For Quick Alerts
ALLOW NOTIFICATIONS  
For Daily Alerts

ವಿದ್ಯುನ್ಮಾನ ಮಾದರಿಯಲ್ಲಿ ಕಿಸಾನ ವಿಕಾಸ ಪತ್ರ ಮತ್ತು NSC

By Siddu
|

ಕಿಸಾನ ವಿಕಾಸ ಪತ್ರ(KVP) ಮತ್ತು ರಾಷ್ಟ್ರೀಯ ಉಳಿತಾಯ ಪತ್ರ(NSC)ಗಳು ಪೋಸ್ಟ್ ಆಫೀಸಿನ ಜನಪ್ರಿಯ ಯೋಜನೆಗಳಾಗಿವೆ. ಈ ಯೋಜನೆಗಳು ಈಗ ವಿದ್ಯುನ್ಮಾನ ಮಾದರಿಯಲ್ಲಿ ಲಭ್ಯವಿದ್ದು ವ್ಯವಹಾರ ನಡೆಸುವುದು ಮೊದಲಿಗಿಂತ ಇನ್ನೂ ಸುಲಭವಾಗಿದೆ.
ಕಿಸಾನ ವಿಕಾಸ ಪತ್ರ(KVP)ಗಳು 1,000 ರೂ.ಗಳಿಂದ 50,000 ರೂ.ಗಳಿಗೆ ತಮ್ಮ ಮುಖಬೆಲೆಯನ್ನು ಬದಲಾಯಿಸಿವೆ. ಕಿಸಾನ ವಿಕಾಸ ಪತ್ರಗಳನ್ನು ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕುಗಳಿಂದ ಖರೀದಿಸಬಹುದಾಗಿದೆ. 30 ತಿಂಗಳುಗಳ ನಂತರ ಇವುಗಳನ್ನು ಪಡೆಯಬಹುದಾಗಿದೆ.
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ಬ್ಯಾಂಕುಗಳಿಂದ ಸಾಲ ಪಡೆಯುವಾಗ ಭದ್ರತಾ ಆಧಾರಗಳಾಗಿ ಬಳಸಬಹುದಾಗಿದೆ. 80C ಸೆಕ್ಷನ್ ಅಡಿಯಲ್ಲಿ 1.5 ಲಕ್ಷದ ಹೂಡಿಕೆ ಮೆಲೆ ಆದಾಯ ತೆರಿಗೆಯಿಂದ ರಿಯಾಯಿತಿ ಪಡೆಯಬಹುದು.

ಹೊಸ ಕ್ರಮಸಂಖ್ಯೆ

ಹೊಸ ಕ್ರಮಸಂಖ್ಯೆ

ಒಂದು ಬಾರಿ ವಿದ್ಯುನ್ಮಾನ ಮಾದರಿಯಲ್ಲಿ ಪತ್ರ ಬಂದ ನಂತರ ಹೊಸ ಕ್ರಮಸಂಖ್ಯೆ ದೊರೆಯುತ್ತದೆ. ಅದರಲ್ಲಿ ಯಾವುದೇ ತಪ್ಪುಗಳಿರುವುದಿಲ್ಲ.

ನೆಟ್ ಬ್ಯಾಂಕಿಂಗ್

ನೆಟ್ ಬ್ಯಾಂಕಿಂಗ್

ಈ ಸೇವೆಯನ್ನು ಪಡೆಯಲು ಬಳಕೆದಾರರು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಸಕ್ರಿಯಗೊಳಿಸಬೇಕು.

CBS (Core Banking Solution)ಶಾಖೆಗಳು

CBS (Core Banking Solution)ಶಾಖೆಗಳು

CBS ಅಲ್ಲದ ಪೋಸ್ಟ್ ಆಫೀಸಿನ ಎಲ್ಲ ಶಾಖೆಗಳಲ್ಲಿ ಕೆವಲ ಕಿಸಾನ ವಿಕಾಸ ಪತ್ರ(KVP) ಮತ್ತು ರಾಷ್ಟ್ರೀಯ ಉಳಿತಾಯ ಪತ್ರ(NSC) ಗಳ ಪಾಸ್ ಬುಕ್ ಗಳನ್ನು ಮಾತ್ರ ಸ್ವೀಕರಿಸಿಲಾಗುತ್ತದೆ.

ಖಾತೆಗಳು
 

ಖಾತೆಗಳು

ಬ್ಯಾಂಕು ಖಾತೆ ಅಥವಾ ಪೋಸ್ಟಾಫೀಸು ಖಾತೆ ಹೊಂದಿರುವವರು ಮಾತ್ರ ಈ ಆಯ್ಕೆಯನ್ನು ಬಳಸಬಹುದಾಗಿದೆ.

ಪಾಸ್ ಬುಕ್ ಮಾದರಿ ಮತ್ತು ಇ-ಮಾದರಿ

ಪಾಸ್ ಬುಕ್ ಮಾದರಿ ಮತ್ತು ಇ-ಮಾದರಿ

ವೈಯಕ್ತಿಕ ಬಳಕೆದಾರರು ಪಾಸ್ ಬುಕ್ ಮಾದರಿ ಮತ್ತು ಇ-ಮಾದರಿಯನ್ನು ಬಳಸುವ ಆಯ್ಕೆಗಳನ್ನು ಹೊಂದಿರುತ್ತಾರೆ.
ಅದಾಗ್ಯೂ, ಯಾವುದೇ ಹಂತದಲ್ಲೂ ಈ ಕ್ರಮವನ್ನು ಬದಲಾಯಿಸಬಹುದಾಗಿದೆ.

KVP or NSC ವರ್ಗಾವಣೆ

KVP or NSC ವರ್ಗಾವಣೆ

ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ KVP or NSC ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ನಿರ್ದಿಷ್ಟವಾದ ಪೋಸ್ಟ್ ಆಫೀಸ್ ಅಥವಾ ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ ಪಾಸ್ ಬುಕ್ ಮತ್ತು ಇನ್ನೀತರ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ.

ಪೂರ್ವ ಮುದ್ರಿತ(Pre-printed) NSC and KVP

ಪೂರ್ವ ಮುದ್ರಿತ(Pre-printed) NSC and KVP

ಪೂರ್ವ ಮುದ್ರಿತ(ಹಿಂದಿನ) NSC and KVP ಗಳನ್ನು ಕಳೆದುಕೊಂಡಾಗ ಕಳವಳಗೊಳ್ಳಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಪಾಸ್ಬುಕ್ ಮೂಲಕ ವ್ಯವಹರಿಸಬಹುದಾಗಿದೆ.

Read more about: nsc kvp bank
English summary

Kissan Vikas Patra, NSC Now In Electronic Mode; What To Do With Certificates?

Kisan Vikas Patra (KVP) and National Savings Certificate (NSC) are popular post office schemes which will now be issued in electronic form. As of now, KVP certificates have denominations from Rs 1,000 to Rs 50,000. KVP can be purchased from any Departmental Post office or banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X