For Quick Alerts
ALLOW NOTIFICATIONS  
For Daily Alerts

ಯುಎಎನ್ ಎಂದರೇನು? ಡೌನ್ ಲೋಡ್ ಹೇಗೆ?

|

ನಿಮ್ಮ ಕೆಲಸದ ಸಕಲ ಮಾಹಿತಿ ಒಳಗೊಳ್ಳುವ ಯುನಿವರ್ಸಲ್ ಅಕೌಂಟ್ ನಂಬರ್ ಬಗ್ಗೆ ತಿಳಿದುಕೊಳ್ಳಲೇಬೇಕು. ಯುಎಎನ್ ನಿಮ್ಮ ಉಳಿದ ಎಲ್ಲ ಖಾತೆಗಳ ನಂಬರ್ ನ ಗುಚ್ಛವಾಗಿ ಕೆಲಸ ಮಾಡುತ್ತದೆ. ಹೆಸರೇ ಸೂಚಿಸಿವಂತೆ ಇದು ಯಾವ ಕಾಲಕ್ಕೂ ಬದಲಾಗುವುದಿಲ್ಲ.
ನೀವು ಕಂಪನಿಯನ್ನು ಬದಲಾವಣೆ ಮಾಡಿದರೆ ನಿಮ್ಮ ಇಪಿಎಫ್ ನಂಬರ್ ಮಾತ್ರ ಬದಲಾಗುತ್ತದೆ. ಯುಎಎನ್ ನಂಬರ್ ಮೂಲಕ ಹಿಂದಿನ ಕಂಪನಿ ಇಪಿಎಫ್ ಗೆ ಸಂಬಂಧಿಸಿದ ಸಕಲ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಯುಎಎನ್ ನಂಬರ್ ನ ಪ್ರಮುಖ ಲಕ್ಷಣವೆಂದರೆ ದೇಶಾದ್ಯಂತ ಏಕ ಸಂಖ್ಯೆಯನ್ನು ನೀಡುವುದು. ಒಮ್ಮೆ ಯುಎಎನ್ ಅಡಿಯಲ್ಲಿ ನೀವು ಬಂದರೆ ಹೊಸ ಕಂಪನಿಗೆ ಸೇರಿದರೆ ಆ ನಂಬರ್ ನೀಡಿದರೆ ಸಾಕಾಗುತ್ತದೆ.[ಮೊಬೈಲಿನಲ್ಲೇ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ]

ಯುಎಎನ್ ಎಂದರೇನು? ಡೌನ್ ಲೋಡ್ ಹೇಗೆ?

ಯುಎಎನ್ ಪಡೆಯುವುದು ಹೇಗೆ?
ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮಗೆ ಯುಎಎನ್ ನಂಬರ್ ನೀಡಬೇಕು. ಕಂಪನಿಯಲ್ಲಿ ನಿಮ್ಮ ದಾಖಾಲಾತಿ ಸಂಖ್ಯೆಯನ್ನು ಇದು ಒಳಗೊಂಡಿರುತ್ತದೆ. ನೀವು ಇನ್ನು ಯುಎಎನ್ ನಂಬರ್ ಪಡೆಯದಿದ್ದರೆ ಎಚ್ ಆರ್ ವಿಭಾಗದಲ್ಲಿ ಒಮ್ಮೆ ವಿಚಾರಿಸುವುದು ಉತ್ತಮ.

ಯುಎಎನ್ ಮತ್ತು ಅದರ ಮಾಹಿತಿ ಪಡೆದುಕೊಳ್ಳುವುದು ಹೇಗೆ?
ಇದಕ್ಕೆ ಮೊದಲು ನೀವು ಯುಎಎನ್ ಆಧಾರಿತ ಅಂತರ್ಜಾಲ ತಾಣಕ್ಕೆ (http://uanmembers.epfoservices.in) ಪ್ರವೇಶ ಪಡೆಯಬೇಕು. [ಇಪಿಎಫ್ ಆನ್ ಲೈನ್ ಗೆ ವರ್ಗ]

ಅಲ್ಲಿ ದೊರೆಯುವ ‘ACTIVATE YOUR UAN' ಆಯ್ಕೆಯನ್ನು ಬಳಸಿಕೊಂಡು ಪ್ರವೇಶ ದಾಖಲಿಸಬಹುದು. ನಿಮ್ಮ ಯುಎಎನ್ ನಂಬರ್, ಮೊಬೈಲ್ ಸಂಖ್ಯೆ ಮತ್ತು ಮೆಂಬರ್ ಐಡಿಯನ್ನು ಸಿದ್ಧವಾಗಿ ಇರಿಸಿಕೊಂಡಿರಬೇಕು.

* ಯುಎಎನ್ ಕಾರ್ಡ್ ಡೌನ್ ಲೋಡ್
ಯುಎಎನ್ ಕಾರ್ಡ್ ಮೂಲಕ ಲಾಗ್ ಇನ್ ಆದ ನಂತರ ಮಾಹಿತಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ‘Download UAN Card' ಆಯ್ಕೆ ಬಳಕೆ ಮಾಡಿಕೊಳ್ಳುವುದರ ಮುಖೇನ ದಾಖಲೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

* ಹಿಂದಿನ ದಾಖಲಾತಿ ನೀಡುವುದರ ಲಾಭವೇನು?
ನಿಮ್ಮ ಹಲವಾರು ಸದಸ್ಯ ಸಂಖ್ಯೆಗಳನ್ನು ಸಿಂಗಲ್ ಡಿಜಿಟ್ ಆಗಿ ಪರಿವರ್ತಿಸುವುದೇ ಇದರ ಮುಖ್ಯ ಉದ್ದೇಶ. ನಿಮ್ಮ ಎಲ್ಲ ಹಿಂದಿನ ದಾಖಲೆಗಳನ್ನು ಪರಿಶೀಲನೆ ಮಾಡಲು ಅವಕಾಶ ಸಿಗುತ್ತದೆ. ಆನ್ ಲೈನ್ ಮುಖಾಂತರವೇ ಹಣದ ರವಾನೆ ಅಥವಾ ವಿತ್ ಡ್ರಾ ಮಾಡಲು ಸಾಧ್ಯವಾಗುತ್ತದೆ. ಜತೆಗೆ ಹಿಂದಿನ ವ್ಯವಹಾರದ ಸಕಲ ಮಾಹಿತಿ ಪಡೆದುಕೊಳ್ಳಬಹುದು.

ಫಾರ್ಮ್-11 ರ ಮುಖಾಂತರ ನಿಮ್ಮ ಎಲ್ಲ ಮಾಹಿತಿಗಳನ್ನು ಇಲ್ಲಿ ಬಹಿರಂಗ ಮಾಡಿರಬೇಕಾಗುತ್ತದೆ. ಅಲ್ಲದೇ ಎಲ್ಲ ಸರಿಯಾಗಿದೆ ಎಂದು ಜಾಹೀರು ಮಾಡುವುದು ಅನಿವಾರ್ಯವಾಗುತ್ತದೆ.

* ಕೆಲಸ ಬದಲಾವಣೆ ಮಾಡಿದರೆ ಏನು ಮಾಡಬೇಕು?
ಇದು ಬಹಳ ಸುಲಭ. ನೀವು ಪಡೆದುಕೊಂಡಿರುವ ಅಥವಾ ದೊರೆತಿರುವ ಯುಎಎನ್ ಅಂಕೆಯನ್ನು ಸಂಬಂಧಿಸಿದ ಕಂಪನಿಯ ಎಚ್ ಆರ್ ವಿಭಾಗಕ್ಕೆ ಒದಗಿಸಬೇಕು.

* ಡೌನ್ ಲೋಡ್ ಮಾಡಿಕೊಳ್ಳುವ ಹಂತಗಳು
1. ಲಾಗ್ ಇನ್(ಯುಸರ್ ನೇಮ್ ಅಂದರೆ ನಿಮ್ಮ ಯುಎಎನ್ ನಂಬರ್)
2. ಡೌನ್ ಲೋಡ್ ಮೆನುಗೆ ತೆರಳಿ, ಡೌನ್ ಲೋಡ್ ಕಾರ್ಡ್' ಆಯ್ಕೆ ಮಾಡಿಕೊಳ್ಳಿ
3. ನಂತರ ಕ್ಲಿಕ್ ಮಾಡಿ. ನಿಮ್ಮ ಯುಎನ್ ಕಾರ್ಡ್ ಇದೀಗ ಡೌನ್ ಲೋಡ್ ಆಗಿರುತ್ತದೆ.(ಗುಡ್ ರಿಟರ್ನ್ಸ್. ಇನ್)

English summary

Universal Account Number (UAN) for EPF Members: 6 Things you Should Know

Universal Account Number (UAN) will act as an umbrella for the multiple Member IDs allotted to an individual by different establishments. What this means, when an individual changes the company, EPF number changes with it. The UAN will help to link all the previous companies member IDs.
 
 
Story first published: Tuesday, May 5, 2015, 15:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X