For Quick Alerts
ALLOW NOTIFICATIONS  
For Daily Alerts

ಏನಿದು ಸೂಪರ್ ಸೇವಿಂಗ್ಸ್ ಅಕೌಂಟ್? ಪ್ರಯೋಜನಗಳೇನು?

By Siddu
|

ಉಳಿತಾಯ ಖಾತೆ ಹೆಚ್ಚಿನವರ ಜೀವನದಲ್ಲಿ ಒಂದು ಪ್ರಮುಖ ಘಟ್ಟ ಆಗಿರುತ್ತದೆ. ಇದರರ್ಥ ನಾವು ಸ್ವಂತ ಆದಾಯ ಹೊಂದಿದ್ದು, ಅದನ್ನು ಜವಾಬ್ಧಾರಿಯುತವಾಗಿ ನಿರ್ವಹಿಸುವ ಅಗತ್ಯವಿರುತ್ತದೆ.

ಆದರೆ ನಿಮ್ಮ ಆದಾಯದ ಮೇಲೆ 4% ಬಡ್ಡಿದರ ಅಥವಾ ಪ್ರತಿಫಲ ಪಡೆಯುತ್ತಿದ್ದರೆ ಅದು ಉತ್ತಮವಾದ ಹಣ ನಿರ್ವಹಣೆ ಎನ್ನಲಾಗುವುದಿಲ್ಲ. ಉಳಿತಾಯ ದರಕ್ಕಿಂತ ಹಣದುಬ್ಬರ ದರ ಹೆಚ್ಚಿದ್ದರೆ ಕ್ರಮೇಣವಾಗಿ ಉಳಿತಾಯ ಕಡಿಮೆಯಾಗುತ್ತದೆ. ಭಾರತದಲ್ಲಿನ 6 ಉತ್ತಮ ಸಂಬಳ ಖಾತೆಗಳು

ಹಾಗಿದ್ದರೆ ನಿಮ್ಮ ಆಯ್ಕೆಗಳೇನು?
 

ಹಾಗಿದ್ದರೆ ನಿಮ್ಮ ಆಯ್ಕೆಗಳೇನು?

ಕೆಲ ದಿನಗಳ ಹಿಂದೆ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಆರ್ಬಿಐ ಪರಿಷ್ಕರಿಸಿದೆ. ಇದೀಗ ಮಾರುಕಟ್ಟೆಯಲ್ಲಿ ತುಂಬಾ ಸ್ಪರ್ಧೆ ಇದ್ದು, ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲೆ ಉತ್ತಮ ಬಡ್ಡಿದರ ನೀಡಲಿವೆ. ಆದರೆ ನಿಜವಾಗಿಯೂ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮವಾದ ಬಡ್ಡಿದರ ನೀಡುತ್ತಿವೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಫಿಕ್ಸೆಡ್ ಡಿಪಾಸಿಟ್ ಮೇಲೂ ಉತ್ತಮ ಬಡ್ಡಿದರ ಸಿಗುತ್ತಿಲ್ಲ ಎನ್ನುವುದು ಕೆಲವರ ಕೊರಗು.

ಹಾಗಿದ್ದರೆ ಹೆಚ್ಚಿನ ಪ್ರತಿಫಲ ಪಡೆಯುವುದು ಹೇಗೆ? ಎಲ್ಲಿ ಹೂಡಿಕೆ ಮಾಡುವುದು? ಇತ್ಯಾದಿ ಸಮಸ್ಯೆಗಳಿಗೆ ಸೂಪರ್ ಸೇವಿಂಗ್ಸ್ ಅಕೌಂಟ್ ಉತ್ತಮ ಆಯ್ಕೆ ಎನ್ನಬಹುದು.

ಸೂಪರ್ ಉಳಿತಾಯ ಖಾತೆಯ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ...

1. ವಾರ್ಷಿಕವಾಗಿ 8.65% ರಿಟರ್ನ್ಸ್ ಪಡೆಯಬಹುದೆ?

1. ವಾರ್ಷಿಕವಾಗಿ 8.65% ರಿಟರ್ನ್ಸ್ ಪಡೆಯಬಹುದೆ?

ಸೂಪರ್ ಸೇವಿಂಗ್ಸ್ ಅಕೌಂಟ್ ಫಂಡ್ಸ್ ಇಂಡಿಯ ಬಿಡುಗಡೆ ಮಾಡಿದ್ದು, ಈ ಉತ್ಪನ್ನ ಹೊಸತನದಿಂದ ಕೂಡಿದೆ.

ಬ್ಯಾಮಕು ಉಳಿತಾಯ ಖಾತೆಗಳಿಗೆ ಹೋಲಿಸಿದರೆ ಯಾವುದೇ ರಾಜಿಯಾಗದೆ ಅತಿ ಸಂಭವನೀಯ ಆದಾಯ ಗಳಿಸಬಹುದಾಗಿದೆ. ಈ ಖಾತೆ ನಿಮ್ಮ ಹಣವನ್ನು ಲಿಕ್ವಿಡ್ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ ಸಂಭಾವ್ಯವಾಗಿ ಹೆಚ್ಚಿನ ರಿಟರ್ನ್ ಪಡೆಯುವಂತೆ ಮಾಡುತ್ತದೆ. ವಾರ್ಷಿಕವಾಗಿ ಶೇ. 8.65ರಷ್ಟು(7ನೇ ಜನೆವರಿ 2017ಕ್ಕೆ ಅನುಗುಣವಾಗಿ) ಪ್ರತಿಫಲ ನೀಡಲಿದೆ. ಇದು ಸರಾಸರಿ ಉಳಿತಾಯ ಖಾತೆಗಳಿಗಿಂತ ಎರಡು ಪಟ್ಟು ಹೆಚ್ಚು.

2. ಸುರಕ್ಷಿತ, ಸ್ಮಾರ್ಟ್ ಮತ್ತು ಅನುಕೂಲಕರ

2. ಸುರಕ್ಷಿತ, ಸ್ಮಾರ್ಟ್ ಮತ್ತು ಅನುಕೂಲಕರ

ಲಿಕ್ವಿಡ್ ಫಂಡ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾರಿಯುವುದು ಮುಖ್ಯವಾಗಿರುತ್ತದೆ. ಹಣವನ್ನು ಸುರಕ್ಷಿತವಾಗಿಡುವುದು ಲಿಕ್ವಿಡ್ ಫಂಡ್ ನ ಮೂಲ ಉದ್ದೇಶವಾಗಿರುತ್ತದೆ. ಹೀಗಾಗಿ ಲಿಕ್ವಿಡ್ ಫಂಡ್ ಸುರಕ್ಷಿತ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು. ಉದಾಹರಣೆಗೆ ಖಜಾನೆ ಮಸೂದೆಗಳು, ಅಲ್ಪಾವಧಿಯ ಸರ್ಕಾರಿ ಬಾಂಡುಗಳು ಕಡಿಮೆ ಅಪಾಯ ಹೊಂದಿದ್ದು, ಹೆಚ್ಚು ಪ್ರತಿಫಲ ಲಭ್ಯವಿರುತ್ತದೆ. (ಮೆಚುರಿಟಿ ಅವಧಿ 91 ದಿನಗಳಿಗಿಂತ ಕಡಿಮೆ)

ಸೂಪರ್ ಸೇವಿಂಗ್ಸ್ ಅಕೌಂಟ್ ಇದೆಲ್ಲವನ್ನು ಪರಿಹರಿಸುತ್ತದೆ. ಇದು ಲಿಕ್ವಿಡ್ ಫಂಡ್ ಪ್ರಯೋಜನಗಳನ್ನು ಒದಗಿಸುತ್ತದೆ. ಸೂಪರ್ ಸೇವಿಂಗ್ಸ್ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಬಹುದು. ಇದಕ್ಕಾಗಿ ಹೆಚ್ಚು ಕಾಯಬೇಕಾದ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಫಂಡ್ ವರ್ಗಾವಣೆ ಮಾಡಬಹುದು.

3. ಪ್ರಯೋಜನಗಳೇನು?
 

3. ಪ್ರಯೋಜನಗಳೇನು?

* ಸೂಪರ್ ಸೇವಿಂಗ್ಸ್ ಅಕೌಂಟ್ ಫಂಡ್ ಗಳನ್ನು ಸುಲಭವಾಗಿ ಪ್ರವೇಶಿಸಬಹುದು.

* ಇದನ್ನು ಉಳಿತಾಯ ಖಾತೆಗಳಂತೆಯೇ ಬಳಕೆ ಮಾಡಬಹುದು.

* ಉಚಿತವಾಗಿ ಡೆಬಿಟ್ ಕಾರ್ಡ್ ಪಡೆಯಬಹುದು.

* ಶಾಪಿಂಗ್ ಮಾಡಲು ಡೆಬಿಟ್ ಕಾರ್ಡ್ ಬಳಸಬಹುದು.

* ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಬಹುದು.

* ಲೈಫ್ ಇನ್ವೆಸ್ಟ್ಮೆಂಟ್ ಅಕೌಂಟ್ ಉಚಿತವಾಗಿ ಪಡೆಯಬಹುದು. ಫಂಡ್ಸ್ ಇಂಡಿಯ ಉತ್ಪನ್ನಗಳಾದ ಮ್ಯೂಚುವಲ್ ಫಂಡ್ಸ್, ಇಕ್ವಿಟೀಸ್, ಕಾರ್ಪೋರೇಟ್ ಎಫ್ಡಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಬಹುದು.

4. ಕನಿಷ್ಠ ಬ್ಯಾಲೆನ್ಸ್ ಮತ್ತು ಹೆಚ್ಚುವರಿ ಶುಲ್ಕಗಳಿಲ್ಲ

4. ಕನಿಷ್ಠ ಬ್ಯಾಲೆನ್ಸ್ ಮತ್ತು ಹೆಚ್ಚುವರಿ ಶುಲ್ಕಗಳಿಲ್ಲ

ಕೆಲ ಬ್ಯಾಂಕುಗಳ ಉಳಿತಾಯ ಖಾತೆಗಳ ವ್ಯವಹಾರ ಸಂದರ್ಭದಲ್ಲಿ ಶುಲ್ಕ, ದಂಡ, ತೆರಿಗೆಗಳನ್ನು ವಿಧಿಸಲಾಗುತ್ತದೆ. ಆದರೆ ಸೂಪರ್ ಸೇವಿಂಗ್ಸ್ ಅಕೌಂಟ್ ಇನ್ನು ಸುಲಭ. ಖಾತೆ ತೆರೆಯಲು ಶುಲ್ಕಗಳಿರುವುದಿಲ್ಲ. ಕನಿಷ್ಠ ಬ್ಯಾಲೆನ್ಸ್ ಕೇವಲ ರೂ. 500 ಆಗಿರುತ್ತದೆ. ಬೇರೆ ಉಳಿತಾಯ ಖಾತೆಗಳಿಗೆ ಹೋಲಿಸಿದರೆ ಇದು ಅತ್ಯುತ್ತಮ ಎನ್ನಬಹುದು. ಏಕೆಂದರೆ ಬೇರೆ ಖಾತೆಗಳಲ್ಲಿ ಇಡಬೇಕಾದ ಮಿನಿಮಮ್ ಬ್ಯಾಲೆನ್ಸ್ ಹೆಚ್ಚು ಹಾಗೂ ಬಡ್ಡಿದರ ಕೂಡ ಕಡಿಮೆ.

5. ಸೂಪರ್ ಸೇವಿಂಗ್ಸ್ ಅಕೌಂಟ್ ತೆರೆಯುವುದು ಸುಲಭ

5. ಸೂಪರ್ ಸೇವಿಂಗ್ಸ್ ಅಕೌಂಟ್ ತೆರೆಯುವುದು ಸುಲಭ

ಸೂಪರ್ ಸೇವಿಂಗ್ಸ್ ಖಾತೆ ತೆರೆಯಲು ಎಲ್ಲರೂ ಅರ್ಹರಾಗಿರುತ್ತಾರೆ. ಈ ಖಾತೆಗೆ ಫಂಡ್ ವರ್ಗಾವಣೆ ಮಾಡಲು ಎಲ್ಲರೂ ಬ್ಯಾಂಕು ಖಾತೆಗಳನ್ನು ಹೊಂದಿರಬೇಕು. ಇಲ್ಲಿ ಕ್ಲಿಕ್ ಮಾಡಿ(ನೋಂದಣಿಗಾಗಿ ಇಲ್ಲಿರುವ ಮೂರು ಸರಳ ವಿಧಾನಗಳನ್ನು ಅನುಸರಿಸಿ). ಇದು ಕಾಗದರಹಿತವಾಗಿದ್ದು, ಯಾವುದೇ ವ್ಯಾಜ್ಯಗಳಿಗೆ ಅವಕಾಶವಿರುವುದಿಲ್ಲ. ಕೆಲವೇ ನಿಮಿಷಗಳಲ್ಲಿ ನಿಮ್ಮ ಆಧಾರ್ ನಂಬರ್ ನೊಂದಿಗೆ ಖಾತೆಯನ್ನು ಪ್ರಾರಂಭಿಸಬಹುದು.

English summary

5 reasons you need the Super Savings Account

The Super Savings Account launched by FundsIndia is an innovative product designed to bring you the best of both worlds. The highest possible returns on your savings, without compromising on the liquidity of a bank savings account.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more