For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ನಿಂದ ಪುರಿ ಜಗನ್ನಾಥ ದೇವಾಲಯ ಖಾತೆಗೆ 397 ಕೋಟಿ ವರ್ಗಾವಣೆ

|

ಯೆಸ್ ಬ್ಯಾಂಕ್ ನಿಂದ ಪುರಿ ಜಗನ್ನಾಥ ದೇವಾಲಯ ಆಡಳಿತ ಮಂಡಳಿಗೆ ಬಡ್ಡಿಯೂ ಒಳಗೊಂಡಂತೆ 397 ಕೋಟಿ ರುಪಾಯಿಗೂ ಹೆಚ್ಚು ವರ್ಗಾವಣೆಯಾಗಿದೆ. ಈ ಬಗ್ಗೆ ಯೆಸ್ ಬ್ಯಾಂಕ್ ನ ಹಿರಿಯ ಉಪಾಧ್ಯಕ್ಷ ಜಯದೇವ್ ದಾಸ್ ಪತ್ರ ಬರೆದಿದ್ದಾರೆ. "ನೀವು ನೀಡಿದ್ದ ಸೂಚನೆ ಅನುಸಾರ ಒಟ್ಟು 397,23,27,636 ( 389 ಕೋಟಿ ಅಸಲು ಮತ್ತು 8,23,27,636 ಬಡ್ಡಿ ಮೊತ್ತ) ಜಗನ್ನಾಥ ದೇವಾಲಯದ ಎಸ್ ಬಿಐ ಖಾತೆಗೆ ವರ್ಗಾಯಿಸಿದ್ದೇವೆ" ಎಂದು ತಿಳಿಸಿದ್ದಾರೆ.

 

ಬ್ಯಾಂಕ್ ನ ನಿಯಮಾನುಸಾರ ತ್ರೈಮಾಸಿಕ ಬಡ್ಡಿಯನ್ನು ಡಿಸೆಂಬರ್ 31, 2019ರ ತನಕ ಪಾವತಿ ಮಾಡಲಾಗಿದೆ. ಮಾರ್ಚ್ 19, 2020ರ ವರೆಗಿನ ಬಡ್ಡಿಯನ್ನು ಅಸಲು ಮೊತ್ತವಾದ 389 ಕೋಟಿ ರುಪಾಯಿ ಜತೆಗೆ ಸೇರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರುವ ಜಗನ್ನಾಥ್ ದೇವಸ್ಥಾನ ಕಾರ್ಪಸ್ ಫಂಡ್ ಗೆ ವರ್ಗಾಯಿಸುತ್ತೇವೆ ಎಂದಿದ್ದಾರೆ.

 

ಜಗನ್ನಾಥ ದೇವಾಲಯಕ್ಕೆ ಸೇರಿದ 156 ಕೋಟಿ ರುಪಾಯಿಯ ಇನ್ನೂ ಎರಡು ಫಿಕ್ಸೆಡ್ ಡೆಪಾಸಿಟ್ಸ್ ಬ್ಯಾಂಕ್ ಬಳಿ ಇವೆ. ಅವುಗಳ ಮೆಚ್ಯೂರಿಟಿ ದಿನಾಂಕ ಮಾರ್ಚ್ 30, 2020 ಇದ್ದು, ಆ ಮೊತ್ತವನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅದೇ ಖಾತೆಗೆ ಜಮೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಯೆಸ್ ಬ್ಯಾಂಕ್ ನಿಂದ ಪುರಿ ಜಗನ್ನಾಥ ದೇವಾಲಯ ಖಾತೆಗೆ 397 ಕೋಟಿ

ಮಾರ್ಚ್ 5ನೇ ತಾರೀಕಿನಂದು ಯೆಸ್ ಬ್ಯಾಂಕ್ ಮೇಲೆ ವಿಧಿಸಿದ್ದ ನಿರ್ಬಂಧವನ್ನು 18ನೇ ತಾರೀಕು ತೆರವು ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಯೆಸ್ ಬ್ಯಾಂಕ್ ನಲ್ಲಿ 7250 ಕೋಟಿ ರುಪಾಯಿ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

English summary

Yes Bank Transferred 397 Crore To Puri Jagannatha Temple Account

Crisis hit Yes bank has transferred 397 crore rupees (principal and interest) transferred to Puri Jagannatha temple account.
Story first published: Thursday, March 19, 2020, 14:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X