For Quick Alerts
ALLOW NOTIFICATIONS  
For Daily Alerts

ಟ್ವಿಟ್ಟರ್ ಷೇರು ಮೌಲ್ಯ ಏರಿಕೆ, ಹೂಡಿಕೆದಾರರಿಗೆ ಭರ್ಜರಿ ಗಳಿಕೆ

|

ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಖರೀದಿಸಲು ಟೆಸ್ಲಾ, ಸ್ಪೇಸ್ ಎಕ್ಸ್ ಸಂಸ್ಥೆ ಒಡೆಯ ಎಲಾಮ್ ಮಸ್ಕ್ ಸಲ್ಲಿಸಿದ ಸ್ವಾಧೀನ ಬಿಡ್‌ಗೆ ಟ್ವಿಟ್ಟರ್ ಮಂಡಳಿ ಸಮ್ಮತಿ ಸೂಚಿಸಿದೆ. ಸರಿ ಸುಮಾರು $44 ಶತಕೋಟಿ ಬೆಲೆ ಮಾರಾಟದ ಡೀಲ್ ಆಗಿದೆ. ಮಸ್ಕ್ ಜೊತೆಗಿನ ಒಪ್ಪಂದಂತೆ ಷೇರುದಾರರು ಪ್ರತಿ ಷೇರಿಗೆ $54.20 ಸ್ವೀಕರಿಸುತ್ತಾರೆ ಎಂದು ವರದಿಯಾಗಿದೆ. ಈ ವರ್ಷದಲ್ಲೇ ಒಪ್ಪಂದದ ಎಲ್ಲಾ ಪ್ರಕ್ರಿಯೆಗಳು ಮುಕ್ತಗೊಳ್ಳುವ ನಿರೀಕ್ಷೆಯಿದೆ.

 

ಟ್ವಿಟ್ಟರ್ ಖರೀದಿ ಸುದ್ದಿ ಬರುತ್ತಿದ್ದಂತೆ ನಿನ್ನೆಯಿಂದ ಅಮೆರಿಕದ ಷೇರುಪೇಟೆಯಲ್ಲಿ ಸಂಚಲನ ಮೂಡಿತ್ತು. ಟ್ವಿಟರ್ ಷೇರು ಶೇ.3.7ರಷ್ಟು ಹೆಚ್ಚಿಗೆ ವಹಿವಾಟು ನಡೆಸಿತ್ತು. ಟೆಕ್-ಶ್ರೀಮಂತ ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್ 0.5 ಶೇಕಡಾ ಕಡಿಮೆಯಾಗಿ 12,778.57 ಕ್ಕೆ ತಲುಪಿತ್ತು ಮತ್ತು S&P 500 ಶೇಕಡಾ 0.7 ರಷ್ಟು ಕಳೆದುಕೊಂಡು 4,240.83 ಕ್ಕೆ ತಲುಪಿತ್ತು. ಡೌ ಜೋನ್ಸ್ ಕೈಗಾರಿಕಾ ಸರಾಸರಿ 0.5 ಶೇಕಡಾ ಕುಸಿದು 33,639.01 ಕ್ಕೆ ತಲುಪಿತ್ತು.

 
ಟ್ವಿಟ್ಟರ್ ಷೇರು ಮೌಲ್ಯ ಏರಿಕೆ, ಹೂಡಿಕೆದಾರರಿಗೆ ಭರ್ಜರಿ ಗಳಿಕೆ

ಇಂದು ಟ್ವಿಟ್ಟರ್ ಮಸ್ಕ್ ಪಾಲಾದ ಬಳಿಕ ನ್ಯೂಯಾರ್ಕ್ ಷೇರುಪೇಟೆಯಲ್ಲಿ 51.70 ಯುಎಸ್ ಡಾಲರ್ ನಂತೆ ವ್ಯವಹರಿಸುತ್ತಿದೆ. 48.93 ಯುಎಸ್ ಡಾಲರ್ ನಂತೆ ವ್ಯವಹಾರ ಆರಂಭಿಸಿ ದಿನಪೂರ್ತಿ 50.24 ರಿಂದ 52.29 ಯುಎಸ್ ಡಾಲರ್ ನಂತೆ ವಹಿವಾಟು ಕಂಡಿದೆ. ಟ್ವಿಟ್ಟರ್ ಸುಮಾರು 39.48 ಬಿಲಿಯನ್ ಯುಎಸ್ ಡಾಲರ್ ಮೌಲ್ಯ ಹೊಂದಿದೆ.

ಏಪ್ರಿಲ್ 1 ರಂದು ಟ್ವಿಟರ್‌ನ ಮುಕ್ತಾಯದ ಬೆಲೆಯ ಪ್ರಕಾರ ಸಂಸ್ಥೆ ಮೌಲ್ಯ 38% ಪ್ರೀಮಿಯಂ ಆಗಿದೆ, ಮಸ್ಕ್ ಕಂಪನಿಯಲ್ಲಿ 9% ಪಾಲನ್ನು ಘೋಷಿಸುವ ಮೊದಲು ಈ ಮೌಲ್ಯ ಕಾಣಲಾಗಿದೆ. ಖರೀದಿಗೆ ಮುನ್ನ ಟ್ವಿಟ್ಟರ್ ಮಂಡಳಿಯ ನಿಯಮದ ಪ್ರಕಾರ ಶೇ 9ಕ್ಕಿಂತ ಹೆಚ್ಚಿನ ಪಾಲನ್ನು ಯಾರೂ ಹೊಂದುವಂತಿರಲಿಲ್ಲ.

ಔಪಚಾರಿಕ ಖರೀದಿ ಪ್ರಸ್ತಾಪವನ್ನು ಮಾಡುವ ಮೊದಲು SpaceX ಮತ್ತು Tesla ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕರು ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಮಾಧ್ಯಮ ಸಂಸ್ಥೆಯಲ್ಲಿ ಪ್ರಮುಖ ಪಾಲನ್ನು ಪಡೆದುಕೊಂಡಿದ್ದರು. ಮಸ್ಕ್ ಅವರು ಸುಮಾರು $46.5 ಶತಕೋಟಿ (€43.4 ಶತಕೋಟಿ) ಒದಗಿಸಿದ್ದಾರೆ ಎಂದು ಹೇಳಿದರು.

English summary

Twitter shares rise as company accepted Musk's $43 billion offer

Twitter Inc's shares jumped at the opening of Wall Street trading on Monday amid reports the social media giant will soon accept Tesla CEO Elon Musk's offer to takeover, reported news agency AFP.
Story first published: Tuesday, April 26, 2022, 16:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X