ವಿಶ್ವದ ಸುಮಾರು 500 ಶ್ರೀಮಂತರು 2022ರಲ್ಲಿ ಈವರೆಗೆ ಬರೋಬ್ಬರಿ 1.4 ಟ್ರಿಲಿಯನ್ ಡಾಲರ್ ಅನ್ನು ಕಳೆದುಕೊಂಡಿದ್ದಾರೆ. ಸೋಮವಾರ ಒಂದು ದಿನದಲ್ಲೇ ಸುಮಾರು 206 ಬಿಲಿಯನ್ ಡಾಲರ್ ಅನ್ನು ಕಳೆದುಕೊಂಡಿದ್ದಾರೆ.
ಭಾರೀ ಶೀಘ್ರದಲ್ಲೇ ಲಾಭವನ್ನು ಮಾಡಿಕೊಂಡಿದ್ದ ವಿಶ್ವದ ಟಾಪ್ 500 ಶ್ರೀಮಂತರು 2022ರಲ್ಲಿ ಭಾರೀ ನಷ್ಟವನ್ನು ಕಂಡಿದ್ದಾರೆ. ಡೇಟಾ ಪ್ರಕಾರ ಏಷ್ಯಾ ಪ್ರಾಂತ್ಯದಲ್ಲಿ ಶ್ರೀಮಂತರ ಶ್ರೇಯಾಂಕ ಶೇಕಡ 4.2ರಷ್ಟು ಹೆಚ್ಚಾಗಿದೆ ಎಂದು ಉಲ್ಲೇಖ ಹೊಂದಿದೆ. ಆದರೆ ಉತ್ತರ ಅಮೆರಿಕದಿಂದ ಶ್ರೇಯಾಂಕಕ್ಕಿಂತ ಕೆಳಕ್ಕೆ ಇಳಿದಿದೆ.
ಭಾಗಶಃವಾಗಿ ಚೀನಾದಲ್ಲಿ ತಾಂತ್ರಿಕ ಕಂಪನಿ ಹಾಗೂ ಕೋಲಿಂಗ್ ರಿಯಲ್ ಎಸ್ಟೇಟ್ ಮಾರುಕಟ್ಟೆ ಶ್ರೀಮಂತರು ಭಾರೀ ಮೊತ್ತವನ್ನು ಕಳೆದುಕೊಳ್ಳಲು ಕಾರಣವಾಗಿದೆ. ಆದರೆ ಈ ಸಂಸ್ಥೆಗಳು ಯುಎಸ್ ಷೇರು ಮಾರುಕಟ್ಟೆಯಲ್ಲಿ ಭಾರೀ ಲಾಭವನ್ನು ಕಂಡಿದೆ.
ಕೋವಿಡ್ ಸಾಂಕ್ರಾಮಿಕದಿಂದಾದ ಲಾಭ?
ಕ್ಯಾಪ್‌ಜೆಮಿನಿ ವರದಿಯು ಕೊರೊನಾ ಸಾಂಕ್ರಾಮಿಕ ಸಂದರ್ಭವೂ ಈ ಶ್ರೀಮಂತರ ಬೆಳವಣಿಗೆಗೆ ಹೇಗೆ ಸಹಕಾರಿಯಾಗಿದೆ ಎಂಬುವುದನ್ನು ಉಲ್ಲೇಖಿಸಿದೆ. ಈ ವರದಿ ಪ್ರಕಾರ ಯುಎಸ್, ಜಪಾನ್, ಚೀನಾ ಹಾಗೂ ಜರ್ಮನಿ ಇನ್ನೂ ಕೂಡಾ ಪ್ರಪಂಚದ ಅತೀ ಹೆಚ್ಚು ಶ್ರೀಮಂತರು ವಾಸವಾಗಿರುವ ದೇಶವಾಗಿದೆ. ಅತೀ ಶ್ರೀಮಂತರು ಹೆಚ್ಚು ಲಾಭವನ್ನು ಕಂಡಿದ್ದಾರೆ. ಇನ್ನು 2020ಕ್ಕೆ ಹೋಲಿಕೆ ಮಾಡಿದಾಗ ಸುಮಾರು 30 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಅಧಿಕ ಆದಾಯ ಹೊಂದಿರುವವರ ಆದಾಯವು ಶೇಕಡ 9.6ರಷ್ಟು ಏರಿಕೆ ಕಂಡಿದೆ. ಇದು ಬಹಳ ಶೀಘ್ರವಾದ ಏರಿಕೆಯಾಗಿದೆ. ಆದರೆ ಈ ಸಂದರ್ಭದಲ್ಲೇ 1 ಮಿಲಿಯನ್ ಡಾಲರ್‌ನಿಂದ ಸುಮಾರು 1 ಮಿಲಿಯನ್ ಡಾಲರ್‌ವರೆಗೂ ಆದಾಯ ಹೊಂದಿರುವವರು ಭಾರಿ ನಿಧಾನವಾಗಿ ಆದಾಯ ಬೆಳವಣಿಗೆ ಕಂಡಿದ್ದಾರೆ. ಶೇಕಡ 7.8ರಷ್ಟು ಆದಾಯ ಬೆಳವಣಿಗೆ ಕಂಡಿದೆ.
ಯಾರಿಗೆ ಎಷ್ಟು ನಷ್ಟವಾಗಿದೆ?
ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್‌ಗೆ 73.2 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ. ಇನ್ನು ಚಾಂಗ್‌ಪೆಂಗ್ ಶ್ಹಾ ಅಧಿಕ ನಷ್ಟವನ್ನು ಕಂಡಿದ್ದಾರೆ. 85.6 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಇನ್ನು ಮಾರ್ಕ್ ಜುಕನ್ ಬರ್ಗ್ 64.4 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ. ಬಿಲ್ ಗೇಟ್ಸ್ 24.0 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ. ಈ ನಡುವೆ ಫ್ರಾನ್ಸ್‌ನ ಗೆರಾರ್ ವರ್ತೀಮೆರ್ 10.0 ಬಿಲಿಯನ್ ಡಾಲರ್ ಲಾಭವನ್ನು ಕಂಡಿದ್ದಾರೆ. ಇನ್ನು ರಷ್ಯಾದ ರಾಜಕಾರಣಿ, ಉದ್ಯಮಿ 4.41 ಬಿಲಿಯನ್ ಡಾಲರ್ ಲಾಭ ಕಂಡಿದ್ದಾರೆ.
ನಷ್ಟ ಕಂಡ ಭಾರತೀಯರು ಯಾರೆಲ್ಲಾ?
ಈ ನಡುವೆ ಭಾರತದ ಅತೀ ದೊಡ್ಡ ಉದ್ಯಮಿ ಮುಕೇಶ್ ಅಂಬಾನಿ 6.46 ಬಿಲಿಯನ್ ಡಾಲರ್ ಲಾಭವನ್ನು ಕಂಡಿದ್ದಾರೆ. ಮತ್ತೋರ್ವ ಉದ್ಯಮಿ ಗೌತಮ್ ಅದಾನಿ ಕೂಡಾ 16.4 ಬಿಲಿಯನ್ ಡಾಲರ್ ಲಾಭ ಕಂಡಿದ್ದಾರೆ. ಆದರೆ ಅಜೀಮ್ ಪ್ರೇಮ್‌ಜಿ 14.3 ನಷ್ಟವನ್ನು ಕಂಡಿದ್ದಾರೆ. ಈ ಮಧ್ಯೆ ಭಾರತದ ಉದ್ಯಮಿಗಳಾದ ಶಿವ ನಾದರ್, ರಾಧಾಕೃಷ್ಣನ್ ಧಾಮನಿ, ಲಕ್ಷ್ಮೀ ಮಿತಲ್, ಉದಯ್ ಕೋಟಕ್, ದಿಲೀಪ್ ಶಾಂಘ್ವಿ, ಸಿರಸ್ ಪೂನಾವಾಲಾ, ಸುನಿಲ್ ಮಿತಲ್, ಸಾವಿತ್ರಿ ಜಿಂದಾಲ್, ಕುಮಾರ್ ಬಿರ್ಲಾ, ನೂಸ್ಲಿ ವಾದಿಯಾ, ಕೆಪಿ ಸಿಂಗ್, ವಿಕ್ರಂ ಲಾಲ್, ಕೂಡಾ ನಷ್ಟ ಕಂಡಿದ್ದಾರೆ. ಅಶ್ವಿನಿ ಧಾನಿ ಕುಟುಂಬ, ಮಹೇಂದ್ರ ಚೌಕ್ಸಿ ಕುಟುಂಬ ಕೂಡಾ ನಷ್ಟ ಕಂಡಿದೆ.
ಎರಡು ಪೀಳಿಗೆ ಹೆಂಗಳೆಯರ ಕೈಗೆ ಮಾಲೀಕತ್ವ?
ಇನ್ನು ಈ ವರದಿ ಪ್ರಕಾರ ಇನ್ನೂ ಎರಡು ಪೀಳಿಗೆವರೆಗೆ ಶೇಕಡ 70ರಷ್ಟು ಜಾಗತಿಕ ಸಂಸ್ಥೆಯನ್ನು ಮಹಿಳೆಯರೇ ತಮ್ಮ ಅಧಿಕಾರಕ್ಕೆ ಪಡೆಯಲಿದ್ದಾರೆ ಎಂಬುವುದನ್ನು ಕೂಡಾ ವಿವರಿಸಿದೆ. ಪ್ರಸ್ತುತ ಶ್ರೀಮಂತರು ಎನಿಸಿಕೊಂಡಿರುವ ಶೇಕಡ 70ರಷ್ಟು ಜಾಗತಿಕ ಸಂಸ್ಥೆಯ ಮಾಲೀಕರ ಮರಣದ ನಂತರ ಆ ಸಂಸ್ಥೆಯ ಮಾಲೀಕತ್ವವನ್ನು ಅವರ ಹೆಣ್ಣು ಮಕ್ಕಳು ವಹಿಸಲು ಸಿದ್ಧವಾಗಿದ್ದಾರೆ ಎಂದು ವಿವರಿಸಿದೆ.


Click it and Unblock the Notifications