For Quick Alerts
ALLOW NOTIFICATIONS  
For Daily Alerts

ಮೊಬೈಲ್/ನೆಟ್ ಬ್ಯಾಂಕಿಂಗ್: 10 ಅಪಾಯಗಳಿವೆ ಮೋಸ ಹೋಗದಿರಿ

By Siddu Thorat
|

ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಇತ್ತಿಚಿನ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಏಕೆಂದರೆ ಬ್ಯಾಂಕುಗಳಿಗೆ ತೆರಳಿ ವ್ಯವಹಾರ ಮಾಡುವ ಸಮಯವಾಗಲಿ ಅಥವಾ ವ್ಯವದಾನವಾಗಲಿ ಇಲ್ಲ. ಎಲ್ಲರೂ ಒತ್ತಡದ ಹಾಗೂ ಜಂಜಾಟದ ಬದುಕಿನಲ್ಲಿ ಸಾಗುತ್ತಿರುವಾಗ ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಒಂದು ಉತ್ತಮ ಆಯ್ಕೆ ಎಂದು ಅನಿಸದಿರದು.

ಹೀಗಾಗಿ ಭಾರತದ ಅನೇಕ ಬ್ಯಾಂಕುಗಳು ಮೊಬೈಲ್ ಬ್ಯಾಂಕಿಂಗ್ ಅವಕಾಶವನ್ನು ಘೋಷಿಸಿವೆ. ಬ್ಯಾಂಕಿಂಗ್ ಆಫ್ ಗಳನ್ನು ಹಣಕಾಸು ವ್ಯವಹಾರಗಳಿಗಾಗಿ ಬಳಸಬಹುದಾಗಿದ್ದು, ಬಿಲ್ ಪಾವತಿಸುವುದು, ಫಂಡ್ ವರ್ಗಾವಣೆ, ಶಾಪಿಂಗ್ ಇತ್ಯಾದಿ ಉಪಯೋಗಗಳನ್ನು ಪಡೆಯಬಹುದು.

ಆದರೆ ಮೊಬೈಲ್ ಬ್ಯಾಂಕಿಂಗ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಗ್ರಾಹಕರಿಗೆ ಏನೆಲ್ಲಾ ತೊಂದರೆ, ನಷ್ಟಗಳು ಆಗಬಹುದು ಎಂಬುದರ ಬಗ್ಗೆಯೂ ನಮ್ಮಲ್ಲಿ ಅರಿವು ಇರಬೇಕಾಗುತ್ತದೆ. ಇಲ್ಲದಿದ್ದರೆ ವಂಚಕರಿಂದ ನಷ್ಟ ತಪ್ಪಿದಲ್ಲ. ಮೊಬೈಲ್ ಬ್ಯಾಂಕಿಂಗ್ ಹಣಕಾಸು ವ್ಯವಹಾರದ ಸಂದರ್ಭದಲ್ಲಿ ಆಗಬಹುದಾದ 10 ಅಪಾಯಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ ನೋಡಿ...

ಮೊಬೈಲ್ ಬ್ಯಾಂಕಿಂಗ್ ತಪ್ಪು ಸಂಖ್ಯೆ

ಮೊಬೈಲ್ ಬ್ಯಾಂಕಿಂಗ್ ತಪ್ಪು ಸಂಖ್ಯೆ

ಮೊಬೈಲ್ ಬ್ಯಾಂಕಿಂಗ್ ವ್ಯವಹಾರದ ವೇಳೆಯಲ್ಲಿ ತಪ್ಪು ಸಂಖ್ಯೆ ಬಳಸಿದಲ್ಲಿ ಮೊಬೈಲ್ ಬಳಸದ ವ್ಯಕ್ತಿಗಳು ಅಥವಾ ಹಿರಿಯ ನಾಗರಿಕರು ಸಹ ಸುಲಭವಾಗಿ ಬಲೆಗೆ ಬಿಳಬಹುದು.

ಇದರ ದುರುಪಯೋಗ ಪಡೆಯಲು ವಂಚನೆಕಾರರು ತಮ್ಮ ನಂಬರನ್ನು ಬ್ಯಾಂಕ್ ಖಾತೆಗೆ ಲಗತ್ತಿಸಿ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಬಹುದು. ಇದರ ಬಗ್ಗೆ ಬ್ಯಾಂಕು ಗ್ರಾಹಕರಿಗೆ ಯಾವುದೇ ಅರಿವು ಇರುವುದಿಲ್ಲ ಅಥವಾ ಅಲ್ಲದೇ ಯಾವುದೇ ಸೂಚನೆ ಕೂಡ ಬರುವುದಿಲ್ಲ.

ನಕಲಿ ಮತ್ತು ಅಸ್ತಿತ್ವದಲ್ಲಿರದ ಬಳಕೆದಾರರು

ನಕಲಿ ಮತ್ತು ಅಸ್ತಿತ್ವದಲ್ಲಿರದ ಬಳಕೆದಾರರು

ಬ್ಯಾಂಕು ವ್ಯವಸ್ಥೆಯನ್ನು ಒಗ್ಗೂಡಿಸುವ ಮತ್ತು ಉತ್ತಮಗೊಳಿಸುವ ಸಲುವಾಗಿ ಮೊಬೈಲ್ ಅಪ್ಲಿಕೇಶನ್ ವಿನ್ಯಾಸ ಮಾಡಲು ಪ್ರತಿಯೊಂದು ಬ್ಯಾಂಕುಗಳು ಮಾರಾಟಗಾರರನ್ನು/ವಿನ್ಯಾಸಗಾರರನ್ನು ನೇಮಕ ಮಾಡುತ್ತದೆ.
ಆದರೆ ಆ ಮಾರಾಟಗಾರ/ವಿನ್ಯಾಸಗಾರ ಈ ಅವಕಾಶವನ್ನು ದುರುಪಯೋಗ ಪಡಿಸಿ ಎರಡು ಅನಧಿಕೃತ ಬಳಕೆದಾರರನ್ನು ಸೃಷ್ಟಿ ಮಾಡುವ ಸಾಧ್ಯತೆ ಇರುವುದರಿಂದ ಇನ್ನೊಬ್ಬರ ಖಾತೆಯ ವ್ಯವಹಾರ ಪರಿಶೀಲಿಸಲು ಮತ್ತು ದುರುಪಯೋಗ ಪಡಿಸಲು ಸಾಧ್ಯತೆ ಇರುತ್ತದೆ. ಅಲ್ಲದೇ ಹಣವನ್ನು ಒಂದು ಬ್ಯಾಂಕಿನಿಂದ ತನ್ನ ಸಹವರ್ತಿಗಳ ಬ್ಯಾಂಕುಗಳಿಗೆ/ಖಾತೆಗಳಿಗೆ ವರ್ಗಾವಣೆ ಸಾಧ್ಯತೆ ಇರುತ್ತದೆ.

ಮಾಲ್ವೇರ್

ಮಾಲ್ವೇರ್

ಮೊಬೈಲ್ ಬ್ಯಾಂಕಿಂಗ್ ಬಳಕೆದಾರರು ಹೆಚ್ಚಾಗುತ್ತಿರುವುದರಿಂದ ಮಾಲ್ವೇರ್ ಮೂಲಕ ದಾಳಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಮಾಲ್ವೇರ್ ಒಂದು ತಂತ್ರಾಂಶವಾಗಿದ್ದು, ಇದು ಕಂಪ್ಯೂಟರ್ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ. ಹಾಗೂ ನಿರಂತರವಾಗಿ ಅಡ್ಡಿ ಪಡಿಸುತ್ತದೆ.

ಅಂಕಿಅಂಶ(ಡೇಟಾ) ಕದಿಯುವಿಕೆ

ಅಂಕಿಅಂಶ(ಡೇಟಾ) ಕದಿಯುವಿಕೆ

ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಪ್ರಯೋಜನಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಅಂಕಿಅಂಶ(ಡೇಟಾ) ಕದಿಯುವುದನ್ನು ಕಾಣಬಹುದು. ಇದರಿಂದಾಗಿ ಮೊಬೈಲ್ ಬ್ಯಾಂಕಿಂಗ್ ಸಂದರ್ಭದಲ್ಲೂ ನಿಮ್ಮ ಅಂಕಿಅಂಶ(ಡೇಟಾ) ಬಗ್ಗೆ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಸಿಮ್ ಸ್ವಾಪ್

ಸಿಮ್ ಸ್ವಾಪ್

ಸಿಮ್ ಸ್ವಾಪ್ ಅಂದರೆ ಹೊಸ ಸಿಮ್ ಕಾರ್ಡ್ ನೊಂದಿಗೆ ಹಳೆಯ ಸಿಮ್ ಬದಲಾಯಿಸುವುದು. ಒಂದು ವೇಳೆ ಹಳೆಯ ಸಿಮ್ ಕಳೆದು ಹೋದಲ್ಲಿ, ಹಾಳಾದಲ್ಲಿ ಅಥವಾ ಬೇರೆ ಗಾತ್ರದ ಸಿಮ್ ಬೇಕಾದ ಸಂದರ್ಭದಲ್ಲಿ ಸಿಮ್ ಸ್ವಾಪ್ ಸಂಭವ ಇರುತ್ತದೆ.
ಗ್ರಾಹಕರ ಮೊಬೈಲ್ ಬ್ಯಾಂಕಿಂಗ್ ಸಂಖ್ಯೆಯನ್ನು ಬಳಸಿಕೊಂಡು ವಂಚನೆಕಾರರು ಮೋಸ ಮಾಡುವುದರಿಂದ ಗ್ರಾಹಕರು ಬಲಿಪಶುವಾಗಬೇಕಾಗುತ್ತದೆ.

ನಕಲಿ ಅಥವಾ ಒಂದೇ ತೆರನಾದ ಅಪ್ಲಿಕೇಶನ್

ನಕಲಿ ಅಥವಾ ಒಂದೇ ತೆರನಾದ ಅಪ್ಲಿಕೇಶನ್

ನಕಲಿ ಅಥವಾ ಒಂದೇ ತೆರನಾದ ಅಪ್ಲಿಕೇಶನ್ ಗಳು ಪ್ರತಿಯೊಬ್ಬರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದೇ ತೆರನಾದ ಅಪ್ಲಿಕೇಶನ್ ಗಳನ್ನು ಸೃಷ್ಟಿಸಿ ಇನ್ನೊಬ್ಬರ ಮಾಹಿತಿಯನ್ನು ಕದಿಯುವುದು ಸಾಮಾನ್ಯವಾಗಿದೆ. ಗ್ರಾಹಕರು ನೀಡುವ ಗೌಪ್ಯ ಮಾಹಿತಿಯನ್ನು ಕದ್ದು ದುರುಪಯೋಗ ಮಾಡಿದ ಅನೇಕ ಘಟನೆಗಳು ನಮ್ಮ ಮುಂದಿವೆ.

ಮನಿ ಲಾಂಡರಿಂಗ್

ಮನಿ ಲಾಂಡರಿಂಗ್

ಬ್ಯಾಂಕು ಖಾತೆಯಿಂದ ಅಥವಾ ಬ್ಯಾಂಕು ಖಾತೆಗೆ ಮೊಬೈಲ್ ನಿಂದ ಹಣವನ್ನು ವರ್ಗಾವಣೆ ಮಾಡುವುದು ಈಗ ಸಾಧ್ಯವಿದೆ.
ಹೀಗಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ನಗದು ಹಣವನ್ನು ಮತ್ತು ಬೇರೆ ಬೇರೆ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಂದ ಹಣವನ್ನು ವಂಚಕರು ವರ್ಗಾವಣೆ ಮಾಡುವುದನ್ನು ಮನಿ ಲಾಂಡರಿಂಗ್ ಎನ್ನಲಾಗುತ್ತದೆ. ಹೀಗಾಗಿ ಮನಿ ಲಾಂಡರಿಂಗ್ ಬಗ್ಗೆ ತುಂಬಾ ಜಾಗರೂಕರಾಗಿರಬೇಕು ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಗ್ರಾಹಕರ ಮೊಬೈಲ್ ವ್ಯಾಲೆಟ್ ನಿಂದ ಅನಧಿಕೃತ ಕಡಿತ

ಗ್ರಾಹಕರ ಮೊಬೈಲ್ ವ್ಯಾಲೆಟ್ ನಿಂದ ಅನಧಿಕೃತ ಕಡಿತ

ಮೊಬೈಲ್ ವ್ಯಾಲೆಟ್ ಸೇವೆ ಒದಗಿಸುವ ನೌಕರರು/ಮಾರಾಟಗಾರರು ಗ್ರಾಹಕರು ತಮ್ಮ ಮೊಬೈಲ್ ವ್ಯಾಲೆಟ್ ನಲ್ಲಿ ಇಟ್ಟಿರುವ ಮೊತ್ತವನ್ನು ಯಾವುದೇ ಅನುಮತಿಯಿಲ್ಲದೆ ಹಾಗೂ ತಿಳಿಯದಂತೆ ಅನಧಿಕೃತವಾಗಿ ಕಡಿತ ಮಾಡುತ್ತಾರೆ. ಇದರಿಂದಾಗಿ ಗ್ರಾಹಕರು ಮೊಬೈಲ್ ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸಂದರ್ಭದಲ್ಲಿ ಮೋಸ ಹೋಗಬೇಕಾಗುತ್ತದೆ.

ವ್ಯಾಪಾರಿಗಳ ನಂಬಿಕೆ ಉಳಿಸಿಕೊಳ್ಳುವಲ್ಲಿ ವೈಫಲ್ಯ

ವ್ಯಾಪಾರಿಗಳ ನಂಬಿಕೆ ಉಳಿಸಿಕೊಳ್ಳುವಲ್ಲಿ ವೈಫಲ್ಯ

ಸೇವೆಯನ್ನು ಒದಗಿಸುವ ವ್ಯಕ್ತಿ ವಂಚಕನಾಗಿದ್ದರೆ ವ್ಯಾಪಾರಸ್ಥರಿಗೆ ನಷ್ಟ ಖಂಡಿತ. ಸರಕು ಮತ್ತು ಸೇವೆಗಳಿಗಾಗಿ ಗ್ರಾಹಕರಿಂದ ಪಾವತಿಸಲ್ಪಡುವ ಹಣ ಇಂತಹ ವಂಚಕರು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ವ್ಯಾಪಾರಿಗಳ ಅಥವಾ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವಲ್ಲಿ ಬ್ಯಾಂಕುಗಳು/ಕಂಪನಿಗಳು ವೈಫಲ್ಯ ಅನುಭವಿಸುತ್ತವೆ. ನಿಯಮಿತವಾಗಿ ನಿರ್ಧಿಷ್ಟ ಪ್ರಮಾಣದ ನಗದು ಕನಿಷ್ಟ ವ್ಯವಹಾರ ಶುಲ್ಕದ ರೂಪದಲ್ಲಿ ಗ್ರಾಹಕರಿಂದ ಕಡಿತವಾಗುತ್ತಲೇ ಇರುತ್ತದೆ.

ಸ್ವಯಂ ಲಾಗ್ ಆಫ್ ಆಗುವ ಸೌಲಭ್ಯ ಇಲ್ಲ

ಸ್ವಯಂ ಲಾಗ್ ಆಫ್ ಆಗುವ ಸೌಲಭ್ಯ ಇಲ್ಲ

ಸಾಮಾನ್ಯವಾಗಿ ವ್ಯಕ್ತಿಗಳು ತಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ತೆರೆದು ಲಭ್ಯವಿರುವ ಸೇವೆಗಳ ಬಗ್ಗೆ ತಿಳಿದು ಸರಕು-ಸೇವೆಗಳನ್ನು ಖರೀದಿಸಲು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಅಪ್ಲಿಕೇಶನ್ ಮುಚ್ಚಲು ಮರೆಯಬಹುದು.
ಅಂತಹ ಸಂದರ್ಭದಲ್ಲಿ ಮೊಬೈಲ್ ಕಳೆದು ಹೋದಲ್ಲಿ ಅಥವಾ ಯಾರಾದರೂ ಕದ್ದುಕೊಂಡರೆ ವಂಚನೆಗಾರರು ಅಪ್ಲಿಕೇಶನ್ ತೆರೆದು ಅದರಲ್ಲಿ ಉಳಿದಿರುವ ಮೊತ್ತವನ್ನು ದುರುಪಯೋಗ ಪಡಿಸಬಹುದು.

English summary

10 Big Risks Involved With Mobile Banking, Mobile Wallet

In India, banking on mobile can be done through mobile banking and mobile wallets, with more facilities offered to customers the chances of frauds tend to increase. Most of the banks in India offer mobile banking and banking apps for financial transactions such as bill payments, fund transfer, shopping etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X