
ವಾರ್ಷಿಕ ಐದು ಲಕ್ಷಕಿಂತ ಹೆಚ್ಚು ಆದಾಯ ಇರುವವರು ಕಡ್ಡಾಯವಾಗಿ ಇ-ಫೈಲ್ ಮಾಡುವ ಅಗತ್ಯ ಇದೆ. ಕಳೆದ ವರ್ಷ 10 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರಿಗೆ ಮಾತ್ರ ಇ-ಫೈಲಿಂಗ್ ಗೆ ಅವಕಾಶ ಕಲ್ಪಿಸಲಾಗಿತ್ತು.
ಪ್ರವಾಹ ಪೀಡಿತ ಉತ್ತರಾಖಂಡ್ ರಾಜ್ಯದ ನಿವಾಸಿಗಳಿಗೆ ಜುಲೈ 31 ರ ಬದಲಿಗೆ ಅಕ್ಟೋಬರ್ 31ರ ತನಕ ವಿಸ್ತರಿಸಿ Central Board of Direct Taxes ಸಿಬಿಡಿಟಿ ಆದೇಶ ನೀಡಿತ್ತು.
ಲಭ್ಯ ಮಾಹಿತಿ ಪ್ರಕಾರ ಸೋಮವಾರ ದಿನದ ಕೊನೆಗೆ ಸುಮಾರು 82 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿದೆ. ಕಳೆದ ವರ್ಷದ ಅಂಕಿ ಅಂಶಕ್ಕೆ ಹೋಲಿಸಿದರೆ ಈ ಬಾರಿ ಶೇ 40 ರಷ್ಟು ಅಧಿಕ ಮಂದಿ ತೆರಿಗೆ ಪಾವತಿಸಿದ್ದಾರೆ. ಜುಲೈ 30, 2013 ರಂದು ಸುಮಾರು ಪ್ರತಿ ಗಂಟೆಗೆ 85,000 ಐಟಿ ರಿಟರ್ನ್ಸ್ ಫೈಲ್ ಆಗಿದೆ. ಮಂಗಳವಾರ ಕಡೆಯ ದಿನವಾಗಿದ್ದರಿಂದ ಕೊನೆ ಗಳಿಗೆಯಲ್ಲಿ ಇ ಫೈಲ್ ಮಾಡಲು ಹರ ಸಾಹಸಪಟ್ಟಿದ್ದಾರೆ.
ಆದಾಯ ತೆರಿಗೆ ಇಲಾಖೆ ವೆಬ್ ತಾಣ ಹೆಚ್ಚಿನ ಟ್ರಾಫಿಕ್ ನಿಂದಾಗಿ ಕೆಲ ಕಾಲ ಸ್ಥಗಿತಗೊಂಡಿದ್ದರೂ ನಂತರ ಚೇತರಿಸಿಕೊಂಡು ನಿರಂತರವಾಗಿ ತೆರಿಗೆದಾರರಿಗೆ ಲಭ್ಯವಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬ್ಯಾಂಕುಗಳಿಗೆ ಇ ಪಾವತಿ ಸೌಲಭ್ಯ ಒದಗಿಸಲು ಮಾನ್ಯತೆ ನೀಡಿದೆ. ಈ ರೀತಿ 29 ಬ್ಯಾಂಕುಗಳ ಪಟ್ಟಿ ಇಲ್ಲಿದೆ. ಈ ಬ್ಯಾಂಕ್ ಗಳಲ್ಲಿ ನೀವು ಇ ಪಾವತಿ ಮಾಡಬಹುದು. ವೆಬ್ ಸೈಟ್ ಗಳು ಹಾಗೂ ಐಟಿ ರಿಟರ್ನ್ಸ್ ಗೆ ತಗುಲುವ ವೆಚ್ಚಗಳ ವಿವರಗಳನ್ನು ಇಲ್ಲಿ ನೋಡಿ.
ಆನ್ ಲೈನ್ ಮೂಲಕ ಇರಲಿ, ಅಥವಾ ಕಚೇರಿಗೆ ನೇರ ಹೋಗಿ ತೆರಿಗೆ ಕಟ್ಟುವುದಿರಲಿ ಕೆಲವು ಕಡ್ಡಾಯವಾದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ದಾಖಲೆಗಳ ವಿವರ ಇಲ್ಲಿದೆ
ಆನ್ ಲೈನ್ ಮೂಲಕ ತೆರಿಗೆ ಪಾವತಿಯಿಂದ ಅನೇಕ ಅನುಕೂಲಗಳಿದೆ ಏನು ಅನುಕೂಲ? ಆನ್ ಲೈನ್ ಮೂಲಕ ಪಾವತಿ ಮಾಡುವುದು ಎಷ್ಟು ಸುರಕ್ಷಿತ? ಇ ಪಾವತಿಯ ಬಗ್ಗೆ ಇರುವ ನಂಬಿಕೆಗಳು ನೈಜತೆ ಏನು ಎಂಬುದರ ವಿವರ ಇಲ್ಲಿದೆ.


Click it and Unblock the Notifications