For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಪಡೆಯುವ ಮುನ್ನ 11 ಸಂಗತಿ ತಪ್ಪದೆ ನೋಡಿ

ಮೊದಲ ಬಾರಿ ಗೃಹ ಸಾಲ ಪಡೆಯುವವರು ಅನೇಕ ಅಂಶಗಳ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಸಾಲದ ಮೊತ್ತ, ಬಡ್ಡಿದರ, ಪ್ರತ್ಯೇಕ ಶುಲ್ಕ, ದಾಖಲಾತಿಗಳು ಮತ್ತು ಪ್ರಕ್ರಿಯೆ ಬಗ್ಗೆ ತಪ್ಪದೆ ಅರಿತುಕೊಳ್ಳಬೇಕಾಗುತ್ತದೆ.

By Siddu
|

ಇಂದಿನ ದಿನಗಳಲ್ಲಿ ಸಾಲ ಪಡೆಯುವುದು ಬಹಳ ಸುಲಭ ಪ್ರಕ್ರಿಯೆ ಎನ್ನುವುದು ಹಲವರ ಅಭಿಪ್ರಾಯ. ಇದು ಕೆಲವರಿಗೆ ಸುಲಭವಾದರೆ ಇನ್ನೂ ಕೆಲವರಿಗೆ ಕಷ್ಟ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

 

ಮೊದಲ ಬಾರಿ ಗೃಹ ಸಾಲ ಪಡೆಯುವವರು ಅನೇಕ ಅಂಶಗಳ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಸಾಲದ ಮೊತ್ತ, ಬಡ್ಡಿದರ, ಪ್ರತ್ಯೇಕ ಶುಲ್ಕ, ದಾಖಲಾತಿಗಳು ಮತ್ತು ಪ್ರಕ್ರಿಯೆ ಬಗ್ಗೆ ತಪ್ಪದೆ ಅರಿತುಕೊಳ್ಳಬೇಕಾಗುತ್ತದೆ. ಗೃಹ ಸಾಲ ಪಡೆಯುವ ಮುನ್ನ ಇಲ್ಲೊಮ್ಮೆ ನೋಡಿ

ಗೃಹ ಸಾಲ ಪಡೆಯುವ ಸಂದರ್ಭದಲ್ಲಿ ಆಗಬಹುದಾದ ತಪ್ಪುಗಳು ಮತ್ತು ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಅಂಶಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

1. ಮನೆ ಸಾಲ ಅರ್ಹತೆ

1. ಮನೆ ಸಾಲ ಅರ್ಹತೆ

ಸಾಲ ಪಡೆಯುವ ಗ್ರಾಹಕರ ಆದಾಯ, ಮರುಪಾವತಿ ಸಾಮರ್ಥ್ಯ, ಹೆಚ್ಚುವರಿ ಆದಾಯ, ವೆಚ್ಚಗಳು ಇತ್ಯಾದಿ ಮಾನದಂಡಗಳನ್ನು ಆಧರಿಸಿ ಬ್ಯಾಂಕುಗಳು ಸಾಲ ನೀಡುವ ಬಗ್ಗೆ ನಿರ್ಧರಿಸುತ್ತವೆ.
ಕೆಲ ಬ್ಯಾಂಕುಗಳು ಶೇ. 55-60ರಷ್ಟು ಸಾಲ ಮಾಸಿಕ ಆದಾಯದಲ್ಲಿ ವ್ಯಕ್ತಿ ಮರುಪಾವತಿಸುವ ಸಾಮರ್ಥ್ಯ ಹೊಂದಿದ್ದಾನೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತವೆ.
ಇನ್ನೂ ಕೆಲ ಬ್ಯಾಂಕುಗಳು ವ್ಯಕ್ತಿಯ ಆದಾಯಕ್ಕೆ ಅನುಗುಣವಾಗಿ ಇಎಂಐ(EMI) ಪಾವತಿ ಆಧಾರದಲ್ಲಿ ಸಾಲ ಕಟ್ಟುವ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ.

2. ಗೃಹ ಸಾಲದ ಮೊತ್ತ

2. ಗೃಹ ಸಾಲದ ಮೊತ್ತ

ಗೃಹ ಸಾಲದ ಮೊತ್ತ ಮುಖ್ಯವಾಗಿ ಸಾಲದ ಅವಧಿ ಮತ್ತು ಬಡ್ಡಿದರವನ್ನು ಅವಲಂಭಿಸಿರುತ್ತದೆ. ಜತೆಗೆ ವ್ಯಕ್ತಿಯ ಆದಾಯ, ಹೆಚ್ಚುವರಿ ಆದಾಯ, ಮಾಸಿಕ ಖರ್ಚುವೆಚ್ಚಗಳು ಗೃಹ ಸಾಲದ ಮೊತ್ತವನ್ನು ನಿರ್ಧರಿಸುತ್ತವೆ.

3. ಇಎಂಐ(EMI)
 

3. ಇಎಂಐ(EMI)

ಗೃಹ ಸಾಲ ಪಡೆಯುವ ಗ್ರಾಹಕರು ಇಎಂಐ ಬಗ್ಗೆ ಯಾವುದೇ ಗೊಂದಲ ಹೊಂದಿರಬಾರದು. ಗೃಹ ಸಾಲ ಇಎಂಐ(EMI) ಮೂಲಕ ಮರುಪಾವತಿಸುವಾಗ ಅಸಲು ಮತ್ತು ಬಡ್ಡಿದರ ಒಳಗೊಂಡಿರುತ್ತದೆ ಎಂಬುದನ್ನು ಗಮನಿಸಬೇಕು.
ಇಎಂಐ(EMI) ಆಧಾರದಲ್ಲಿ ಪ್ರತಿ ತಿಂಗಳು ನಿರ್ಧಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.

4. ಮೂಲಭೂತ ದಾಖಲಾತಿಗಳು

4. ಮೂಲಭೂತ ದಾಖಲಾತಿಗಳು

ಮನೆಗೆ ಸಂಬಂಧಿಸಿದ ಎಲ್ಲ ಕಾನೂನು ಬದ್ದ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಗುರುತಿನ ಚೀಟಿ, ನಿವಾಸದ ಪುರಾವೆ, ಇತ್ತಿಚಿನ ಸ್ಯಾಲರಿ ಸ್ಲಿಪ್, ಫಾರ್ಮ್ 16A, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್ ಮತ್ತು ಭಾವಚಿತ್ರಗಳನ್ನು ಒದಗಿಸಬೇಕಾಗುತ್ತದೆ.

5. ಬಡ್ಡಿದರ ಆಯ್ಕೆ

5. ಬಡ್ಡಿದರ ಆಯ್ಕೆ

ಬ್ಯಾಂಕುಗಳು ಸಾಮಾನ್ಯವಾಗಿ ಸ್ಥಿರ ದರ ಗೃಹ ಸಾಲ ಅಥವಾ ತೇಲುವ(ಬದಲಾಗುವ) ದರ ಗೃಹ ಸಾಲ ಆಯ್ಕೆಗಳನ್ನು ಹೊಂದಿರುತ್ತದೆ. ಸ್ಥಿರ ದರ ಗೃಹ ಸಾಲ ಸಂದರ್ಭದಲ್ಲಿ ಬಡ್ಡಿದರ ಸಂಪೂರ್ಣ ಅವಧಿಗೆ ಸ್ಥಿರವಾಗಿರುತ್ತದೆ. ತೇಲುವ ದರ ಗೃಹ ಸಾಲ ಪಡೆದಾಗ ಇಎಂಐ ಪಾವತಿ ಮಾರುಕಟ್ಟೆಯಲ್ಲಿನ ಬಡ್ಡಿದರದ ಬದಲಾವಣೆಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ.

6. ಶುಲ್ಕಗಳು

6. ಶುಲ್ಕಗಳು

ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವಾಗ ವಿವಿಧ ಶುಲ್ಕಗಳಿಗಾಗಿ ಸಲ್ಪ ಪ್ರಮಾಣದ ಮೊತ್ತವನ್ನು ತೆಗೆದಿರಿಸಬೇಕು. ಇದು ಪ್ರಕ್ರಿಯಾ ಶುಲ್ಕ, ವ್ಯವಸ್ಥಾಪಕ ಶುಲ್ಕ, ದಸ್ತಾವೇಜು ಶುಲ್ಕ, ತಡ ಪಾವತಿ ಶುಲ್ಕ(Late Payments), ಕಾನೂನು ಶುಲ್ಕ, ತಪಾಸಣಾ ಶುಲ್ಕಗಳನ್ನು ಒಳಗೊಂಡಿರುತ್ತದೆ.

7. ಡೌನ್ ಪೇಮೆಂಟ್

7. ಡೌನ್ ಪೇಮೆಂಟ್

ಬಿಲ್ಡರ್ ಗಳಿಗೆ ಕಟ್ಟಬೇಕಾದ ಮೊತ್ತವನ್ನು ಲೆಕ್ಕಾಚಾರದ ಆಧಾರದಲ್ಲಿ ಬದಿಗೆ ತೆಗೆದಿರಿಸುವುದು ಉತ್ತಮ. ಸಾಲದಾತರಿಗೆ ಅನುಗುಣವಾಗಿ ಶೇ. 20/30ರಷ್ಟು ಡೌನ್ ಪೇಮೆಂಟ್ ಕೇಳುವ ಸಾಧ್ಯತೆ ಇರುತ್ತದೆ.

8. ಸಹ ಅರ್ಜಿದಾರ

8. ಸಹ ಅರ್ಜಿದಾರ

ಮೂಲ ಅರ್ಜಿದಾರನೊಂದಿಗೆ ಗೃಹ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿ ಸಹ ಅರ್ಜಿದಾರನಾಗಿರುತ್ತಾನೆ. ಮೂಲ ಅರ್ಜಿದಾರ ಸಾಲ ತೀರಿಸಲು ವಿಫಲನಾದಲ್ಲಿ ಸಹ ಅರ್ಜಿದಾರ ಕೂಡ ಅಷ್ಟೇ ಜವಾಬ್ಧಾರಿ ಹೊಂದಿರುತ್ತಾನೆ.

9. ತೆರಿಗೆ ಲಾಭ

9. ತೆರಿಗೆ ಲಾಭ

ಭಾರತದಲ್ಲಿ ಗೃಹ ಸಾಲದ ಮೇಲೆ ತೆರಿಗೆ ಉಳಿಸುವುದು ಸಾಧ್ಯವಿದೆ. ಇತ್ತಿಚಿನ ಬಜೆಟ್ ಗಳಲ್ಲಿ ಬಡ್ಡಿದರದ ಮೇಲೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಸಂಗತಿ ಉಲ್ಲೇಖಿಸಲಾಗಿದೆ.

11. ಬ್ಯಾಂಕುಗಳ ಬಗ್ಗೆ ತಿಳಿದುಕೊಳ್ಳಿ

11. ಬ್ಯಾಂಕುಗಳ ಬಗ್ಗೆ ತಿಳಿದುಕೊಳ್ಳಿ

ಸಾಲ ತೆಗೆದುಕೊಳ್ಳಬೇಕೆಂದು ಬಯಸಿರುವ ಬ್ಯಾಂಕಿನ ಸೇವೆಯ ಬಗ್ಗೆ ಈಗಾಗಲೇ ಸಾಲ ತೆಗೆದುಕೊಂಡಿರುವವರಿಂದ ಮಾಹಿತಿ ಪಡೆದುಕೊಳ್ಳಬೇಕು. ಬಡ್ಡಿದರದ ಆಧಾರದ ಮೇಲೆ ಬ್ಯಾಂಕನ್ನು ಯಾವತ್ತು ಆಯ್ಕೆ ಮಾಡಬಾರದು. ಬದಲಾಗಿ ಸ್ವತ್ತು ಸ್ವಾಧೀನ ಶುಲ್ಕಗಳು, ಕಾನೂನು ಶುಲ್ಕಗಳು, ಪ್ರಕ್ರಿಯಾ ಶುಲ್ಕ ಮತ್ತು ಇನ್ನೀತರ ವಿಚಾರಗಳನ್ನು ತಿಳಿದುಕೊಂಡು ಸಾಲ ಪಡೆಯಲು ಮುಂದಾಗಿ.

English summary

Things To Know Before Availing Home Loan

Availing a home loan can be a tedious process for many, getting a loan approved is another task. Individuals who are availing home loan for the first time should be aware of a lot of things such as loan amount, best interest rate, different fees, documentation, and procedure etc.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X