For Quick Alerts
ALLOW NOTIFICATIONS  
For Daily Alerts

ವಿದೇಶದಲ್ಲಿ ಓದೋ ಆಸೆ ಇದ್ರೆ ಈಗ ಕಷ್ಟ ಕಷ್ಟ!

By Mahesh
|

ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದು ಕನಸು ಹೊತ್ತಿರುವ ಅನೇಕ ಭಾರತೀಯ ವಿದ್ಯಾರ್ಥಿಗಳಿಗೆ ಈಗ ಕೆಟ್ಟಕಾಲ. ಡಾಲರ್ vs ರುಪಾಯಿ ಸಮರದಿಂದ ವಿದ್ಯಾರ್ಥಿಗಳ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಉಳ್ಳವರಿಗೆ ಮಾತ್ರ ವಿದೇಶಿ ವ್ಯಾಸಂಗ ಎಂಬ ಮಾತು ನಿಜವಾಗುತ್ತಿದೆ.

ಪ್ರತಿಭಾವಂತರಿದ್ದರೂ ಕೈಲಿ ಹಣದ ಥೈಲಿ ಜೋರಾಗಿಲ್ಲದಿದ್ದರೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಕಷ್ಟವಾಗಲಿದೆ. ರುಪಾಯಿ ಮೌಲ್ಯ ಕುಸಿತ ಹಾಗೂ ಡಾಲರ್ ಮೌಲ್ಯ ನಿರಂತರ ಜಿಗಿತವೇ ಇದಕ್ಕೆ ಕಾರಣ.

ವಿದೇಶದಲ್ಲಿರುವ ಅನೇಕ ವಿಶ್ವವಿದ್ಯಾಲಯಗಳು ಸ್ಕಾಲರ್ ಶಿಪ್ ನೀಡಿದರೂ ಶುಲ್ಕ ಪಾವತಿ ವೆಚ್ಚ ಕೂಡಾ ಅಧಿಕವಾಗಿದೆ. ಸದ್ಯಕ್ಕೆ ಡಾಲರ್ ಎದುರು ರುಪಾಯಿ ಬೆಲೆ 64.15ರು ನಷ್ಟಿದೆ. ಒಂದು ತಿಂಗಳ ಹಿಂದೆ ಇದೇ ಮೌಲ್ಯ 62.24 ರು.ನಷ್ಟಿತ್ತು.

ಡಾಲರ್ ಎಫೆಕ್ಟ್: ಉದಾಹರಣೆಗೆ ನಿಮ್ಮ ಬಳಿ 5 ಲಕ್ಷ ರು ಗಳಿದ್ದು ನಿಮ್ಮ ಟ್ಯೂಷನ್ ಶುಲ್ಕ ಹಾಗೂ ವೈಯಕ್ತಿಕ ಖರ್ಚು ವೆಚ್ಚ ನಿಭಾಯಿಸಲು ಬಜೆಟ್ ತಯಾರಿಸಿರುತ್ತೀರಿ. ಕನಿಷ್ಠ 8033 ಡಾಲರ್ ಬೇಕಾಗುತ್ತದೆ. ಅದರೆ, ಸದ್ಯದ ರುಪಾಯಿ ದರದಂತೆ 5 ಲಕ್ಷ ರು ವನ್ನು 64.15ರುನಂತೆ ಪರಿವರ್ತಿಸಿದರೆ 7794 ಡಾಲರ್ ಮಾತ್ರ ಕೈ ಸೇರಲಿದೆ.

ವಿದೇಶದಲ್ಲಿ ಓದೋ ಆಸೆ ಇದ್ರೆ ಈಗ ಕಷ್ಟ ಕಷ್ಟ!

ರುಪಾಯಿ ಅಪಮೌಲ್ಯದಿಂಡಾಗಿ ಸರಿ ಸುಮಾರು 16,000ರು ಗೂ ಅಧಿಕ ನಷ್ಟ ಭರಿಸಲು ಸಿದ್ಧರಿದ್ದರೆ ಈಗಲೇ ವಿಮಾನ ಟಿಕೆಟ್ ಬುಕ್ ಮಾಡಿಕೊಳ್ಳಿ.

ಟ್ರಾವೆಲರ್ಸ್ ಚೆಕ್ ಅಥವಾ ವಿದೇಶಿ ವಿನಿಮಯ ಕೇಂದ್ರದ ಡೀಲರ್ ಬಳಿ ಚಾಲ್ತಿಯಲ್ಲಿರುವ ಡಾಲರ್ಸ್ ದರ ಕೇಳಿದರೆ ಲೆಕ್ಕಾಚಾರ ಇನ್ನಷ್ಟು ತಲೆಕೆಡಿಸುತ್ತದೆ. ಥಾಮಸ್ ಕುಕ್ ಸದ್ಯಕ್ಕೆ 64.85 ರು vs ಡಾಲರ್ ರೇಟ್ ನೀಡುತ್ತಿದ್ದಾರೆ.

ಮುಂದೇನು?: ರುಪಾಯಿ ಮೌಲ್ಯ ಹೆಚ್ಚಾಗಬೇಕು. ಇಲ್ಲದಿದ್ದರೆ ಪ್ರತಿ ಡಾಲರ್ ಖರೀದಿಗೂ ಹೆಚ್ಚಿನ ಮೌಲ್ಯ ನೀಡಬೇಕಾಗುತ್ತದೆ. ಅದರೆ, ರುಪಾಯಿ vs ಡಾಲರ್ ದರದಲ್ಲಿ 63-65 ರು ಮಾರ್ಕ್ ಗೆ ಆರ್ ಬಿಐ ಕೂಡಾ ಬದ್ಧವಾಗಿದ್ದರೆ ವಿದ್ಯಾರ್ಥಿಗಳು ಯೋಜನೆ ಬಗ್ಗೆ ಚಿಂತಿಸುವುದು ಒಳಿತು.

ಕಳೆದ ಐದು ತಿಂಗಳಲ್ಲಿ ರುಪಾಯಿ ಮೌಲ್ಯ ಹೀಗಿದೆ
* ಜನವರಿ 13, 2015: 61.94
* ಫೆಬ್ರವರಿ 13, 2015: 62.07
* ಮಾರ್ಚ್ 13, 2015: 63.08
* ಏಪ್ರಿಲ್ 13, 2015: 62.24
* ಮೇ 13, 2015: 64.15

ಕೊನೆಯದಾಗಿ ರುಪಾಯಿ ಮೌಲ್ಯ ಚೇತರಿಕೆ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಡಾಲರ್ ಕುಸಿತಕ್ಕೆ ಕಾರಣವಾಗುವ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದರೂ ರುಪಾಯಿ ಮೌಲ್ಯ ತೀವ್ರವಾಗಿ ಏರಿಕೆಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ರುಪಾಯಿ vs ಡಾಲರ್ ಚಾರ್ಟ್ ನೋಡಿಕೊಂಡು ನಿಮ್ಮ ಯೋಜನೆ ಹಾಕಿಕೊಳ್ಳುವುದು ಒಳ್ಳೆಯದು. (ಗುಡ್ ರಿಟರ್ನ್ಸ್.ಇನ್)

English summary

Studying Abroad Becomes Expensive As Dollar Turns Costly

It's a bad time of the year for the rupee to fall against the dollar, especially for students who are making travel plans to study abroad or for payment of fees to universities abroad.
Story first published: Wednesday, May 13, 2015, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X