For Quick Alerts
ALLOW NOTIFICATIONS  
For Daily Alerts

ರೂ. 1 ಲಕ್ಷ 21 ವರ್ಷಗಳಲ್ಲಿ 1 ಕೋಟಿ ಆಗುತ್ತದೆ ಹೇಗೆ? ಇಲ್ಲಿ ನೋಡಿ...

ಉದ್ಯಮದಲ್ಲಿ ನಿವ್ವಳ ಆಸ್ತಿ ಮೌಲ್ಯದ(NAV) ಉನ್ನತ ಮಟ್ಟವನ್ನು ಸಾಧಿಸಿದ ಮೊದಲ ಫಂಡ್ ರಿಲಾಯನ್ಸ್ ಗ್ರೋತ್ ಫಂಡ್ ಆಗಿದೆ.

By Siddu
|

ರಿಲಾಯನ್ಸ್ ಸಂಸ್ಥೆ ಹಲವಾರು ಕ್ಷೇತ್ರಗಳಲ್ಲಿ ತನ್ನದೆ ಛಾಪನ್ನು ಮೂಡಿಸಿ ಗ್ರಾಹಕರ ಅಚ್ಚುಮೆಚ್ಚಿನ ಕಂಪನಿಗಳಲ್ಲಿ ಒಂದಾಗಿದೆ. ಷೇರುಪೇಟೆ, ಮ್ಯೂಚುವಲ್ ಫಂಡ್ ಇತ್ಯಾದಿಗಳಲ್ಲೂ ಮಹತ್ತರ ಮೈಲುಗಲ್ಲು ಸಾಧಿಸಿದೆ.

 

ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಓಪನ್ ಎಂಡೆಡ್ ಇಕ್ವಿಟಿ ಗ್ರೋತ್ ಸ್ಕೀಮ್ ನಲ್ಲಿ ರಿಲಾಯನ್ಸ್ ಗ್ರೋತ್ ಫಂಡ್ ನಿವ್ವಳ ಆಸ್ತಿ ಮೌಲ್ಯ ರೂ. 1,000 ಸಾಧಿಸಿದೆ. ಮ್ಯೂಚುವಲ್ ಫಂಡ್ ಎಂದರೇನು? ಅದರ ಪ್ರಕಾರಗಳ್ಯಾವವು?

ಮೊದಲ ಕಂಪನಿ

ಮೊದಲ ಕಂಪನಿ

ಉದ್ಯಮದಲ್ಲಿ ನಿವ್ವಳ ಆಸ್ತಿ ಮೌಲ್ಯದ(NAV) ಉನ್ನತ ಮಟ್ಟವನ್ನು ಸಾಧಿಸಿದ ಮೊದಲ ಫಂಡ್ ರಿಲಾಯನ್ಸ್ ಗ್ರೋತ್ ಫಂಡ್ ಆಗಿದೆ. ಇಲ್ಲಿಯವರೆಗೆ ಬೇರೆ ಯಾವ ಕಂಪನಿಯ ಫಂಡ್ ಈ ಸಾಧನೆ ಮಾಡಿಲ್ಲ. ಇದು ಕಳೆದ 21 ವರ್ಷಗಳ ಹಿಂದೆ ಅಕ್ಟೊಬರ್ 1995 ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಮ್ಯೂಚುವಲ್ ಫಂಡ್

21 ವರ್ಷಗಳಲ್ಲಿ 1 ಕೋಟಿ!

21 ವರ್ಷಗಳಲ್ಲಿ 1 ಕೋಟಿ!

21 ವರ್ಷಗಳ ಹಿಂದೆ ರಿಲಾಯನ್ಸ್ ಗ್ರೋತ್ ಫಂಡ್ ನಲ್ಲಿ ಹೂಡಿದ 1 ಲಕ್ಷ ರೂಪಾಯಿ ಇಂದು 1 ಕೋಟಿ ಮೌಲ್ಯ ಹೊಂದಿದೆ. ದೀರ್ಘಾವಧಿ ಮೌಲ್ಯ ಸೃಷ್ಟಿಗೆ ಮ್ಯೂಚುವಲ್ ಫಂಡ್ ಗಳಲ್ಲಿನ ಹೂಡಿಕೆ ಉತ್ತಮ ಆಯ್ಕೆ ಎಂದು ರಿಲಾಯನ್ಸ್ ಮ್ಯೂಚುವಲ್ ಫಂಡ್ ಸಿಇಒ ಸುದೀಪ್ ಸಿಕ್ಕಾ ಹೇಳಿದ್ದಾರೆ.

ರಿಲಯನ್ಸ್ ಗ್ರೋತ್ ಫಂಡ್ ಬಗ್ಗೆ
 

ರಿಲಯನ್ಸ್ ಗ್ರೋತ್ ಫಂಡ್ ಬಗ್ಗೆ

ಈಗ ರಿಲಯನ್ಸ್ ಗ್ರೋತ್ ಫಂಡ್ 1003.7582 ಮೌಲ್ಯ ಆಗಿದೆ. ಇದು ಮಿಡ್-ಕ್ಯಾಪ್ ಇಕ್ವಿಟಿಯ ವಿಭಾಗದಲ್ಲಿದೆ. ನಿಧಿಸಂಸ್ಥೆಯ ವೆಚ್ಚ ಅನುಪಾತ ಶೇ. ರಷ್ಟಿದೆ. ಈ ನಿಧಿ ಅಕ್ಟೊಬರ್ 8, 199ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಫಂಡ್ ಕನಿಷ್ಠ ಬಂಡವಾಳ ರೂ. 5 ಸಾವಿರದಿಂದ ಆರಂಭವಾಗುತ್ತದೆ.

ಫಂಡ್ ಬಂಡವಾಳ ಎಷ್ಟು?

ಫಂಡ್ ಬಂಡವಾಳ ಎಷ್ಟು?

ರಿಲಯನ್ಸ್ ಗ್ರೋತ್ ಫಂಡ್ ಅನೇಕ ವಲಯಗಳಲ್ಲಿ ಬಂಡವಾಳ ಹೊಂದಿದೆ.
ಬ್ಯಾಂಕಿಂಗ್(ಖಾಸಗಿ)12.66%, ವಿವಿಧ ವಲಯಗಳನ್ನು(ಡೈವರ್ಸಿಫೈಡ್)7.25%, ಐಟಿ ತಂತ್ರಾಂಶ 6.85%, ಅಗ್ರಿಕೆಮಿಕಲ್ಸ್ 5,97%, ಬ್ಯಾಂಕಿಂಗ್(ಸರ್ಕಾರ)5,79%, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(4.71%), ಹೆಚ್ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್(4.71%), ಮುತ್ತೂಟ್ ಫೈನಾನ್ಸ್ ಲಿಮಿಟೆಡ್(3.79%), ಐಸಿಐಸಿಐ ಬ್ಯಾಂಕ್ ಲಿಮಿಟೆಡ್(3.62%) ಹೀಗೆ ತನ್ನ ಬಂಡವಾಳದ ಪಾಲನ್ನು ಹೊಂದಿದೆ.

ಫಂಡ್ ಕಾಪರ್ಸ್ ಎಷ್ಟು?

ಫಂಡ್ ಕಾಪರ್ಸ್ ಎಷ್ಟು?

ರಿಲಯನ್ಸ್ ಗ್ರೋತ್ ಫಂಡ್ ಆರು ಲಕ್ಷಕ್ಕಿಂತ ಹೆಚ್ಚಿನ ಹೂಡಿಕೆದಾರರಿಂದ ರೂ. 5,000 ಕೋಟಿ ಕಾಪರ್ಸ್ ಹೊಂದಿದೆ. ಮಾರ್ಚ್ ತ್ರೈಮಾಸಿಕ ಫಲಿತಾಂಶಕ್ಕೆ ಅನುಗುಣವಾಗಿ ರಿಲಾಯನ್ಸ್ ಮ್ಯೂಚುವಲ್ ಫಂಡ್ ರೂ. 2,10,890 ಕೋಟಿ ಆಸ್ತಿ ಹೊಂದಿದೆ.( ಮ್ಯೂಚುವಲ್ ಫಂಡ್)

English summary

Rs. 1 Lakh In This Mutual Fund Turned Into Rs. 1 Crore In 21 Years

Reliance Capital Asset Management's open-ended equity growth scheme, Reliance Growth Fund, has achieved a net asset value (NAV) of Rs. 1,000. This is the first fund in the industry to achieve this NAV level. The fund was launched 21 years ago in October 1995.
Story first published: Wednesday, May 3, 2017, 11:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X