಡಿ ಮತ್ತು ಪೊಲೀಸ್ ಇಲಾಖೆಯನ್ನು ಶ್ಲಾಘಿಸಬೇಕು. ಕೌಂಟರ್‌ಗಳಲ್ಲಿ ಪಂಡಲ್‌, ನೀರು, ಶೌಚಾಲಯಗಳು ಭಕ್ತರಿಗೆ ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಂಡಿದ್ದಾರೆ," ಎಂದು ಸ್ಲಾಟ್ ಟೋಕನ್ ಪಡೆದ ಭಕ್ತ ಯಶ್ ತಿಳಿಸಿದ್ದಾರೆ.

English summary

Tirumala Tirupati Temple Reported Highest Ever Hundi Collection Of Over Rs 7.6 Crores On Vaikunta Ekadasi

A sea of devotees on the Tirumala hill on the auspicious Vaikunta Ekadasi dropped a whopping Rs 7.68 crore as their offerings to Lord Venkateshwara, breaking the previous record of the highest Hundi collection on a single day.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X