For Quick Alerts
ALLOW NOTIFICATIONS  
For Daily Alerts

ಹಿರಿಯ ನಾಗರಿಕರಿಗೆ ಬಜೆಟ್ ನೀಡಿದ ಕೊಡುಗೆಗಳೇನು?

|

ಕೇಂದ್ರ ಸರ್ಕಾರದ ಮುಂಗಡ ಪತ್ರ ಮಂಡನೆಯಾಗಿದೆ. ತೆರಿಗೆ ಪದ್ಧತಿಯಲ್ಲೂ ಹಲವಾರು ಬದಲಾವಣೆ ಮಾಡಲಾಗಿದೆ. ಇದರ ಜತೆಗೆ ಅರುಣ್ ಜೇಟ್ಲಿ ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

 

60 ವರ್ಷ ಮೇಲ್ಪಟ್ಟ ಮತ್ತು 80 ವರ್ಷ ಒಳಗಿನ ಹಿರಿಯ ನಾಗರಿಕರು ತೆರಿಗೆ ವಿನಾಯಿತಿ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ. ಹಾಗಾದರೆ ಹಿರಿಯ ನಾಗರಿಕರಿಗೆ ಈ ಬಾರಿಯ ಬಜೆಟ್ ಕೊಡಮಾಡಿದ ಸೌಲಭ್ಯಗಳನ್ನು ನೋಡಿಕೊಂಡು ಬರೋಣ....[ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

 
ಹಿರಿಯ ನಾಗರಿಕರಿಗೆ ಬಜೆಟ್ ನೀಡಿದ ಕೊಡುಗೆಗಳೇನು?

1. ನಿವೃತ್ತಿ ಸಮಯದಲ್ಲಿ ಶೇ. 40 ಕ್ಕೂ ಅಧಿಕ ಹಣ ಪಾವತಿಗೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ನ್ಯಾಶನಲ್ ಪೆನ್ಶನ್ ಯೋಜನೆಗೆ ಹೊಸ ನೀತಿ ಅನ್ವಯವಾಗಲಿದೆ. ಒಂದು ವೇಳೆ ಕಾನೂನು ಸಮರಕ್ಕೆ ನಿವೃತ್ತಿ ವೇತನ ಪ್ರಕರಣ ಒಳಪಟಡ್ಟರೂ ತೆರಿಗೆ ಕಟ್ಟಬೇಕಾಗಿಲ್ಲ.

2. ಇಪಿಎಫ್ ಒಳಗೊಂಡಂತೆ ಗುರುತರವಾದ ಪ್ರಾವಿಡೆಂಟ್ ಫಂಡ್ ಗಳು ಶೇ. 40 ರಷ್ಟು ಮೊತ್ತಕ್ಕೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ದಿನಾಂಕ 1-4-2016 ರಿಂದಲೇ ಹೊಸ ನೀತಿ ಅನುಸರಣೆಗೆ ಬರುತ್ತದೆ.[ಈ ಸುದ್ದಿ ಮನೆ ಹಿರಿಯರಿಗೆ ತಪ್ಪದೇ ತಿಳಿಸಿ]

3. ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ ಒಳಗೊಂಡಂತೆ ಗುರುತರ ವಾದ ಯೋಜನೆಗಳಿಗೆ ವರ್ಷಕ್ಕೆ 1.5 ಲಕ್ಷ ರು. ವರೆಗೆ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು. ಆದರೆ ಸೇವಾ ಶುಲ್ಕವನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

4. ವಿಮಾ ಯೋಜನೆಗಳಿಗೆ ಸಂಬಂಧಿಸಿದ ಸೇವಾ ಶುಲ್ಕದಲ್ಲಿ ಕಡಿತ ಮಾಡಲಾಗಿದೆ. ಶೇ. 3.5 ರಿಂದ ಶೇ. 1.4ಕ್ಕೆ ಇಳಿಕೆ ಮಾಡಲಾಗಿದೆ.

ವ್ಯಕ್ತಿಯೊಬ್ಬರಿಂದ ಅತ್ಯಧಿಕ ಎಂದರೆ ಆರು ಸಾವಿರ ರು. ಪಡೆದುಕೊಳ್ಳಬಹುದು. ಹಿರಿಯ ನಾಗರಿಕರ ಬಗ್ಗೆ ಕೇಂದ್ರ ಸರ್ಕಾರ ಈ ಬಾರಿ ಹೆಚ್ಚಿನ ಗಮನ ನೀಡಿದೆ. (ಗುಡ್ ರಿಟರ್ನ್ಸ್.ಇನ್)

English summary

4 Benefits For Senior Citizen From Union Budget 2016

The Union Finance Minister Shri Arun Jaitley said that the taxation is a major changes which will benefit senior citizens in the country. Individuals who are above the age of 60 years, but less than 80 years at any time during the respective year will be eligible for tax benefits under income tax act.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X